ಕಲಬುರಗಿ: ಜಿಲ್ಲೆಯಲ್ಲಿ ಪೊಲೀಸರು ಗಾಂಜಾ ಭೇಟೆ ಮುಂದುವರೆಸಿದ್ದು, ತೊಗರಿ ಬೆಳೆ ಮಧ್ಯೆ ಬೆಳೆದಿದ್ದ ಗಾಂಜಾ ಜಪ್ತಿ ಮಾಡಿದ್ದಾರೆ.
ಫರತಾಬಾದ ಪೊಲೀಸ್ ಠಾಣಾ ವ್ಯಾಪ್ತಿಯ ಹೇರೂರ ಬಿ. ಗ್ರಾಮದಲ್ಲಿ ಬೆಳೆದಿದ್ದ ಅಂದಾಜು ಒಂದು ಲಕ್ಷ ರೂ. ಮೌಲ್ಯದ 101 ಗಾಂಜಾ ಗಿಡ, 450 ಗಾಂಜಾ ಸಸಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣ ಸಂಬಂಧ ಗ್ರಾಮದ ಶಿವಪ್ಪ ಬಕಾರಿ ಹಾಗೂ ದೇವಿಂದ್ರಪ್ಪ ಬಕಾರಿ ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳು ತಮ್ಮ ಹೊಲದಲ್ಲಿನ ಹತ್ತಿ ಮತ್ತು ತೊಗರಿ ಬೆಳೆಗಳ ನಡುವೆ ಗಾಂಜಾ ಬೆಳೆದಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.