ETV Bharat / jagte-raho

ಚಿನ್ನದಾಸೆಗೆ ಮಾಲೀಕನ ಮಗನನ್ನೇ ಕೊಲೆ ಮಾಡಿರುವ ಯುವಕ: ಆರೋಪಿಗಳು ಅರೆಸ್ಟ್​ - two arrested for murder of jewelry shop owner son

ಸುರಪುರ ಪಟ್ಟಣದಲ್ಲಿ ಚಿನ್ನದಂಗಡಿ ಮಾಲೀಕನ ಪುತ್ರನನ್ನು ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಹುಣಸಗಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕೊಲೆ ಮಾಡಿದ ಇಬ್ಬರು ಆರೋಪಿಗಳು ಅರೆಸ್ಟ್​
ಕೊಲೆ ಮಾಡಿದ ಇಬ್ಬರು ಆರೋಪಿಗಳು ಅರೆಸ್ಟ್​
author img

By

Published : Jan 15, 2021, 8:57 AM IST

ಯಾದಗಿರಿ: ಚಿನ್ನದಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೇ ಮಾಲೀಕನ ಮಗನನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ನಡೆದಿದೆ.

ಕೊಲೆ ಮಾಡಿದ ಇಬ್ಬರು ಆರೋಪಿಗಳು ಅರೆಸ್ಟ್​

ಹುಣಸಗಿ ಪಟ್ಟಣದ ಧನಲಕ್ಷ್ಮಿ ಜುವೆಲ್ಲರ್ಸ್​​ನ ಮಾಲೀಕರಾದ ಜಗದೀಶ್ ಶಿರವಿ ಎಂಬುವರ ಪುತ್ರ ನರೇಂದ್ರ (21) ಎಂಬಾತನನ್ನು ಕೊಲೆ ಮಾಡಲಾಗಿತ್ತು. ನರೇಂದ್ರ ಸುರಪುರ ಪಟ್ಟಣದ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್​ ಮಾಡುತ್ತಿದ್ದ. ರಾಜಸ್ಥಾನ ಮೂಲದ ಜಗದೀಶ್ ಶಿರವಿ ಕಳೆದ ಹಲವು ವರ್ಷಗಳಿಂದ ಪಟ್ಟಣದಲ್ಲಿ ಚಿನ್ನದ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದು, ಕೆಲಸಕ್ಕಾಗಿ ಅದೇ ಊರಿನ ಕಿಶೋರ್ ಎಂಬ ಯುವಕನನ್ನು ಇಟ್ಟುಕೊಂಡಿದ್ದ.

ಕಳೆದ ಐದು ವರ್ಷಗಳಿಂದ ಕಿಶೋರ್ ಬಂಗಾರದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ನಿನ್ನೆ ಕಿಶೋರ್​ಗೆ ಬಂಗಾರದ ಚೈನ್ ಕಟ್ ಆಗಿದೆ ಬೇರೆ ಅಂಗಡಿಗೆ ಹೋಗಿ ಸರಿ ಮಾಡಿಸಿಕೊಂಡು ಬಾ ಅಂತ ಜಗದೀಶ್ ಕಳುಹಿಸಿದ್ದಾನೆ. ಆದರೆ, ಕಿಶೋರ್ ಬೇರೆ ಅಂಗಡಿಗೆ ಹೋಗುವ ಬದಲು ನೇರವಾಗಿ ಜಗದೀಶ್ ಮನೆಗೆ ಹೋಗಿದ್ದಾನೆ. ಈ ವೇಳೆ, ಮನೆಯಲ್ಲಿದ್ದ ಬಂಗಾರವನ್ನು ಕದ್ದು ಪರಾರಿಯಾಗಲು ಯತ್ನಿಸಿದ್ದು, ಇದನ್ನು ನರೇಂದ್ರ ಪ್ರಶ್ನಿಸಿದ್ದಕ್ಕೆ ಚಾಕುವಿನಿಂದ ಕತ್ತಿಗೆ ಚುಚ್ಚಿ ಬರ್ಬವಾಗಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಕೊಲೆ ಮಾಡಿದ ನಂತರ ತನ್ನ ಸ್ನೇಹಿತ ಅಜೀತ್ ಜೊತೆ ಕಿಶೋರ್ ಪರಾರಿಯಾಗಿದ್ದು, ಬಳಿಕ ಮಾಲೀಕ ಜಗದೀಶ್​ಗೆ ಕರೆ ಮಾಡಿ ನರೇಂದ್ರನನ್ನು ಯಾರೋ ಕೊಲೆ ಮಾಡಿ, ನನ್ನನ್ನು ಅಪಹರಣ ಮಾಡಿದ್ದಾರೆ ಅಂತಾ ಹೇಳಿದ್ದಾನೆ. ಕೂಡಲೇ ಹುಣಸಗಿ ಠಾಣೆಯ ಪೊಲೀಸರಿಗೆ ಜಗದೀಶ್ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.

ಇನ್ನು ಈ ಕುರಿತು ತನಿಖೆ ಮುಂದುವರೆಸಿದ ಪೊಲೀಸರು ಕಿಶೋರ್ ಹಾಗೂ ಆತನ ಸ್ನೇಹಿತ ಅಜೀತ್​ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಸುರಪುರ: ಹಾಡಹಗಲೇ ಚಿನ್ನದಂಗಡಿ ಮಾಲೀಕನ ಪುತ್ರನ ಬರ್ಬರ ಹತ್ಯೆ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.