ETV Bharat / jagte-raho

ತಾನು ಪ್ರೀತಿಸುತ್ತಿದ್ದ ಹುಡುಗಿ ಮೇಲೆ ಸ್ನೇಹಿತನ ಕಣ್ಣು: ತ್ರಿಕೋನ ಪ್ರೇಮ ಕಥೆಗೆ ಓರ್ವ ಬಲಿ! - ಬನ್ನೇರುಘಟ್ಟ ಬಳಿಯ ಕೋಳಿ ಫಾರಂ

ಇದೇ ತಿಂಗಳು 20ರಂದು ಮಧ್ಯರಾತ್ರಿ ರವಿಕುಮಾರ್ ಓಡಿಸುತ್ತಿದ್ದ ಗಾಡಿಯನ್ನು ನಾಲ್ವರು ಅಪರಿಚಿತರು ಅಡ್ಡಹಾಕಿ‌ ಅಪಹರಿಸಿದ್ದಾರೆ. ಬನ್ನೇರುಘಟ್ಟ ಬಳಿಯ ಕೋಳಿ ಫಾರಂ ಬಳಿ ಕರೆದುಕೊಂಡು ಹೋಗಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಬಳಿಕ ಮಾರ್ಗ ಮಧ್ಯೆ ನಿರ್ಜನ‌ ಪ್ರದೇಶವೊಂದರಲ್ಲಿ ಶವ ಬಿಸಾಡಿ ಪರಾರಿಯಾಗಿದ್ದರು.

tri-angle-love-story-and-murder-case-bengaluru
ತ್ರಿಕೋನ ಪ್ರೇಮ ಕಥೆಗೆ ಓರ್ವ ಬಲಿ.
author img

By

Published : Nov 27, 2020, 8:57 PM IST

ಬೆಂಗಳೂರು: ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ಸ್ನೇಹಿತ ಲವ್ ಮಾಡುತ್ತಿರುವುದಾಗಿ ಅರಿತು ಸಹಚರರ ನೆರವಿನಿಂದ ಆತನನ್ನು ಅಪಹರಿಸಿ ಭೀಕರವಾಗಿ ಕೊಲೆ ಮಾಡಿದ್ದ ಆರೋಪಿಯನ್ನು ಬೈಯ್ಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ತ್ರಿಕೋನ ಪ್ರೇಮ ಕಥೆಗೆ ಓರ್ವ ಬಲಿ

ಲೋಕೇಶ್ ಬಂಧಿತ ಆರೋಪಿಯಾಗಿದ್ದು, ರವಿಕುಮಾರ್ ಮೃತಪಟ್ಟ ದುದೈರ್ವಿ. ಲೊಕೇಶ್ ಹಾಗೂ ರವಿಕುಮಾರ್ ಇಬ್ಬರೂ ಸ್ನೇಹಿತರಾಗಿದ್ದರು. ಮಹದೇವಪುರದಲ್ಲಿರುವ ಆಕ್ಸೆಂಚರ್ ಕಂಪನಿಯಲ್ಲಿ ಟೆಂಪೋ ಟ್ರಾವೆಲರ್ (ಟಿಟಿ) ವಾಹನವನ್ನು ಅಟ್ಯಾಚ್ ಮಾಡಿಕೊಂಡು ಚಾಲಕನಾಗಿ ರವಿಕುಮಾರ್ ಕೆಲಸ‌ ಮಾಡುತ್ತಿದ್ದ.‌ ಕೆಲ ದಿನಗಳ ಬಳಿಕ ಲೊಕೇಶ್ ರವಿಕುಮಾರ್​ನೊಂದಿಗೆ ಸೇರಿಕೊಂಡಿದ್ದಾನೆ.

ಈ ವೇಳೆ ರವಿಕುಮಾರ್ ಮುಖಾಂತರ ಲೊಕೇಶ್​ಗೆ ಹುಡುಗಿಯ ಪರಿಚಯವಾಗಿದೆ. ಪರಿಚಯ ಸ್ನೇಹವಾಗಿ ಕ್ರಮೇಣ ಪ್ರೀತಿಗೆ ತಿರುಗಿದೆ. ರವಿಕುಮಾರ್ ಕೂಡ ಅದೇ ಹುಡುಗಿ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಇನ್ನೊಂದೆಡೆ ಲೊಕೇಶ್​​ಗೆ ಗೊತ್ತಾಗದಂತೆ ರವಿಕುಮಾರ್​​​ನೊಂದಿಗೂ ಯುವತಿ ಸ್ನೇಹ ಬೆಳೆಸಿಕೊಂಡಿದ್ದಳು. ಹೀಗಿರಬೇಕಾದರೆ ಚಿಕ್ಕಮಗಳೂರಿಗೆ ಲೊಕೇಶ್ ಹಾಗೂ ಯುವತಿ ಇಬ್ಬರೂ ಹೋಗಿರುವ ವಿಚಾರ ರವಿಕುಮಾರ್​​ಗೆ ಗೊತ್ತಾಗಿದೆ. ಇದೇ ವಿಚಾರಕ್ಕಾಗಿ ಇಬ್ಬರು ಜಗಳವಾಡಿಕೊಂಡಿದ್ದಾರೆ.

ಇದೇ ತಿಂಗಳು 20ರಂದು ಮಧ್ಯರಾತ್ರಿ ರವಿಕುಮಾರ್ ಓಡಿಸುತ್ತಿದ್ದ ಗಾಡಿಯನ್ನು ನಾಲ್ವರು ಅಪರಿಚಿತರು ಅಡ್ಡಹಾಕಿ‌ ಅಪಹರಿಸಿದ್ದಾರೆ. ಬನ್ನೇರುಘಟ್ಟ ಬಳಿಯ ಕೋಳಿ ಫಾರಂ ಬಳಿ ಕರೆದುಕೊಂಡು ಹೋಗಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಬಳಿಕ ಮಾರ್ಗ ಮಧ್ಯೆ ನಿರ್ಜನ‌ ಪ್ರದೇಶವೊಂದರಲ್ಲಿ ಶವ ಬಿಸಾಡಿ ಪರಾರಿಯಾಗಿದ್ದರು.

ರವಿಕುಮಾರ್ ಕಾಣಿಸದಿರುವ ಬಗ್ಗೆ ಬೈಯ್ಯಪ್ಪನಹಳ್ಳಿ‌‌ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ‌ ದಾಖಲಾಗಿತ್ತು. ಮತ್ತೊಂದೆಡೆ ಬನ್ನೇರುಘಟ್ಟದಲ್ಲಿ ಹಂತಕರು ಬಿಸಾಕಿ ಹೋಗಿದ್ದ ಶವದ ಗುರುತು ಪತ್ತೆಯಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಇದೊಂದು ಪೂರ್ವ ನಿಯೋಜಿತ ಕೊಲೆಯಾಗಿದೆ ಎಂದು ಪೊಲೀಸರು ಕಂಡುಕೊಂಡಿದ್ದರು. ಸ್ಥಳದಲ್ಲಿ‌ ದೊರೆತ ಮೊಬೈಲ್ ಫೋನ್ ಸೇರಿದಂತೆ ಇನ್ನಿತರ ತಾಂತ್ರಿಕ ಎವಿಡೆನ್ಸ್ ಆಧಾರದ ಮೇಲೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಅಂಚಟಗೇರಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.. ಹೆಂಡತಿ ಪ್ರಿಯಕರನಿಂದಲೇ ಗಂಡನ ಕೊಲೆ!!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.