ETV Bharat / jagte-raho

ಹೆಲ್ಮೆಟ್ ಧರಿಸಿ ಬರ್ತಾಳೆ... ಕ್ಷಣಾರ್ಧದಲ್ಲಿ ಕಳ್ಳತನ ಮಾಡಿ ಎಸ್ಕೇಪ್ ಆಗ್ತಾಳೆ ಚಾಲಾಕಿ- ವಿಡಿಯೋ ನೋಡಿ - Bangalore News

ರಸ್ತೆ ಬದಿಯಲ್ಲಿರೋ ವ್ಯಾಪಾರಸ್ಥರನ್ನೇ ಟಾರ್ಗೆಟ್ ಮಾಡಿಕೊಂಡು, ರಾತ್ರಿ ಮತ್ತು ಬೆಳಗಿನ ವೇಳೆ ಚಲಾಕಿವೋರ್ವಳು ಹೆಲ್ಮೆಟ್ ಧರಿಸಿ ಕಳ್ಳತನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ವೈರಲ್​ ಆಗಿದೆ.

theft-by-wearing-a-helmet-at-bangalore-by-women

author img

By

Published : Mar 3, 2020, 10:41 AM IST

ಬೆಂಗಳೂರು: ಇಲ್ಲೋರ್ವ ಚಾಲಾಕಿ ಮಹಿಳೆ ಹೆಲ್ಮೆಟ್ ಧರಿಸಿ ತನ್ನ ಕರಾಮತ್ತನ್ನ ರಾತ್ರಿ ಹಾಗೂ ಬೆಳಗಿನಜಾವ ತೋರಿಸಿರುವ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.

ಹೆಲ್ಮೆಟ್ ಧರಿಸಿ ಕಳ್ಳತನಕ್ಕಿಳಿಯುವ ಚಾಲಾಕಿ

ರಸ್ತೆ ಬದಿಯಲ್ಲಿರೋ ವ್ಯಾಪಾರಸ್ಥರೇ ಈಕೆಯ ಟಾರ್ಗೆಟ್ ಆಗಿದ್ದಾರೆ. ಹೆಲ್ಮೆಟ್ ಧರಿಸಿ ಕ್ಷಣಮಾತ್ರದಲ್ಲಿ ರಸ್ತೆ ಬದಿ ವ್ಯಾಪಾರ ಮಾಡೋ ಅಂಗಡಿಗಳಲ್ಲಿ ಯಾರೂ ಇಲ್ಲದೆ ವೇಳೆ ಹಣ್ಣುಗಳು ಹಾಗೂ ಕೆಲ ವಸ್ತುಗಳನ್ನು ಕದ್ದು ಪರಾರಿಯಾಗುತ್ತಿದ್ದಾಳೆ ಈ ಖತರ್ನಾಕ್ ಕಳ್ಳಿ.

ಇನ್ನು ಇತ್ತೀಚೆಗೆ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆಲ್ಮೆಟ್ ಧರಿಸಿ ರಸ್ತೆ ಬದಿ ನಿಲ್ಲಿಸಿದ್ದ ತಳ್ಳುವ ಗಾಡಿಯ ಕೆಲ ವಸ್ತುಗಳನ್ನು ಕಳ್ಳತನ‌ ಮಾಡಿದ್ದಾಳೆ. ಇನ್ನು ಕಳ್ಳಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದನ್ನು ಕಂಡು ವ್ಯಾಪಾರಸ್ಥರು ಮಹಾಲಕ್ಷೀ ಲೇಔಟ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.