ಪೆಂಡ್ರಾ (ಛತ್ತೀಸ್ಗಢ): ಮನೆಯಲ್ಲಿ ಮಲಗಿದ್ದ ಪತಿಯನ್ನು ಕತ್ತು ಸೀಳಿ ಕೊಲೆಗೈದ ಪತ್ನಿಯು, ಬಳಿಕ ತನ್ನ ಮೂವರು ಪುಟ್ಟ ಹೆಣ್ಣು ಮಕ್ಕಳೊಂದಿಗೆ ಬಾವಿಗೆ ಹಾರಿರುವ ಘಟನೆ ಛತ್ತೀಸ್ಗಢದ ಪೆಂಡ್ರಾ ಪ್ರದೇಶದಲ್ಲಿ ನಡೆದಿದೆ.
ಬಾವಿಯಲ್ಲಿ ಮಕ್ಕಳ ಕಿರುಚಾಟ ಕೇಳುತ್ತಿದ್ದಂತೆಯೇ ಗ್ರಾಮಸ್ಥರು ಹಗ್ಗದ ಸಹಾಯದಿಂದ ನಾಲ್ವರನ್ನೂ ಬಾವಿಯಿಂದ ಹೊರತೆಗೆದಿದ್ದಾರೆ. ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿ ವಿಡಿಯೋ ಹರಿಬಿಟ್ಟವರ ಬಂಧನ
ವಿಚಾರಣೆ ವೇಳೆ ಆರೋಪಿ ಮಹಿಳೆಯು ಮಾನಸಿಕ ಅಸ್ವಸ್ಥೆ ಎಂಬುದು ತಿಳಿದುಬಂದಿದೆ. ಚಿಕಿತ್ಸೆ ನೀಡಿದ ಬಳಿಕ ಮಹಿಳೆಯನ್ನು ವಶಕ್ಕೆ ಪಡೆದ ಪೆಂಡ್ರಾ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.