ETV Bharat / jagte-raho

ಪಡೆದ ಸಾಲ ಕೇಳಿದ್ದಕ್ಕೆ ನಡೆದ ಜಗಳ ವ್ಯಕ್ತಿ ಕೊಲೆಯಲ್ಲಿ ಅಂತ್ಯ - ಕೊಪ್ಪಳ ಅಪರಾಧ ಸುದ್ದಿ

ಗಂಗಾವತಿ ತಾಲೂಕಿನ ವಡಕಿ ಗ್ರಾಮದಲ್ಲಿ ಪಡೆದ ಸಾಲ ಹಿಂತಿರುಗಿಸುವ ವಿಷಯದಲ್ಲಿ ನಾಲ್ವರ ನಡುವೆ ಜಗಳ ನಡೆದು ರಾಮಣ್ಣ ಕ್ಯಾಡೇದ್ ಎಂಬುವರ ಕೊಲೆಯಲ್ಲಿ ಅಂತ್ಯವಾಗಿದೆ.

Accuses Arrest
ಜಗಳ ವ್ಯಕ್ತಿ ಕೊಲೆಯಲ್ಲಿ ಅಂತ್ಯ
author img

By

Published : Dec 3, 2019, 8:55 PM IST

ಗಂಗಾವತಿ: ತಾಲೂಕಿನ ವಡಕಿ ಗ್ರಾಮದಲ್ಲಿ ಪಡೆದ ಸಾಲ ಹಿಂತಿರುಗಿಸುವ ವಿಷಯದಲ್ಲಿ ನಾಲ್ವರ ನಡುವೆ ಜಗಳ ನಡೆದು ರಾಮಣ್ಣ ಕ್ಯಾಡೇದ್ ಎಂಬುವರ ಕೊಲೆಯಲ್ಲಿ ಅಂತ್ಯವಾಗಿದ್ದು, ಹತ್ಯೆ ಮಾಡಿದ ಮೂವರು ಆರೋಪಿಗಳನ್ನು ಗಂಗಾವತಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.

ಗಂಗಾವತಿ ಮಸಾರಿ ಕ್ಯಾಂಪಿನ ಮುತ್ತಣ್ಣ ಭೋವಿ, ಯಮನೂರ ಅಮದಾಳ ಹಾಗೂ ನೇತ್ರಕುಮಾರ ಬಂಧಿತರು.

ರಾಮಣ್ಣ ಕ್ಯಾಡೇದ್ ಅವರು ಕನಕಗಿರಿ ತಾಲೂಕಿನ ವಡಕಿ ಗ್ರಾಮದವರು. ರಾಮಣ್ಣ ಅವರು ಮುತ್ತಣ್ಣ ಭೋವಿ ಎಂಬ ವ್ಯಕ್ತಿಗೆ ಒಂದೂವರೆ ಲಕ್ಷ ರೂಪಾಯಿ ಸಾಲ ನೀಡಿದ್ದರು. ಮರಳಿ ಹಣ ನೀಡುವಂತೆ ರಾಮಣ್ಣ ಒತ್ತಾಯಿಸಿದ್ದರು. ಹಣ ಕೊಡುವುದಿಲ್ಲ, ಏನು ಬೇಕಾದರೂ ಮಾಡಿಕೋ ಹೋಗು ಎಂದು ಮುತ್ತಣ್ಣ ರಾಮಣ್ಣನಿಗೆ ಅವಾಜ್ ಹಾಕಿದ್ದಾನೆ. ಆಗ ರಾಮಣ್ಣ, ನನ್ನ ಹಣ ಏಕೆ ನೀಡುವುದಿಲ್ಲ ಎಂದಿದ್ದಾರೆ. ಇದರಿಂದ ಕೋಪಗೊಂಡ ಆರೋಪಿ ತನ್ನ ಸ್ನೇಹಿತರೊಂದಿಗೆ ಸೇರಿ ರಾಮಣ್ಣನ ಹತ್ಯಗೈದು ತುಂಗಭದ್ರಾ ಎಡದಂಡೆಗೆ ಎಸೆದಿರುವುದಾಗಿ ಆರೋಪಿಗಳು ತನಿಖೆಯ ವೇಳೆ ತಪ್ಪೊಪ್ಪಿಕೊಂಡಿದ್ದಾರೆ.

Intro:ಪಡೆದ ಸಾಲ ಹಿಂದುರಿಗಿಸುವ ವಿಷಯದಲ್ಲಿ ಜಗಳವಾಗಿ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ತಾಲ್ಲೂಕಿನ ವಡಕಿ ಗ್ರಾಮದಲ್ಲಿ ನಡೆದಿದೆ. ಪ್ರಕರಣವನ್ನು ಬೇಧಿಸಿಸ ಗಂಗಾವತಿ ಗ್ರಾಮೀಣ ಠಾನೆಯ ಪೊಲೀಸರು ಮೂವ್ವರು ಆರೋಪಗಳನ್ನು ಬಂಧಿಸಿದ್ದಾರೆ.
Body:ಪಡೆದ ಸಾಲ ಕೇಳಿದ್ದಕ್ಕೆ ವ್ಯಕ್ತಿ ಕೊಲೆ: ಆರೋಪಿಗಳ ಬಂಧನ
ಗಂಗಾವತಿ:
ಪಡೆದ ಸಾಲ ಹಿಂದುರಿಗಿಸುವ ವಿಷಯದಲ್ಲಿ ಜಗಳವಾಗಿ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ತಾಲ್ಲೂಕಿನ ವಡಕಿ ಗ್ರಾಮದಲ್ಲಿ ನಡೆದಿದೆ. ಪ್ರಕರಣವನ್ನು ಬೇಧಿಸಿಸ ಗಂಗಾವತಿ ಗ್ರಾಮೀಣ ಠಾನೆಯ ಪೊಲೀಸರು ಮೂವ್ವರು ಆರೋಪಗಳನ್ನು ಬಂಧಿಸಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನು ಕನಕಗಿರಿ ತಾಲ್ಲೂಕಿನ ವಡಕಿ ಗ್ರಾಮದ ರಾಮಣ್ಣ ಕ್ಯಾಡೇದ್ ಎಂದು ಗುರುತಿಸಲಾಗಿದೆ. ಆರೋಪಿಗಳಾದ ಗಂಗಾವತಿ ಮಸಾರಿ ಕ್ಯಾಂಪಿನ ಮುತ್ತಣ್ಣ ಭೋವಿ, ಯಮನೂರ ಅಮದಾಳ ಹಾಗೂ ನೇತ್ರಕುಮಾರ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ರಾಮಣ್ಣ, ಮುತ್ತಣ್ಣ ಭೋವಿ ಎಂಬ ವ್ಯಕ್ತಿಗೆ ಒಂದುವರೆ ಲಕ್ಷ ರೂಪಾಯಿ ಸಾಲವಾಗಿ ನೀಡಿದ್ದ. ಮರಳಿ ಹಣ ನೀಡುವಂತೆ ರಾಮಣ್ಣ ಒತ್ತಾಯಿಸಿದ್ದರಿಂದ ಕೊಲೆ ಮಾಡಿ ತುಂಗಭದ್ರಾ ಎಡದಂಡೆಗೆ ಎಸೆದಿರುವುದಾಗಿ ಆರೋಪಿಗಳು ತನಿಖೆಯ ವೇಳೆ ತಪ್ಪೊಪ್ಪಿಕೊಂಡಿದ್ದಾರೆ.
Conclusion:ಕೊಲೆಯಾದ ರಾಮಣ್ಣ, ಮುತ್ತಣ್ಣ ಭೋವಿ ಎಂಬ ವ್ಯಕ್ತಿಗೆ ಒಂದುವರೆ ಲಕ್ಷ ರೂಪಾಯಿ ಸಾಲವಾಗಿ ನೀಡಿದ್ದ. ಮರಳಿ ಹಣ ನೀಡುವಂತೆ ರಾಮಣ್ಣ ಒತ್ತಾಯಿಸಿದ್ದರಿಂದ ಕೊಲೆ ಮಾಡಿ ತುಂಗಭದ್ರಾ ಎಡದಂಡೆಗೆ ಎಸೆದಿರುವುದಾಗಿ ಆರೋಪಿಗಳು ತನಿಖೆಯ ವೇಳೆ ತಪ್ಪೊಪ್ಪಿಕೊಂಡಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.