ETV Bharat / jagte-raho

ಸುಲಿಗೆ ಮಾಡುತ್ತಿದ್ದ 8 ಮಂದಿ ಮಂಗಳಮುಖಿಯರ ಬಂಧನ - ತೆಲಂಗಾಣ ಪೊಲೀಸರು

ಹಣ ಸುಲಿಗೆ ಮಾಡುತ್ತಿದ್ದ 8 ಮಂದಿ ಮಂಗಳಮುಖಿಯರನ್ನು ಸೈಬರಾಬಾದ್​ ಪೊಲೀಸರು ಅರೆಸ್ಟ್​​ ಮಾಡಿದ್ದಾರೆ.

Telangana police arrest 8 transgenders for extortion
ಸುಲಿಗೆ ಮಾಡುತ್ತಿದ್ದ 8 ಮಂದಿ ಮಂಗಳಮುಖಿಯರ ಬಂಧನ
author img

By

Published : Dec 27, 2020, 2:38 PM IST

ಸೈಬರಾಬಾದ್​ (ತೆಲಂಗಾಣ): ಸುಲಿಗೆ ಮಾಡುತ್ತಾ ಜನರಲ್ಲಿ ಆತಂಕ ಸೃಷ್ಟಿಸುತ್ತಿದ್ದ ಎಂಟು ಮಂದಿ ಮಂಗಳಮುಖಿಯರು ಹಾಗೂ ಇಬ್ಬರು ಆಟೋ ಚಾಲಕರನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.

ಡಿಸೆಂಬರ್​ 25 ರಂದು ವ್ಯಕ್ತಿಯೊಬ್ಬರು ಪೊಲೀಸ್​ ಠಾಣೆಗೆ ಬಂದು, ಎರಡು ಆಟೋಗಳಲ್ಲಿ ಬಂದು ಮನೆಗೆ ನುಗ್ಗಿದ 8 ಮಂದಿ ಮಂಗಳಮುಖಿಯರು 20 ಸಾವಿರ ರೂ. ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಬೆದರಿಕೆ ಹಾಕಿ, ಅವಾಚ್ಯ ಪದ ಬಳಸಿ ನಿಂದಿಸಿದ್ದಾರೆ. ಭಯಭೀತರಾದ ನಾನು ಹಾಗೂ ನನ್ನ ಕುಟುಂಬಸ್ಥರು 16,500 ರೂ.ಗಳನ್ನು ನೀಡಿದೆವು ಎಂದು ದೂರು ನೀಡಿದ್ದರು.

ಇದನ್ನೂ ಓದಿ: ಮಧುರೈನಲ್ಲಿ 2000 ವರ್ಷ ಹಳೆಯ ಶಾಸನ ಪತ್ತೆ: ವಿಡಿಯೋ

ಈ ವ್ಯಕ್ತಿಯ ಮಗನ ಮದುವೆ ನಡೆದ ಮಾರನೇ ದಿನ ಮಂಗಳಮುಖಿಯರು ಹೀಗೆ ಸುಲಿಗೆ ಮಾಡಲು ಬಂದಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸೈಬರಾಬಾದ್​ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳು ಯಾರದ್ದಾದರೂ ಮನೆಯಲ್ಲಿ ಸಮಾರಂಭಗಳು ನಡೆಯುತ್ತಿರುವ ದಿನಾಂಕಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಅಲ್ಲಿಗೆ ತೆರಳಿ ಹಣ ವಸೂಲಿ ಮಾಡುತ್ತಿದ್ದರು ಎಂಬುದು ತನಿಖೆ ವೇಳೆ ತಿಳಿದುಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.