ಬೆಂಗಳೂರು: ಮಾದಕ ವಸ್ತುಗಳ ದಂಧೆಯಲ್ಲಿ ಸ್ಯಾಂಡಲ್ ವುಡ್ ಘಾಟು ಸದ್ದು ಮಾಡಿದೆ. ಸದ್ಯ ಆರೋಪಿಗಳನ್ನ ಖೆಡ್ಡಾಕ್ಕೆ ಕೆಡವುದರಲ್ಲಿ ಎನ್ಸಿಬಿ (ಮಾದಕ ವಸ್ತು ನಿಯಂತ್ರಣ ದಳ) ಪೊಲೀಸರು ಯಶಸ್ವಿಯಾಗಿದ್ದಾರೆ.

ಎನ್ಸಿಬಿ ಅಧಿಕಾರಿಗಳು ಮೊದಲು ಅನಿಕಾ ಎಂಬ ಮಹಿಳೆಯನ್ನು ಗಾಂಜಾ ವ್ಯವಹಾರದಲ್ಲಿ ಭಾಗಿಯಾದ ಕಾರಣ ಖೆಡ್ಡಾಕ್ಕೆ ಕೆಡವುದರಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಅನಿಕಾಳನ್ನ ಪ್ರಾಥಮಿಕ ತನಿಖೆಗೆ ಒಳಪಡಿಸಿದಾಗ ಅನೂಪ್, ರಾಜೇಶ್ ಈ ದಂಧೆಯಲ್ಲಿ ಪಾಲುದಾರರು ಎಂಬ ಮಾಹಿತಿ ಕಲೆ ಹಾಕಿದ್ದರು. ಪ್ರಾಥಮಿಕ ತನಿಖೆಯಲ್ಲಿ ನಟ-ನಟಿಯರು, ಮ್ಯೂಸಿಕ್ ಡೈರೆಕ್ಟರ್ಗಳು ನಿತ್ಯದ ಗ್ರಾಹಕರಂತೆ ಬರುತ್ತಿದ್ದ ವಿಚಾರ ಬಯಾಲಾಗಿದೆ. ಸದ್ಯ ಈಕೆ ಹಲವಾರು ಸಿನಿಮಾ ಹಾಗೂ ಧಾರಾವಾಹಿಯಲ್ಲಿ ನಟನೆ ಮಾಡಿದ್ದಾರೆ.

ಸದ್ಯ ಅಧಿಕಾರಿಗಳು ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತುಗಳನ್ನ ಬೆಂಗಳೂರಿನ ಕಲ್ಯಾಣ ನಗರದಲ್ಲಿರೋ ಅಪಾರ್ಟ್ಮೆಂಟ್ವೊಂದರಲ್ಲಿ ವಶಕ್ಕೆ ಪಡೆದಿದ್ದು, ದಾಳಿ ವೇಳೆ ಮಾದಕ ಮಾತ್ರೆಗಳನ್ನು, ವಶಪಡಿಸಿಕೊಂಡಿದ್ದಾರೆ. ಇನ್ನು ಇಡೀ ದಂಧೆಗೆ ಅನಿಕಾ ರೂವಾರಿ ಎನ್ನಲಾಗ್ತಿದ್ದು, ಬರೋಬ್ಬರಿ ಎರಡು ಕೋಟಿ ಮೌಲ್ಯದ ಗಾಂಜಾ ಜಪ್ತಿ ಮಾಡಲಾಗಿದೆ.

ಸದ್ಯ ಅನಿಕಾಳನ್ನ ಹೆಚ್ವಿನ ವಿಚಾರಣೆಗೆ ಒಳಪಡಿಸಲಾಗಿದೆ. ಕಾರಣ ಗಾಂಜಾ ಪ್ರಕರಣದಲ್ಲಿ ಅನಿಕಾ ಬಹಳಷ್ಟು ಸಿನಿಮಾ ತಾರೆಯರಿಗೆ ಗಾಂಜಾ ಪೂರೈಸಿರುವ ವಿಚಾರ ಬಯಲಾಗಿದೆ ಎನ್ನಲಾಗ್ತಿದೆ. ಹೀಗಾಗಿ ಡ್ರಗ್ ದಂಧೆಯ ಜಾಲವನ್ನು ಹೆಡೆಮುರಿ ಕಟ್ಟಲು ಪೊಲೀಸರು ಮುಂದಾಗಿದ್ದಾರೆ.