ETV Bharat / jagte-raho

ಪೊಲೀಸ್ ವಾಹನದಿಂದ ಪರಾರಿಯಾಗಿದ್ದ ಅತ್ಯಾಚಾರ ಆರೋಪಿ ಅರೆಸ್ಟ್ - ಬಾಲಕಿ ಮೇಲೆ ಅತ್ಯಾಚಾರ

ತಪ್ಪಿಸಿಕೊಂಡಿದ್ದ ಅತ್ಯಾಚಾರ ಆರೋಪಿಯನ್ನ ಪತ್ತೆ ಹಚ್ಚಿದ ಪೊಲೀಸರು. ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಹನುಮಂತ ಕಂಬಳಿ.

ಅತ್ಯಾಚಾರ ಆರೋಪಿ ಅರೆಸ್ಟ್
author img

By

Published : Apr 2, 2019, 6:05 AM IST

ಉಡುಪಿ: ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಬಳಿಕ ಪೊಲೀಸ್ ರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಮತ್ತೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಯಾಗಿದ್ದ ಬಾದಾಮಿ ತಾಲೂಕಿನ ಹನುಮಂತ ಬಸಪ್ಪಕಂಬಳಿ (39) ಹಿರಿಯಡಕ ಸಮೀಪ ಪೆರ್ಣಂಕಿಲ ಹಾಡಿಯಲ್ಲಿ ಪತ್ತೆಯಾಗಿದ್ದಾನೆ. ಒಂದು ದಿನದ ಹಿಂದೆ ಪೊಲೀಸರು ಆರೋಪಿಯನ್ನು ಉಡುಪಿ ಜಿಲ್ಲಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ನಿವಾಸದ ಮುಂದೆ ಹಾಜರುಪಡಿಸಿದಾಗ, ನ್ಯಾಯಾಂಗ ಬಂಧನ ನೀಡಿದ ಹಿನ್ನೆಲೆಯಲ್ಲಿ ಹುನುಮಂತನನ್ನು ಮಣಿಪಾಲ ಪೊಲೀಸರು ಹಿರಿಯಡ್ಕದಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಆಗ ದಾರಿ ಮಧ್ಯೆಪೊಲೀಸ್ ವಾಹನದಿಂದ ತಪ್ಪಿಸಿಕೊಂಡು ಹಾಡಿಯಲ್ಲಿ ಕಣ್ಮರೆಯಾಗಿದ್ದ.

ಪೊಲೀಸರು ಹುಡುಕಾಟ ನಡೆಸುತ್ತಿದ್ದಾಗ ಪೆರ್ಣಂಕಿಲದ ಹೊಟೇಲೊಂದರಲ್ಲಿ ಚಹಾ ಕುಡಿದು ಹೋಗಿರುವ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಅಲ್ಲೇಹುಡುಕಾಟ ಮುಂದುವರೆಸಿದಾಗಸಿಕ್ಕಿಬಿದ್ದಿದ್ದಾನೆ.

sample description
ETV Bharat Logo

Copyright © 2025 Ushodaya Enterprises Pvt. Ltd., All Rights Reserved.