ನವದೆಹಲಿ: ತನ್ನ ನಾಲ್ಕು ವರ್ಷದ ಮಗಳ ಮೇಲೆ ಹೆತ್ತ ತಂದೆಯೇ ಅತ್ಯಾಚಾರ ಎಸಗಿರುವ ಹೇಯ ಕೃತ್ಯ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.
ದೆಹಲಿಯ ಪ್ರಹ್ಲಾದ್ಪುರ ಪ್ರದೇಶದಲ್ಲಿ ಕಳೆದ ಅಕ್ಟೋಬರ್ ತಿಂಗಳಲ್ಲೇ ಘಟನೆ ನಡೆದಿದೆ. ಆದರೆ ಈ ಸಂಬಂಧ ತನ್ನ ವಿರುದ್ಧ ದೂರು ನೀಡಲು ಹೊರಟಿದ್ದ ಪತ್ನಿ ಮೇಲೆ ಆರೋಪಿ ಪತಿ ಹಲ್ಲೆ ನಡೆಸಿ ತಡೆದಿದ್ದನು. ದೂರು ನೀಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದನು.
ಓದಿ: 9 ತಿಂಗಳ ಹಿಂದೆ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಮಗುವಿಗೆ ಜನ್ಮ ನೀಡಿದ ಸಂತ್ರಸ್ತೆ
ಸಂತ್ರಸ್ತ ಬಾಲಕಿಯನ್ನು ಹರಸಾಹಸ ಮಾಡಿ ತಾಯಿ ತನ್ನ ತವರು ಮನೆಗೆ ಕಳುಹಿಸಿದ್ದು, ಬಾಲಕಿಯ ಅಜ್ಜಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ದೆಹಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕೆಲ ತಿಂಗಳ ಹಿಂದೆ 60 ವರ್ಷದ ವೃದ್ಧ 16 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಹಾಗೂ ಆ ಬಾಲಕಿ ಇದೀಗ ಮಗುವಿಗೆ ಜನ್ಮ ನೀಡಿದ್ದ ಪ್ರಕರಣವೊಂದು ದೆಹಲಿಯಲ್ಲಿ ಬೆಳಕಿಗೆ ಬಂದಿತ್ತು. ಇಂತಹದ್ದೇ ಮತ್ತೊಂದು ಘಟನೆ ರಾಜಸ್ಥಾನದ ಜೋಧ್ಪುರದಲ್ಲಿ ಕೂಡ ನಡೆದಿತ್ತು. 12 ವರ್ಷದ ಬಾಲಕಿ ಮೇಲೆ ನೆರೆಹೊರೆಯ 30 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿ, ಆಕೆ ಮಗುವಿಗೆ ಜನ್ಮ ನೀಡಿದ್ದಳು.