ಪುತ್ತೂರು: ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ವೇಳೆ ಪುತ್ತೂರು ನಗರ ಠಾಣೆಯ ಪೊಲೀಸರು ದಾಳಿ ನಡೆಸಿ ಗಾಂಜಾ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.
ಮಂಜನಾಡಿ ಕುಚ್ಚಿಗುಡ್ಡೆ ನಿವಾಸಿ ಫೈಝಲ್ ಅವರ ಪುತ್ರ ಹಾತಿಮ್ (32) ಬಂಧಿತ ಆರೋಪಿ. ಈತನಿಂದ 42,600 ರೂ. ಮೌಲ್ಯದ 2 ಕೆ.ಜಿ ಗಾಂಜಾ ಸೇರಿದಂತೆ ಐಫೋನ್, 5,900 ನಗದು ಮತ್ತು ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಸ್ಪಿ ಬಿ.ಎಂ. ಲಕ್ಷ್ಮೀ ಪ್ರಸಾದ್ ಅವರ ನಿರ್ದೇಶನಂತೆ ಎಎಸ್ಪಿ ಲಖನ್‌ಸಿಂಗ್ ಯಾದವ್ ಮತ್ತು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಅವರ ಮಾರ್ಗದರ್ಶನದಲ್ಲಿ ಸಂಪ್ಯ ಎಸ್.ಐ ಉದಯರವಿ ನೇತೃತ್ವದಲ್ಲಿ ಹೆಡ್ ಕಾನ್ಸ್ಟೇಬಲ್ ಅದ್ರಾಮ, ಚಂದ್ರ, ಮತ್ತು ನಿತಿನ್, ವಿನೋದ್ ಕಾರ್ಯಾಚರಣೆ ನಡೆಸಿ, ಕಲ್ಲರ್ಪೆ ಬಳಿ ಗಾಂಜಾ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.