ETV Bharat / jagte-raho

ಬೆಂಗಳೂರಿನಲ್ಲಿ ಬಂಧಿತರಾದ ಇರಾನಿ ಗ್ಯಾಂಗ್​​​ ಕಳ್ಳರಿಗೆ ಇತ್ತು ಮೈಸೂರಿನ ಲಿಂಕ್​​

author img

By

Published : Feb 28, 2020, 8:08 PM IST

ನಗರದ ಸೆಕೆಂಡ್ ಹ್ಯಾಂಡ್ ಕಾರ್ ಶೋ ರೋಮ್​​​ನಲ್ಲಿ ಹಣ ಕದ್ದು ಪರಾರಿಯಾಗಿದ್ದ ಇಬ್ಬರು ಕಳ್ಳರನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.

KN_MYS_6_IRANI_GANG_ARREST_NEWS_7208092
ಬೆಂಗಳೂರಿನಲ್ಲಿ ಬಂಧಿತರಾದ ಇಬ್ಬರು ಇರಾನಿ ಗ್ಯಾಂಗ್ ಕಳ್ಳರಿಗೆ ಇತ್ತು ಮೈಸೂರಿನ ಲಿಂಕ್

ಮೈಸೂರು: ನಗರದ ಸೆಕೆಂಡ್ ಹ್ಯಾಂಡ್ ಕಾರ್ ಶೋ ರೋಮ್​​ನಲ್ಲಿ ಹಣ ಕದ್ದು ಪರಾರಿಯಾಗಿದ್ದ ಇಬ್ಬರು ಕಳ್ಳರನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.

ಜನವರಿ 31ರಂದು ಹುಣಸೂರು ರಸ್ತೆಯಲ್ಲಿರುವ ಟ್ರೂ ವ್ಯಾಲ್ಯೂ ಶೋ ರೋಮ್​​​ನಲ್ಲಿ ಅಕೌಟೆಂಟ್ ಗಮನವನ್ನು ಬೇರೆಡೆ ಸೆಳೆದು 1,25,000 ರೂ. ಕದ್ದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಈ ಸಂಬಂಧ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಕಳ್ಳತನದ ದೃಶ್ಯ ಬಯಲಾಗಿದೆ.

ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಕಳ್ಳರಿಗೆ ಸಖತ್ ಗೂಸಾ:

ಮೈಸೂರಿನಲ್ಲಿ ಕದ್ದ ರೀತಿಯಲ್ಲಿ ಬೆಂಗಳೂರಿನ ಟ್ರೂ ವ್ಯಾಲ್ಯೂ ಕಂಪನಿಯಲ್ಲಿ ಕಳ್ಳತನ ಮಾಡಲು ಹೋದಾಗ ಸಿಕ್ಕಿಬಿದ್ದಿದ್ದಾರೆ. ಆಗ ಸಂಸ್ಥೆಯ ಸಿಬ್ಬಂದಿ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ ಮೈಸೂರಿನ ಪ್ರಕರಣ ಸೇರಿದಂತೆ ರಾಜ್ಯದ 7 ಕಡೆ ಇದೇ ರೀತಿ ಕಳ್ಳತನ ಮಾಡಿರುವುದು ಬಯಲಿಗೆ ಬಂದಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.