ETV Bharat / jagte-raho

ಅರಣ್ಯಾಧಿಕಾರಿಯಿಂದ ಸ್ಥಳೀಯನ ಮೇಲೆ ಹಲ್ಲೆ: ದೂರು ದಾಖಲಿಸಿಕೊಳ್ಳಲು ಪೊಲೀಸರ ಹಿಂದೇಟು? - ಫಾರೆಸ್ಟರ್ ಪ್ರಮೋದ್ ಎಂಬುವರು ಹಲ್ಲೆ

ಜಟ್ಟಯ್ಯ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಇವರ ವಿರುದ್ದವಾಗಿ ಸ್ಪರ್ಧೆ ಮಾಡಿದ್ದವರ ಕುಮ್ಮಕ್ಕಿನಿಂದ ಫಾರೆಸ್ಟರ್ ಪ್ರಮೋದ್ ಮನೆ ಬಳಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಅಲ್ಲದೆ ಹಲ್ಲೆ ನಡೆಸಿದ್ದಾರೆ.

forester Assault on a men in shimogga  news
ಅರಣ್ಯಾಧಿಕಾರಿಯಿಂದ ಸ್ಥಳೀಯನ ಮೇಲೆ ಹಲ್ಲೆ
author img

By

Published : Jan 5, 2021, 8:02 PM IST

ಶಿವಮೊಗ್ಗ: ಕಾನೂನು ರಕ್ಷಣೆ ಮಾಡಬೇಕಾದ ಅಧಿಕಾರಿಗಳೇ, ಅಮಾಯಕನ ಮೇಲೆ ಹಲ್ಲೆ ನಡೆಸಿರುವ ಆರೋಪ ಜಿಲ್ಲೆಯ ಕುದರೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೋಡನಹಳ್ಳಿಯಲ್ಲಿ ನಡೆದಿದೆ.

ಅರಣ್ಯಾಧಿಕಾರಿಯಿಂದ ಸ್ಥಳೀಯನ ಮೇಲೆ ಹಲ್ಲೆ

ಕೋಡನಹಳ್ಳಿಯ ನಿವಾಸಿ ಜಟ್ಟಯ್ಯ ಜೈನ್ ಮೇಲೆ ಸ್ಥಳೀಯ ಫಾರೆಸ್ಟರ್ ಪ್ರಮೋದ್ ಎಂಬುವರು ಹಲ್ಲೆ ನಡೆಸಿದ್ದಾರೆ. ಜಟ್ಟಯ್ಯ ಜೈನ್​ ತಮಗೆ ಮಂಜೂರಾದ ಭೂಮಿಯಲ್ಲಿಯೇ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಆದರೆ ಇದು ಅರಣ್ಯ ಭೂಮಿಯಲ್ಲಿದೆ ಎಂದು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಓದಿ: ಸಂಪೂರ್ಣವಾಗಿ ಗುಣಮುಖರಾದ ಡಿವಿಎಸ್​: ಆಸ್ಪತ್ರೆಯಿಂದ ಕೇಂದ್ರ ಸಚಿವರು ಡಿಸ್ಚಾರ್ಜ್​

ಅರಣ್ಯ ಸಿಬ್ಬಂದಿ ಪ್ರತಿ ಸಲ‌ ಮನೆ ಬಳಿ ಬಂದು ಕಿರಿಕಿರಿ ನೀಡುವುದು ಅವಾಚ್ಯವಾಗಿ ಬೈಯ್ಯುವುದು ಮಾಡುತ್ತಿದ್ದರು. ಆದರೆ ಜಟ್ಟಯ್ಯ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಇವರ ವಿರುದ್ದವಾಗಿ ಸ್ಪರ್ಧೆ ಮಾಡಿದ್ದವರ ಕುಮ್ಮಕ್ಕಿನಿಂದ ಫಾರೆಸ್ಟರ್ ಪ್ರಮೋದ್ ಮನೆ ಬಳಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಅಲ್ಲದೆ ಹಲ್ಲೆ ನಡೆಸಿದ್ದಾರೆ.

ನಾನು ತನ್ನ ಜೀವವನ್ನು ಉಳಿಸಿಕೊಳ್ಳಲು ಫಾರೆಸ್ಟರ್ ಪ್ರಮೋದ್​ರನ್ನು ನೂಕಿ ಓಡಿ ಹೋದೆ. ಆದರೆ ಈಗ ನನ್ನ ಮೇಲೆಯೇ ಫಾರೆಸ್ಟರ್ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಜಟ್ಟಯ್ಯ ಅಳಲು.

ಜಟ್ಟಯ್ಯ ಜೀವ ಭಯದಿಂದ ಪಕ್ಕದ ಗ್ರಾಮದ ಸ್ನೇಹಿತನಿಗೆ ಕರೆ ಮಾಡಿ ಕಾರನ್ನು ತರಿಸಿಕೊಂಡು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಆದರೆ ಸಾಗರ ತಾಲೂಕಿನ ಕಾರ್ಗಲ್ ಪೊಲೀಸರು ಬಂದು ದೂರು ದಾಖಲಿಸಿಕೊಳ್ಳದೆ ತಾರತಮ್ಯ ನಡೆಸಿದ್ದಾರೆ ಎಂದು ಜಟ್ಟಯ್ಯ ಜೈನ್ ಆರೋಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.