ETV Bharat / jagte-raho

ರೌಡಿಶೀಟರ್ ಫ್ರೂಟ್‌ ಇರ್ಫಾನ್‌ ಮೇಲೆ ಗುಂಡಿನ ದಾಳಿ: ಚಿಕಿತ್ಸೆ ಫಲಿಸದೆ ಸಾವು - ಹುಬ್ಬಳ್ಳಿ ಸುದ್ದಿ

ನಗರದ ಕಾರವಾರ ರಸ್ತೆಯ ದುರ್ಗಾ ಬಾರ್ ಮುಂಭಾಗ ಬೈಕ್​​ನಲ್ಲಿ ಬಂದ ದುಷ್ಕರ್ಮಿಗಳು ರೌಡಿ ಶೀಟರ್​​ ಫ್ರೂಟ್​​ ಇರ್ಫಾನ್ ಮೇಲೆ ಗುಂಡು ಹಾರಿಸಿ ಪರಾರಿ ಆಗಿದ್ದರು. ಗಂಭೀರ ಗಾಯಗೊಂಡಿದ್ದ ಇರ್ಫಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ತಡರಾತ್ರಿ ಮೃತಪಟ್ಟಿದ್ದಾರೆ.

Fruit Irfan
ಫ್ರೂಟ್‌ ಇರ್ಫಾನ್‌
author img

By

Published : Aug 7, 2020, 5:34 AM IST

ಹುಬ್ಬಳ್ಳಿ: ಶೂಟೌಟ್​​ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರೌಡಿ ಶೀಟರ್​​ ಫ್ರೂಟ್​​ ಇರ್ಫಾನ್​​ ಚಿಕಿತ್ಸೆ ಫಲಿಸದೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ನಗರದ ಕಾರವಾರ ರಸ್ತೆಯ ದುರ್ಗಾ ಬಾರ್ ಮುಂಭಾಗ ಗುರುವಾರ ಸಂಜೆ ಬೈಕ್​​ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿ ಆಗಿದ್ದರು. ಗಂಭೀರ ಗಾಯಗೊಂಡಿದ್ದ ಇರ್ಫಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತೊಡೆ, ತಲೆಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಇರ್ಫಾನ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಇರ್ಫಾನ್​ ಮೇಲೆ ನಗರದ ಹಲವು ಠಾಣೆಗಳಲ್ಲಿ ದೂರು ದಾಖಲಾಗಿದ್ದವು. ಎರಡು ಕೊಲೆ, ಭೂ ಒತ್ತುವರಿ, ಜೀವ ಬೆದರಿಕೆಯಂತಹ ಆರೋಪ ಎದುರಿಸುತ್ತಿದ್ದ. ಹೀಗಾಗಿ, ಹಳೆ ವೈಷಮ್ಯವೇ ಶೂಟೌಟ್​​ಗೆ ಕಾರಣ ಎನ್ನಲಾಗುತ್ತಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.