ETV Bharat / jagte-raho

ರಾಜಕೀಯಕ್ಕೆ ಅಡ್ಡಿಯಾಗುತ್ತೆ ಎಂಬ ಕಾರಣಕ್ಕೆ ಮಗು ಕೊಂದ ಕಟುಕ ತಂದೆ, ಪೊಲೀಸರ ವಿಚಾರಣೆಯಲ್ಲಿ ಬಹಿರಂಗ... - ದಾವಣಗೆರೆ ಮಗು ಹತ್ಯೆ

ರಾಜಕೀಯವಾಗಿ ಬೆಳೆಯಬೇಕೆಂಬ ಹೆಬ್ಬಯಕೆ ಹೊಂದಿದ್ದ ನಿಂಗಪ್ಪನಿಗೆ ಎರಡನೇ ಮದುವೆಯಾದ ವಿಚಾರ ಗೊತ್ತಾದರೆ ತನ್ನ ಭವಿಷ್ಯಕ್ಕೆ ಮುಳ್ಳಾಗುತ್ತದೆ ಎಂಬ ಭಯ ಕಾಡಲಾರಂಭಿಸಿತು. ಇದಕ್ಕಾಗಿ ಮಗು ಕೊಂದರೆ ಎಲ್ಲವೂ ಸಲೀಸಲಾಗುತ್ತದೆ ಎಂಬ ಕಾರಣಕ್ಕೆ ಮಗುವನ್ನು ಕೊಲ್ಲಲು‌ ನಿರ್ಧರಿಸಿ ಹತ್ಯೆ ಮಾಡಿದ್ದಾನೆ.

father-murder-to-her-baby-case-in-davanagere
ರಾಜಕೀಯಕ್ಕೆ ಅಡ್ಡಿಯಾಗುತ್ತೆ ಎಂಬ ಕಾರಣಕ್ಕೆ ಮಗು ಕೊಂದ ಕಟುಕ ತಂದೆ, ಪೊಲೀಸರ ವಿಚಾರಣೆಯಲ್ಲಿ ಬಹಿರಂಗ...
author img

By

Published : Oct 14, 2020, 2:39 PM IST

ದಾವಣಗೆರೆ: ಜಗಳೂರು ತಾಲೂಕಿನ ಗುತ್ತಿದುರ್ಗ ಗ್ರಾಮದಲ್ಲಿ ಎರಡನೇ ಪತ್ನಿಯ ತನ್ನ ಸ್ವಂತ ಮಗುವನ್ನು ತಂದೆಯೇ ಕೊಂದು ಹಾಕಿ ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದೆ.

ರಾಜಕೀಯಕ್ಕೆ ಅಡ್ಡಿಯಾಗುತ್ತೆ ಎಂಬ ಕಾರಣಕ್ಕೆ ಮಗು ಕೊಂದ ಕಟುಕ ತಂದೆ, ಪೊಲೀಸರ ವಿಚಾರಣೆಯಲ್ಲಿ ಬಹಿರಂಗ...

ಸಂಬಂಧದಲ್ಲಿ ಸಹೋದರಿ‌ ಆಗಿದ್ದ ಆಕೆಯನ್ನು 2ನೇ ಮದುವೆ ಆಗಿದ್ದ ವಿಚಾರ ಬಹಿರಂಗ ಆಗುತ್ತೆ, ಬರುವ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ತೊಡಕುಂಟಾಗುತ್ತೆ. ಸಮಾಜದಲ್ಲಿ ಗೌರವಕ್ಕೆ ಧಕ್ಕೆ ಉಂಟಾಗುತ್ತದೆ ಎಂಬ ಕಾರಣಕ್ಕೆ ಹತ್ಯೆ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಜಗಳೂರಿಗೆ ಭೇಟಿ‌‌ ನೀಡಿದ ಚಿತ್ರದುರ್ಗ ಎಸ್ಪಿ ಜಿ.‌ ರಾಧಿಕಾ ತಿಳಿಸಿದ್ದಾರೆ.

ಆರೋಪಿ ನಿಂಗಪ್ಪ ಸಣ್ಣಪುಟ್ಟ ಗುತ್ತಿಗೆ ಕೆಲಸಗಳನ್ನು‌ ಗ್ರಾಮದಲ್ಲಿ ಮಾಡಿಸುತ್ತಿದ್ದ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸಿದ್ದ. ಆದರೆ ಎರಡನೇ ಪತ್ನಿ ತಮ್ಮ ಮದುವೆ ವಿಚಾರ ಎಲ್ಲರಿಗೂ ತಿಳಿಸಬೇಕೆಂಬ ಒತ್ತಡ ಹೇರುತ್ತಿದ್ದರು. ಈ ವಿಚಾರ ಗೊತ್ತಾದರೆ ಮರ್ಯಾದೆ ಸಿಗಲ್ಲ ಎಂಬ ಕಾರಣಕ್ಕೆ ಎರಡು ವರ್ಷ ಎಂಟು ತಿಂಗಳ ಶಿರಿಷಾಳ ಬಾಯಿಗೆ ಬಟ್ಟೆ ತುರುಕಿ ಕತ್ತು ಹಿಸುಕಿ ಕೊಲೆ‌ ಮಾಡಿ ತನ್ನ ಜಮೀನಿನಲ್ಲಿ‌ ಹೂತು‌ ಹಾಕಿದ್ದು ಬೆಳಕಿಗೆ ಬಂದಿದೆ.

ಪ್ರಕರಣದ ಹಿನ್ನೆಲೆ ಏನು...?

ನಿಂಗಪ್ಪ ಕಳೆದ ಹತ್ತು ವರ್ಷಗಳ ಹಿಂದೆ ತನ್ನದೇ ಗ್ರಾಮದ ಒಂದೇ ಜಾತಿಯ ಶಶಿಕಲಾರನ್ನು ಪ್ರೀತಿಸುತ್ತಿದ್ದ.‌ ಸಂಬಂಧದಲ್ಲಿ ಸಹೋದರಿ ಆಗ್ತಿದ್ದ ಕಾರಣ ಮದುವೆಗೆ ವಿರೋಧ ವ್ಯಕ್ತವಾಗಿತ್ತು. ಬಳಿಕ ಇಬ್ಬರು ಸಂಪರ್ಕ ಬಿಟ್ಟಿರಲಿಲ್ಲ. ಆದರೂ ನಿಂಗಪ್ಪ ತನ್ನ ಸ್ವಂತ ಅಕ್ಕನ ಮಗಳನ್ನು ಮದುವೆಯಾಗಿದ್ದು, ಆರು ತಿಂಗಳ ಮಗು ಸೇರಿದಂತೆ ಮೂವರು ಮಕ್ಕಳಿದ್ದಾರೆ. ಆದರೆ ಐದು ವರ್ಷಗಳ ಹಿಂದೆ ಯಾರಿಗೂ ಗೊತ್ತಾಗದಂತೆ ನರ್ಸ್ ಕೆಲಸ ಮಾಡುತ್ತಿದ್ದ ಶಶಿಕಲಾಳನ್ನು ಎರಡನೇ ವಿವಾಹವಾಗಿದ್ದ. ಗುಟ್ಟಾಗಿ ಸಂಸಾರ ಮಾಡುತ್ತಿದ್ದ ಈ ದಂಪತಿಗೆ ಶಿರಿಷಾ ಹೆಣ್ಣು ಮಗು ಇತ್ತು. ಇತ್ತೀಚಿನ ದಿನಗಳಲ್ಲಿ ಶಶಿಕಲಾ ಮದುವೆ ಆಗಿರುವ ವಿಚಾರ ಎಲ್ಲರಿಗೂ ತಿಳಿಸಿ ಎಂದು ಪದೇ ಪದೇ ಒತ್ತಡ ಹಾಕ್ತಿದ್ದಳು. ಮಾತ್ರವಲ್ಲ ಈ ವಿಚಾರಕ್ಕೆ ಸಂಬಂಧಿಸಿದಂತೆ ನಿಂಗಪ್ಪ ಹಾಗೂ ಶಶಿಕಲಾ ನಡುವೆ ಆಗಾಗ್ಗೆ ಗಲಾಟೆ ನಡೆಯುತಿತ್ತು.

ಇನ್ನು ರಾಜಕೀಯವಾಗಿ ಬೆಳೆಯಬೇಕೆಂಬ ಹೆಬ್ಬಯಕೆ ಹೊಂದಿದ್ದ ನಿಂಗಪ್ಪನಿಗೆ ಎರಡನೇ ಮದುವೆಯಾದ ವಿಚಾರ ಗೊತ್ತಾದರೆ ತನ್ನ ಭವಿಷ್ಯಕ್ಕೆ ಮುಳ್ಳಾಗುತ್ತದೆ ಎಂಬ ಭಯ ಕಾಡಲಾರಂಭಿಸಿತು. ಇದಕ್ಕಾಗಿ ಮಗು ಕೊಂದರೆ ಎಲ್ಲವೂ ಸಲೀಸಲಾಗುತ್ತದೆ ಎಂಬ ಕಾರಣಕ್ಕೆ ಮಗುವನ್ನು ಕೊಲ್ಲಲು‌ ನಿರ್ಧರಿಸಿ ಹತ್ಯೆ ಮಾಡಿದ್ದಾನೆ.

ಅಕ್ಟೋಬರ್ 9 ರಂದು ಶಶಿಕಲಾ ಚಿತ್ರದುರ್ಗ ಮಹಿಳಾ ಠಾಣೆಗೆ ಬಂದು ತನ್ನ‌ ಮಗು ಕಾಣ್ತಾ ಇಲ್ಲ.‌ ತನ್ನ ಗಂಡ ಅಪಹರಣ ಮಾಡಿದ್ದು, ಯಾವ ಸುಳಿವು ನೀಡ್ತಾ ಇಲ್ಲ. ಪತ್ತೆ ಹಚ್ಚಿ ಕೊಡಬೇಕು ಎಂದು ದೂರು ಕೊಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಪೊಲೀಸರು ನಿಂಗಪ್ಪನನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಹೊರ ಬಿದ್ದಿದೆ ಎಂದು ಮಾಹಿತಿ‌‌ ನೀಡಿದರು.

ಸೆಪ್ಟೆಂಬರ್ 7 ರಂದು ಚಿತ್ರದುರ್ಗದ ಕೆಳಗಟ್ಟೆಯಿಂದ ಬೈಕ್‌ನಲ್ಲಿ ಕರೆದುಕೊಂಡು ಬಂದಿದ್ದಾನೆ.‌ ಕೇಳಿದವರಿಗೆ ಮಗುವನ್ನು ಅನಾಥಾಶ್ರಮಕ್ಕೆ ಸೇರಿಸುವುದಾಗಿ ಹೇಳಿದ್ದಾನೆ.‌ ಆದ್ರೆ ಮಗು ಕೊಂದು ಹಾಕಿ ತನ್ನ ಜಮೀನಿನಲ್ಲಿ‌ ಎರಡೂವರೆ ಅಡಿ ಆಳ ತೆಗೆದು ಹೂತು ಹಾಕಿದ್ದಾನೆ. ಬಳಿಕ ಏನು ಗೊತ್ತಿಲ್ಲದಂತೆ ವರ್ತಿಸುತ್ತಿದ್ದ. ವಿಚಾರಣೆಗೆ ಒಳಪಡಿಸಿದಾಗ ಮಗು ಕೊಂದು ಹೂತು ಹಾಕಿದ್ದ ಜಾಗ ತೋರಿಸಿದ್ದಾನೆ.‌ ಮಗುವಿನ ಮೃತದೇಹ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಒಟ್ಟಿನಲ್ಲಿ ತನ್ನ ರಾಜಕೀಯದ ಆಸೆಗೆ ಮಗು ಕೊಂದ ಈ ಪಾಪಿ ತಂದೆಗೆ ತಕ್ಕ ಶಿಕ್ಷೆಯಾಗಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.