ETV Bharat / jagte-raho

ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ 8 ಜನರ ಬಂಧನ - ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ 8 ಜನರ ಬಂಧನ

ಮೈಸೂರಿನ ಬೋಗಾದಿ ರಿಂಗ್ ರಸ್ತೆಯಲ್ಲಿರುವ ಭೋಗಲಿಂಗೇಶ್ವರ ದೇವಸ್ಥಾನದ ಬಳಿ ಒಂಟಿಯಾಗಿ ಓಡಾಡುವವರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ 8 ಜನ‌ ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ.

ಸರಸ್ವತಿಪುರಂ ಪೊಲೀಸ್ ಠಾಣೆ
ಸರಸ್ವತಿಪುರಂ ಪೊಲೀಸ್ ಠಾಣೆ
author img

By

Published : Sep 16, 2020, 2:34 PM IST

ಮೈಸೂರು: ನಗರದ ಬೋಗಾದಿ ರಿಂಗ್ ರಸ್ತೆಯಲ್ಲಿ ಒಂಟಿಯಾಗಿ ಓಡಾಡುವವರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ 8 ಜನ‌ ಕುಖ್ಯಾತ ದರೋಡೆಕೋರರನ್ನು ಸರಸ್ವತಿಪುರಂ ಪೊಲೀಸರು ಬಂಧಿಸಿದ್ದಾರೆ.

ಶರತ್, ಸುಮಂತ್, ಧರ್ಮೇಶ್, ದಿನೇಶ್, ಸುನೀಲ್, ಶಶಾಂಕ್, ಕಾರ್ತೀಕ್‌ ಮತ್ತು ಮಹದೇವ್ ಬಂಧಿತ ಆರೋಪಿಗಳು.

ಸರಸ್ವತಿಪುರಂ ಪೊಲೀಸರು ಗಸ್ತಿನಲ್ಲಿದ್ದ ವೇಳೆ ಬೋಗಾದಿ ರಿಂಗ್ ರಸ್ತೆಯಲ್ಲಿರುವ ಭೋಗಲಿಂಗೇಶ್ವರ ದೇವಸ್ಥಾನದ ಹತ್ತಿರ ಅನುಮಾನಾಸ್ಪದವಾಗಿ ಕಾರಿನಲ್ಲಿ 8 ಜನ ನಿಂತಿದ್ದರು. ಪೊಲೀಸರು ವಿಚಾರಣೆ ನಡೆಸಿದಾಗ ಒಂಟಿ ವ್ಯಕ್ತಿಗಳನ್ನು ಹಾಗೂ ವಾಹನ ಸವಾರರನ್ನು ಹೆದರಿಸಿ ಅವರಿಂದ ಹಣ ಮತ್ತು ಚಿನ್ನಾಭರಣಗಳನ್ನು ದರೋಡೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಬಂಧಿತರಿಂದ 6,000 ರೂ. ನಗದು, 1 ಮಾರುತಿ ವ್ಯಾನ್, 4 ಬೈಕ್ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಹಾಕಿ ಸ್ಟಿಕ್, ಚಾಕು, ರಾಡ್ ಮತ್ತು ಒಂದು ಲಾಂಗ್ ವಶಪಡಿಸಿಕೊಂಡಿದ್ದಾರೆ.

ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ನಗರದ 5 ಪೊಲೀಸ್ ಠಾಣೆಗಳಾದ ಸರಸ್ವತಿಪುರಂ, ವಿದ್ಯಾರಣ್ಯ ಪುರಂ, ಲಕ್ಷ್ಮೀ ಪುರಂ‌, ವಿಜಯನಗರ ಹಾಗೂ ಕೆ.ಆರ್ ಠಾಣಾ ವ್ಯಾಪ್ತಿಯ ದರೋಡೆ ಪ್ರಕರಣಗಳಲ್ಲಿ ಇವರು ಭಾಗಿಯಾಗಿರುವುದು ತಿಳಿದು ಬಂದಿದೆ. ಈ‌ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.