ಹೈದರಾಬಾದ್: ಅಂತ್ಯಕ್ರಿಯೆ ನೆರವೇರಿಸಲು ಹಣವಿಲ್ಲದೆ ಹೆತ್ತಮ್ಮನ ಮೃತದೇಹವನ್ನ ಫುಟ್ಪಾತ್ನಲ್ಲೇ ಮಗ ಬಿಟ್ಟು ಹೋಗಿರುವ ಘಟನೆ ತೆಲಂಗಾಣದ ಹೈದರಾಬಾದ್ನ ಬಂಜಾರ ಹಿಲ್ಸ್ನಲ್ಲಿ ನಡೆದಿದೆ.
ಕಳೆದ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರೂ ಕೈಯಲ್ಲಿ ಹಣವಿಲ್ಲದ ಕಾರಣ ಹಾಗೂ ಕೊರೊನಾ ಭೀತಿಯಿಂದಾಗಿ ತಾಯಿಯನ್ನು ಮಗ ರಮೇಶ್ ಆಸ್ಪತ್ರೆಗೆ ಕರೆದುಕೊಂಡು ಹೋಗಲೇ ಇಲ್ಲ. ಕೊನೆಗೆ ತಾಯಿ ಮೃತಪಟ್ಟ ಬಳಿಕ ಅಂತಿಮ ಕಾರ್ಯ ನಡೆಸಲು ಕೂಡ ಬಿಡಿಗಾಸು ಜೇಬಲ್ಲಿರಲಿಲ್ಲ. ಹೀಗಾಗಿ ದಿಕ್ಕು ತೋಚದಂತಾದ ರಮೇಶ್, ಮೃತದೇಹವನ್ನ ರಸ್ತೆ ಬದಿ ಇಟ್ಟು ಹೋಗಿದ್ದಾನೆ.
ಇಂದು ಬೆಳಗ್ಗೆ ಶವವನ್ನು ಕಂಡ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೃತ ಮಹಿಳೆಯನ್ನು ರಮೇಶ್ನ ತಾಯಿ ಭಾಗಿರಥಿ (68) ಎಂದು ಗುರುತಿಸಿ, ತನಿಖೆ ನಡೆಸಿದ್ದಾರೆ.