ETV Bharat / jagte-raho

ಮಗುವನ್ನೂ ಲೆಕ್ಕಿಸದೆ ಮನೆಗೆ ಬೆಂಕಿ ಹಚ್ಚಿದ ಕುಡುಕ...! - a drunken man set ablaze his house, burning his wife and her family members

ಕುಡಿದು ಬಂದಾಗ ಪತ್ನಿಯು ಮನೆ ಬಾಗಿಲು ತೆರೆದಿಲ್ಲ ಎಂಬ ಕಾರಣಕ್ಕೆ ಪತಿರಾಯ ಮನೆಗೆ ಬೆಂಕಿ ಹಚ್ಚಿದ್ದಾನೆ. ಘಟನೆ ವೇಳೆ ಮನೆಯೊಳಗೆ ಒಂದೂವರೆ ತಿಂಗಳ ಮಗು ಸೇರಿದಂತೆ ಏಳು ಮಂದಿ ಇದ್ದರು.

Drunken man sets ablaze house
ಪತ್ನಿ, ಮಗುವನ್ನು ಕೊಲ್ಲಲು ಮನೆಗೆ ಬೆಂಕಿ ಹಚ್ಚಿದ ಕುಡುಕ
author img

By

Published : Jan 15, 2021, 12:58 PM IST

ಕಾನ್ಪುರ (ಉತ್ತರ ಪ್ರದೇಶ): ಮನೆಗೆ ಬೆಂಕಿ ಹಚ್ಚಿದ ಕುಡುಕ ವ್ಯಕ್ತಿ ತನ್ನ ಪತ್ನಿ, ಒಂದೂವರೆ ತಿಂಗಳ ಮಗು ಸೇರಿದಂತೆ ಇಡೀ ಕುಟುಂಬಸ್ಥರನ್ನು ಕೊಲ್ಲಲು ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ನಡೆದಿದೆ.

ಇಂದು ನಸುಕಿನ ಜಾವ 4 ಗಂಟೆಯ ವೇಳೆಗೆ ಕುಡಿದು ಬಂದ ಪತಿರಾಯನನ್ನು ಪತ್ನಿ ಮನೆಯೊಳಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದಾಳೆ. ಕೋಪಗೊಂಡ ಆತ ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಹಚ್ಚಿದ್ದಾನೆ.

ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮನೆಯೊಳಗಿದ್ದ ಏಳು ಮಂದಿಯನ್ನೂ ರಕ್ಷಿಸಿದ್ದಾರೆ. ಮಗು ಸುರಕ್ಷಿತವಾಗಿದ್ದು, ಉಳಿದವರು ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ಗಾಯಾಳುಗಳನ್ನು ಕಾನ್ಪುರದ ಉರ್ಸಲಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ- ಹೊಸಪೇಟೆ: ಮಗುವಿನೊಂದಿಗೆ ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಜೂಹಿ ಠಾಣಾ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.