ETV Bharat / jagte-raho

ಶಿಕ್ಷಕಿಯರನ್ನು ನಿಂದಿಸಿದ್ದಲ್ಲದೇ, ಶಿಕ್ಷಕನ ಮೇಲೆ ಹಲ್ಲೆ ಮಾಡಿದ ಕುಡುಕ ಮಹಾಶಯ..

ಮುಗಳಿ ಗ್ರಾಮದಲ್ಲಿ ತಮಗೆ ರಕ್ಷಣೆಯಿಲ್ಲ. ಪದೇಪದೆ ಶಿಕ್ಷಕರಿಗೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ಈ ಘಟನೆಯಿಂದ ಭಯವಾಗ್ತಿದ್ದು, ತಮ್ಮನ್ನ ಬೇರೆಡೆ ವರ್ಗಾವಣೆ ಮಾಡಬೇಕೆಂದು ಮನವಿ..

drunkard assaulted to teacher chikkodi news
ಶಿಕ್ಷಕನ ಮೇಲೆ ಹಲ್ಲೆ ಮಾಡಿದ ಕುಡುಕ ಮಹಾಶಯ
author img

By

Published : Nov 27, 2020, 3:18 PM IST

ಚಿಕ್ಕೋಡಿ : ಮದ್ಯದ ಅಮಲಿನಲ್ಲಿ ವ್ಯಕ್ತಿಯೋರ್ವ ಕರ್ತವ್ಯನಿರತ ಶಿಕ್ಷಕಿಯರಿಗೆ ನಿಂದಿಸಿ, ಶಿಕ್ಷಕನ ಮೇಲೆ ಹಲ್ಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದಿದೆ.

drunkard assaulted to teacher chikkodi news
ಶಿಕ್ಷಕನ ಮೇಲೆ ಹಲ್ಲೆ ಮಾಡಿದ ಕುಡುಕ ಮಹಾಶಯ

ಮುಗಳಿ ಗ್ರಾಮದ ರಾಜು ಪಾಟೀಲ ಎಂಬ ವ್ಯಕ್ತಿಯು, ಶಿಕ್ಷಕಿಯರನ್ನು ಬೆನ್ನಟ್ಟಿ ಕುಡಿದ ಅಮಲಿನಲ್ಲಿ ನಿಂದಿಸಲು ಪ್ರಾರಂಭಿಸಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಶಿಕ್ಷಕ ಮಹಾದೇವ ಬಜಂತ್ರಿ ಎಂಬುವರು, ಆ ವ್ಯಕ್ತಿಯನ್ನು ಸಮಾಧಾನಪಡಿಸಲು ಮುಂದಾದಾಗ ಮದ್ಯದ ಅಮಲಿನಲ್ಲಿದ್ದ ರಾಜು ಪಾಟೀಲ, ಶಿಕ್ಷಕನ ಮೇಲೆ ಹಲ್ಲೆ ಮಾಡಿದ್ದಾನೆ. ಗಾಯಗೊಂಡ ಶಿಕ್ಷಕ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಈ ಘಟನೆಯಿಂದ ಭಯಭೀತರಾದ ಶಿಕ್ಷಕರು ಗುರುವಾರ ಸಾಯಂಕಾಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತೆರಳಿ, ಮುಗಳಿ ಗ್ರಾಮದಲ್ಲಿ ತಮಗೆ ರಕ್ಷಣೆಯಿಲ್ಲ. ಪದೇಪದೆ ಶಿಕ್ಷಕರಿಗೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ಈ ಘಟನೆಯಿಂದ ಭಯವಾಗ್ತಿದ್ದು, ತಮ್ಮನ್ನ ಬೇರೆಡೆ ವರ್ಗಾವಣೆ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಹಲ್ಲೆಗೊಳಗಾದ ಶಿಕ್ಷಕ ಮಹಾದೇವ ಬಜಂತ್ರಿ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದನ್ನೂ ಓದಿ: ಪಾಕ್​​ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ: ಇಬ್ಬರು ಯೋಧರು ಹುತಾತ್ಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.