ಮೈಸೂರು: ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಅತಿಯಾದ ಮದ್ಯ ಕುಡಿದು, ಮೋಜು ಮಸ್ತಿ ಮಾಡಿದ್ದ ವಿದ್ಯಾರ್ಥಿಯೊಬ್ಬ ತೀವ್ರ ಅಸ್ವಸ್ಥನಾಗಿ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.
ಮೈಸೂರು ನಗರದ 2ನೇ ಈದ್ಗಾ ನಿವಾಸಿಯಾದ ಕಾರ್ತಿಕ್ (22) ಮೃತ. ಈತ ಹೊಸ ವರ್ಷ ಆಚರಣೆಗೆ ಪಾರ್ಟಿ ಮಾಡಲೆಂದು ತನ್ನ ಸ್ನೇಹಿತರೊಡನೆ ಹೋಗಿದ್ದಾನೆ. ಪಾರ್ಟಿಯ ಸಂದರ್ಭದಲ್ಲಿ ಅತಿಯಾಗಿ ಕುಡಿದು, ತೀವ್ರ ಅಸ್ವಸ್ಥನಾಗಿದ್ದನು. ನಂತರ ಈತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಇನ್ನು ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.