ನವದೆಹಲಿ: ಸದ್ಯದ ವಿದ್ಯಮಾನದಲ್ಲಿ ಯುವ ಸಮೂಹವನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವ ಟಿಕ್ಟಾಕ್ ಹಲವಾರು ಸಾವು - ನೋವಿಗೂ ಕಾರಣವಾಗಿದೆ. ಇದೇ ಆ್ಯಪ್ ಇದೀಗ ಓರ್ವನನ್ನು ಜೈಲುಪಾಲಾಗುವಂತೆ ಮಾಡಿದೆ.
ಫೈಜಾನ್ ಹೆಸರಿನ ದೆಹಲಿ ಮೂಲಕ ಯುವಕ ತನ್ನ ಹುಟ್ಟುಹಬ್ಬವನ್ನು ಅವಿಸ್ಮರಣೀಯವಾಗಿ ಆಚರಿಸಿಕೊಳ್ಳುವ ಇರಾದೆ ಹೊಂದಿದ್ದ. ಈ ನಿಟ್ಟಿನಲ್ಲಿ ಆತ ನಾಡಬಂದೂಕಿನಿಂದ ಗುಂಡು ಹಾರಿಸಿ ಅದನ್ನು ಚಿತ್ರೀಕರಿಸಿದ್ದ.
ಈ ವಿಡಿಯೋವನ್ನುಫೈಜಾನ್ ಟಿಕ್ಟಾಕ್ನಲ್ಲಿ ಅಪ್ಲೋಡ್ ಮಾಡಿದ್ದ. ಈ ವಿಡಿಯೋ ಫೇಸ್ಬುಕ್, ವಾಟ್ಸ್ಆ್ಯಪ್ಗಳಲ್ಲಿ ಹರಿದಾಡಿತ್ತು. ಇದು ದೆಹಲಿ ಪೊಲೀಸರಿಗೂ ತಲುಪಿತ್ತು. ದೆಹಲಿ ಸೈಬರ್ ಪೊಲೀಸರು ಆತನಿರುವ ಸ್ಥಳವನ್ನು ಪತ್ತೆಹಚ್ಚಿ ಜೈಲಿಗಟ್ಟಿದ್ದಾರೆ.
ತನಿಖೆಯ ವೇಳೆ ಫೈಜಾನ್ ತಪ್ಪೊಪ್ಪಿಕೊಂಡಿದ್ದು, ಆತನಿಂದ ಮೊಬೈಲ್ ಫೋನ್ ಹಾಗೂ ಬಂದೂಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.