ETV Bharat / jagte-raho

ಕೋವಿಡ್​​ ಸೋಂಕಿತ ವೈದ್ಯನಿಂದಲೇ ರೋಗಿಗೆ ಲೈಂಗಿಕ ಕಿರುಕುಳ! - ಲೈಂಗಿಕ ಕಿರುಕುಳ

ಕೋವಿಡ್​​ ಸೋಂಕಿತ ಯುವತಿ ಮೇಲೆ ಸೋಂಕು ತಗುಲಿ ಅದೇ ಐಸೋಲೇಷನ್ ವಾರ್ಡ್​ನಲ್ಲಿ ದಾಖಲಾಗಿದ್ದ ವೈದ್ಯನೇ ಲೈಂಗಿಕ ಕಿರುಕುಳ ನೀಡಿದ್ದಾನೆ.

molestation
ಲೈಂಗಿಕ ಕಿರುಕುಳ
author img

By

Published : Jul 28, 2020, 3:47 PM IST

ನೋಯ್ಡಾ(ಉತ್ತರ ಪ್ರದೇಶ): ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದ ಯುವತಿಗೆ ಸೋಂಕಿತ ವೈದ್ಯನೇ ಲೈಂಗಿಕ ಕಿರುಕುಳ ನೀಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

ಸೋಂಕು ದೃಢಪಟ್ಟ ಬಳಿಕ ಯುವತಿಯೋರ್ವಳು ನೋಯ್ಡಾದ ಖಾಸಗಿ ಆಸ್ಪತ್ರೆಯ ಐಸೋಲೇಷನ್​ ವಾರ್ಡ್​ನಲ್ಲಿ ದಾಖಲಾಗಿದ್ದಳು. ಆಸ್ಪತ್ರೆಯ ವೈದ್ಯನೊಬ್ಬನಿಗೂ ಸೋಂಕು ತಗುಲಿದ್ದು, ಆತ ಕೂಡ ಅದೇ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಈ ವೇಳೆ ವೈದ್ಯನು ಕಿರುಕುಳ ನೀಡಿರುವುದಾಗಿ ಯುವತಿ ಆರೋಪಿಸಿದ್ದಾಳೆ ಎಂದು ಹೆಚ್ಚುವರಿ ಉಪ ಪೊಲೀಸ್ ವರಿಷ್ಠಾಧಿಕಾರಿ ರಣವಿಜಯ್ ಸಿಂಗ್ ತಿಳಿಸಿದ್ದಾರೆ.

ಘಟನೆ ಸಂಬಂಧ ಎಫ್​ಐಆರ್​ ದಾಖಲಿಸಿಕೊಂಡಿದ್ದು, ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಣವಿಜಯ್ ಸಿಂಗ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.