ETV Bharat / jagte-raho

ಸಿಗ್ನಲ್ ಜಂಪ್​ಗೆ ಯತ್ನಿಸಿದ ಬೈಕ್​ ಸವಾರ ಸಾವು - undefined

ಸಿಗ್ನಲ್​ ಜಂಪ್​ ಮಾಡುವಾಗ ಗೂಡ್ಸ್​ ಆಟೋದ ಚಕ್ರಕ್ಕೆ ಸಿಲುಕಿ ಬೈಕ್ ಸವಾರನೊಬ್ಬ ಮೃತಪಟ್ಟಿದ್ದಾನೆ.

ACCIDENT
author img

By

Published : Jul 8, 2019, 7:36 PM IST

ಮೈಸೂರು: ಸಿಗ್ನಲ್‌ ದಾಟುವಾಗ ಗೂಡ್ಸ್ ಆಟೋದ ಚಕ್ರಕ್ಕೆ ಸಿಲುಕಿ‌ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಮಹಾರಾಣಿ ಕಾಲೇಜಿನ‌ ಸಿಗ್ನಲ್​ನಲ್ಲಿ ನಡೆದಿದೆ. ಮೃತ ವ್ಯಕ್ತಿಯ ಹೆಸರು ವಿಳಾಸ ತಿಳಿದು ಬಂದಿಲ್ಲ.

ಚಕ್ರದಡಿ ಸಿಲುಕಿದ ಮೃತದೇಹವನ್ನು ಹೊರ ತೆಗೆದ ಪೊಲೀಸರು.

ಮಹಾರಾಣಿ ಕಾಲೇಜು ಹಾಗೂ ದೇವರಾಜ ಅರಸು ರಸ್ತೆಯ ಕಾಫಿ ಡೇ ಸಿಗ್ನಲ್​ನಲ್ಲಿ ಸಿಗ್ನಲ್​ ಜಂಪ್​ ಮಾಡುವ ಸಂದರ್ಭದಲ್ಲಿ ಬೈಕ್ ಸವಾರ ವೇಗವಾಗಿ ಮುನ್ನುಗ್ಗಲು ಯತ್ನಿಸಿದ್ದಾನೆ. ಆಗ ಆಯತಪ್ಪಿ ಗೂಡ್ಸ್ ಆಟೋದ ಹಿಂಬದಿ ಚಕ್ರಕ್ಕೆ ಸಿಲುಕಿದ್ದಾನೆ. ಸ್ಥಳಕ್ಕೆ ಆಗಮಿಸಿದ ದೇವರಾಜ ಸಂಚಾರಿ ಠಾಣೆಯ ಪೊಲೀಸರು, ಮೃತದೇಹವನ್ನು ಶವಪರೀಕ್ಷೆಗಾಗಿ ಆಸ್ಪತ್ರೆಗೆ ವರ್ಗಾಯಿಸಿದ್ದಾರೆ.

Intro:ಮೈಸೂರು: ಸಿಗ್ನಲ್‌ ದಾಟುವಾಗ ಗೂಡ್ಸ್ ಆಟೋದ ಚಕ್ರಕ್ಕೆ ಸಿಲುಕಿ‌ ಬೈಕ್ ಸವಾರ ಸಾವನಪ್ಪಿರುವ ಘಟನೆ ಮಹಾರಾಣಿ ಕಾಲೇಜಿನ‌ ಸಿಗ್ನಲ್ ನಲ್ಲಿ ನಡೆದಿದೆ.

Body:ಮಹಾರಾಣಿ ಕಾಲೇಜು ಹಾಗೂ ದೇವರಾಜ ಅರಸು ರಸ್ತೆಯ ಕಾಫಿ ಡೇ ಸಿಗ್ನಲ್ ನಲ್ಲಿ ಗೂಡ್ಸ್ ವಾಹನವು ಸಿಗ್ನಲ್ ದಾಟಲು ಬರುತ್ತಿದ್ದ ಬೈಕ್ ಸವಾರ ವೇಗವಾಗಿ ಮುನ್ನುಗ್ಗಲು ಯತ್ನಿಸಿದಾಗ ಆಯಾ ತಪ್ಪಿ ಗೂಡ್ಸ್ ಆಟೋದ ಹಿಂಬದಿ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ.‌ ಸ್ಥಳಕ್ಕೆ ದೇವರಾಜ ಸಂಚಾರಿ ಠಾಣೆಯ ಪೋಲಿಸರು ಆಗಮಿಸಿ ಶವವನ್ನು ಶವಗಾರಕ್ಕೆ ಸಾಗಿಸಿದ್ದು ಅಪಘಾತದಲ್ಲಿ ವ್ಯಕ್ತಿ ಯಾರು ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.