ಚಿಕ್ಕೋಡಿ: ಪಿಕಪ್ ಸರಕು ವಾಹನ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೆಂಪವಾಡದಲ್ಲಿ ನಡೆದಿದೆ.
ಕೆಂಪವಾಡ ಶುಗರ್ ಕಾರ್ಖಾನೆಯ ಹಿಂಬದಿ ಈ ಘಟನೆ ಸಂಭವಿಸಿದ್ದು, ಗ್ರಾಮದ ಪ್ರಮೋದ್ ಕೋಳಿ (23) ಮೃತಪಟ್ಟಿದ್ದಾರೆ. ಮೃತ ಪ್ರಮೋದ್ ಕೆಂಪವಾಡ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗುತ್ತಿದೆ.
ಬೈಕ್-ಟೆಂಪೋ ಡಿಕ್ಕಿ: ಸ್ಥಳದಲ್ಲೇ ಸವಾರ ಸಾವು
ಸಕ್ಕರೆ ಕಾರ್ಖಾನೆ ಕಡೆಯಿಂದ ಕೆಂಪವಾಡ ಗ್ರಾಮದ ಕಡೆ ತೆರಳುವಾಗ ಪಿಕಪ್ ಗೂಡ್ಸ್ ವಾಹನಕ್ಕೆ ಜೊರಾಗಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.