ETV Bharat / jagte-raho

ಟೊರೊಂಟೊದಲ್ಲಿ ಬಲೂಚಿಸ್ತಾನದ ಹೋರಾಟಗಾರ್ತಿ ಶವವಾಗಿ ಪತ್ತೆ - Balochistan

ಬಲೂಚಿಸ್ತಾನದ ಮಹಿಳಾ ಚಳವಳಿಯ ಪ್ರವರ್ತಕಿ ಎಂದೇ ಹೆಸರಾದ ಕರೀಮಾ ಬಲೂಚ್, ಕೆನಡಾದ ಟೊರೊಂಟೊದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

Baloch activist found dead in Toronto
ಕರೀಮಾ ಬಲೂಚ್
author img

By

Published : Dec 22, 2020, 10:19 AM IST

ಟೊರೊಂಟೊ (ಕೆನಡಾ): ಪಾಕಿಸ್ತಾನ ಸೇನೆ ಮತ್ತು ಬಲೂಚಿಸ್ತಾನದಲ್ಲಿ ಸರ್ಕಾರದ ದೌರ್ಜನ್ಯದ ಬಗ್ಗೆ ಧ್ವನಿ ಎತ್ತಿದ್ದ ಸಾಮಾಜಿಕ ಕಾರ್ಯಕರ್ತೆ ಕರೀಮಾ ಬಲೂಚ್ ಕೆನಡಾದ ಟೊರೊಂಟೊದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಭಾನುವಾರದಿಂದ ನಾಪತ್ತೆಯಾಗಿದ್ದ ಕರೀಮಾರನ್ನು ಪತ್ತೆ ಹಚ್ಚಲು ಟೊರೊಂಟೊ ಪೊಲೀಸರು ಸಾರ್ವಜನಿಕ ನೆರವು ಕೋರಿದ್ದರು. ಆದರೆ ಈಗ ಅವರ ಕುಟುಂಬಸ್ಥರು ಕರೀಮಾರ ಮೃತದೇಹ ಪತ್ತೆಯಾಗಿದೆ ಎಂದು ಖಚಿತಪಡಿಸಿದೆ ಎಂದು ಬಲೂಚಿಸ್ತಾನ್​ ಪೋಸ್ಟ್​ ವರದಿ ಮಾಡಿದೆ.

ಓದಿ: ಪಿಎಂ ಮೋದಿಗೆ ಪ್ರತಿಷ್ಠಿತ 'ಲೀಜನ್ ಆಫ್ ಮೆರಿಟ್' ಗಿಫ್ಟ್​ ನೀಡಿದ ಟ್ರಂಪ್

2016 ರಲ್ಲಿ ವಿಶ್ವದ 100 ಅತ್ಯಂತ 'ಸ್ಪೂರ್ತಿದಾಯಕ ಮತ್ತು ಪ್ರಭಾವಶಾಲಿ' ಮಹಿಳೆಯರ ಪಟ್ಟಿಯಲ್ಲಿ ಕರೀಮಾ ಬಲೂಚ್ ಅವರ ಹೆಸರನ್ನು ಬಿಬಿಸಿ ಪ್ರಕಟಿಸಿತ್ತು. ಬಲೂಚಿಸ್ತಾನದಲ್ಲಿ ಮಹಿಳಾ ಚಳವಳಿಯ ಪ್ರವರ್ತಕಿ ಎಂದೇ ಇವರನ್ನು ಕರೆಯಲಾಗುತ್ತದೆ.

ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಅಧಿವೇಶನಗಳಲ್ಲಿ ಕರೀಮಾ ಅವರು ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಹಕ್ಕು, ಸಮಾನತೆ, ಹೆಣ್ಣಿನ ಮೇಲೆ ಹಲ್ಲೆ-ದೌರ್ಜನ್ಯಗಳ ಬಗ್ಗೆ ಮಾತನಾಡಿದ್ದಾರೆ. ಪಾಕಿಸ್ತಾನದ ಭದ್ರತಾ ಪಡೆಗಳು ಮನೆಗಳಿಗೆ ನುಗ್ಗಿ ಮಹಿಳೆಯರು ಮತ್ತು ಮಕ್ಕಳ ಹಲ್ಲೆ ನಡೆಸುವುದು, ಲೈಂಗಿಕ ದೌರ್ಜನ್ಯ ನಡೆಸುತ್ತವೆ ಎಂದು ಆರೋಪಿಸಿ ಇದರ ವಿರುದ್ಧ ದನಿ ಎತ್ತಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.