ಮುಂಬೈ: ಭೂಗತ ಪಾತಕಿ, ಗ್ಯಾಂಗ್ಸ್ಟರ್ ಅಬು ಸಲೇಂ ಹೆಸರಿನಲ್ಲಿ ನಟ, ನಿರ್ದೇಶಕ, ನಿರ್ಮಾಪಕ ಮಹೇಶ್ ಮಂಜ್ರೇಕರ್ ಅವರಿಂದ 35 ಕೋಟಿ ರೂ. ಸುಲಿಗೆ ಮಾಡಲು ಬೆದರಿಕೆ ಸಂದೇಶಗಳು ಬರುತ್ತಿವೆ.
ಕಳೆದ ಕೆಲವು ದಿನಗಳಿಂದ ಮಹೇಶ್ ಅವರ ವಾಟ್ಸ್ಆ್ಯಪ್ಗೆ ಸುಲಿಗೆಗಾಗಿ ಸಂದೇಶಗಳು ಬರುತ್ತಿದ್ದವು. ಯಾರಾದರೂ ತಮಾಷೆ ಮಾಡುತ್ತಿರಬಹುದು ಎಂದು ಆರಂಭದಲ್ಲಿ ಮಹೇಶ್ ಮಂಜ್ರೇಕರ್ ನಿರ್ಲಕ್ಷಿಸಿದ್ದಾರೆ. ಆದರೆ ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ.
ಹೀಗಾಗಿ ಮಹೇಶ್ ಮಂಜ್ರೇಕರ್ ಮುಂಬೈ ಪೊಲೀಸರ ಸುಲಿಗೆ ವಿರೋಧಿ ದಳಕ್ಕೆ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ವಾಟ್ಸ್ಆ್ಯಪ್ ಸಂದೇಶ ಕಳುಹಿಸಿದ ಮೊಬೈಲ್ ಸಂಖ್ಯೆಯನ್ನಾಧರಿಸಿ ಪೊಲೀಸರು ರತ್ನಗಿರಿಯ ಯುವಕನನ್ನು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.