ETV Bharat / jagte-raho

ಪ್ರೀತಿಗೆ ನಕಾರ... ಯುವತಿಯ ಕತ್ತು ಸೀಳಿ ಕೊಂದ ಪಾಗಲ್ ಪ್ರೇಮಿಯ ಗತಿ ಏನಾಯ್ತು? - A young woman murdered in Doddaballapur

ಪ್ರೀತಿಸಲು ನಿರಾಕರಿಸಿದಳು ಎಂಬ ಕಾರಣಕ್ಕೆ ಆಕೆಯ ಕುತ್ತಿಗೆ ಕೊಯ್ದು ಕೊಂದು ಪರಾರಿಯಾಗಿದ್ದ ಆರೋಪಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

A young woman murdered by strangulation
author img

By

Published : Nov 15, 2019, 4:15 AM IST

ದೊಡ್ಡಬಳ್ಳಾಪುರ: ಪ್ರೀತಿಸಲು ನಿರಾಕರಿಸಿದಳು ಎಂಬ ಕಾರಣಕ್ಕೆ ಕುರಿ ಮೇಯಿಸುತ್ತಿದ್ದ ವೇಳೆ ಯುವತಿಯನ್ನು ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಲಿಂಗನಹಳ್ಳಿ ಬಳಿ ನಡೆದಿದೆ.

ಇದನ್ನೂ ಓದಿ..ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಬಲಿಯಾದಳಾ ಈ ಬಾಲಕಿ...?

ನವೆಂಬರ್​ 12ರ ಮಧ್ಯಾಹ್ನ ತಾಲೂಕಿನ ಲಿಂಗನಹಳ್ಳಿಯಲ್ಲಿ ಯುವತಿ ಅಂಜಲಿ (20) ಹತ್ಯೆ ಮಾಡಲಾಗಿತ್ತು. ಪ್ರಕರಣ ಬೆನ್ನುಹತ್ತಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಗ್ರಾಮದ ಮಹೇಶ್ ಕುಮಾರ್ (23) ಎಂಬಾತನನ್ನು ಬಂಧಿಸಿದ್ದಾರೆ. ಅಂಜಲಿಯನ್ನು ಬಂಧಿತ ಆರೋಪಿ ಮಹೇಶ್​ ಪ್ರೀತಿಸುತ್ತಿದ್ದ ಎನ್ನಲಾಗುತ್ತಿದೆ. ಅಂಜಲಿಗೆ ತನ್ನ ಅತ್ತೆ ಮಗನ ಜೊತೆ ಮದುವೆ ನಿಶ್ಚಯವಾಗಿ ಮದುವೆಯ ಸಿದ್ಧತೆ ನಡೆಯುತ್ತಿತ್ತು. ಇದರಿಂದ ಕುಪಿತಗೊಂಡ ಮಹೇಶ್​​, ಯುವತಿಯನ್ನು ಕತ್ತು ಸೀಳಿ ಕೊಲೆಗೈದು ಪರಾರಿಯಾಗಿದ್ದ.

ಯುವತಿ ಕೊಲೆಯಾದ ಜಾಗ

ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡಿವೈಎಸ್ಪಿ ರಂಗಪ್ಪ ನೇತೃತ್ವದಲ್ಲಿ ಆರೋಪಿ ಬಂಧನಕ್ಕಾಗಿ ತಂಡ ರಚಿಸಲಾಯಿತು. ಖಚಿತ ಮಾಹಿತಿ ಮೇರೆಗೆ ಹೊಸಕೋಟೆ ಪಟ್ಟಣದ ಮಾಲೂರು ರಸ್ತೆಯಲ್ಲಿ ಆರೋಪಿಯನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

Intro:ಯುವತಿಯ ಹತ್ಯೆಗೈದ ಪಾಗಲ್ ಪ್ರೇಮಿ ಅಂದರ್

ಕೊಲೆಯಾದ ಎರಡೇ ದಿನಕ್ಕೆ ಆರೋಪಿಯನ್ನ ಬಂಧಿಸಿದ ದೊಡ್ಡಬಳ್ಳಾಪುರ ಪೊಲೀಸರು.
Body:ದೊಡ್ಡಬಳ್ಳಾಪುರ : ಕುರಿ ಮೇಯಿಸಲು ಹೋಗಿದ್ದಾಗ ಒಂಟಿಯಾಗಿ ಸಿಕ್ಕ ಯುವತಿಯ ಕತ್ತು ಕುಯ್ದು ಪರಾರಿಯಾಗಿದ್ದ ಪಾಗಲ್ ಪ್ರೇಮಿಯನ್ನ ಬಂಧಿಸುವಲ್ಲಿ ದೊಡ್ಡಬಳ್ಳಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ನವೆಂಬರ್ 12ರ ಮಧ್ಯಾಹ್ನ ದೊಡ್ಡಬಳ್ಳಾಪುರ ತಾಲೂಕಿನ ಲಿಂಗನಹಳ್ಳಿಯಲ್ಲಿ ಯುವತಿಯ ಹತ್ಯೆ ನಡೆದಿದ್ದು. ಅಂಜಲಿ (20) ಕುರಿ ಮೇಯಿಸಲು ಹೋದಾಗ ಅದೇ ಗ್ರಾಮದ ಮಹೇಶ್ ಕುಮಾರ್ ( 23)ಆಕೆಯ ಕತ್ತು ಕುಯ್ದು ಕೊಲೆ ಮಾಡಿ ಪರಾರಿಯಾಗಿದ್ದ. ಮಹೇಶ್ ಅಂಜಲಿಯನ್ನ ಪ್ರೀತಿಸುತ್ತಿದ್ದ ಅದರೆ ಅಂಜಲಿಗೆ ಅತ್ತೆ ಮಗನ ಜೊತೆ ಮದುವೆ ಸಿದ್ಧತೆ ನಡೆಯುತ್ತಿತ್ತು ಇದರಿಂದ ಕೋಪಿತನಾಗಿದ್ದ ಆತ ಆಕೆಯ ಕೊಲೆಗೈದು ಪರಾರಿಯಾಗಿದ್ದ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು ಪರಾರಿಯಾಗಿದ್ದ ಮಹೇಶ್ ಸೆರೆಗಾಗಿ ಆತನ ಬೆನ್ನತ್ತಿದ್ದರು. ಡಿವೈಎಸ್ಪಿ ರಂಗಪ್ಪ ನೇತೃತ್ವದಲ್ಲಿ ಆರೋಪಿಯ ಬಂಧನನಕ್ಕಾಗಿ ತಂಡ ರಚನೆ ಮಾಡಲಾಯಿತು. ಖಚಿತ ಮಾಹಿತಿ ಮೆರೆಗೆ ಹೊಸಕೋಟೆ ಪಟ್ಟಣದ ಮಾಲೂರು ರಸ್ತೆಯಲ್ಲಿ ಆರೋಪಿಯನ್ನ ಬಂಧಿಸಿದ್ದಾರೆ. ಪೊಲೀಸರ ಕಾರ್ಯಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚನ್ನಣ್ಣನವರ್ ಶ್ಲಾಘಿಸಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.