ETV Bharat / jagte-raho

ಲೋಕ ಸಮರದಲ್ಲಿ ಅಕ್ರಮಕ್ಕಿಲ್ಲ ಎಲ್ಲೆ... ರಾಜ್ಯದಲ್ಲಿ 44 ಕೋಟಿ ರೂ. ನಗದು ಸೇರಿ ಇತರೆ ವಸ್ತುಗಳು ಜಪ್ತಿ - ಹಣ ಹೆಂಡ

ಲೋಕಸಭೆ ಚುನಾವಣಾ ಕಣದಲ್ಲಿ ಹಣ-ಹೆಂಡದ ಹೊಳೆಗೆ ಬ್ರೇಕ್ ಹಾಕಲು ಆಯೋಗ ರೆಡಿ. ಈವೆರೆಗೆ 44 ಕೋಟಿರ ರೂ. ನಗದು ಹಾಗೂ ಇನ್ನಿತರ ವಸ್ತುಗಳು ಪತ್ತೆಯಾಗಿವೆ.

ರಾಜ್ಯದಲ್ಲಿ 44 ಕೋಟಿ ರೂ. ನಗದು ಸೇರಿ ಇತರೆ ವಸ್ತುಗಳು ಜಪ್ತಿ
author img

By

Published : Apr 4, 2019, 6:17 AM IST

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಆಮಿಷವೊಡ್ಡಲು ಅಭ್ಯರ್ಥಿಗಳುಒಂದಲ್ಲ ಒಂದು ರೀತಿ ತಂತ್ರ ಹೂಡುವ ಮೂಲಕ ತಮ್ಮ ಪರ ಮತ ಚಲಾಯಿಸುವಂತೆ ಪ್ರೇರೇಪಿಸುವುದು ಸಾಮಾನ್ಯವೆಂಬಂತೆ ಆಗಿದೆ. ಚುನಾವಣೆ ಘೋಷಣೆ ಆದಾಗಿನಿಂದ ಈವರೆಗೆ ರಾಜಕೀಯ ಪಕ್ಷಗಳು ಕಳ್ಳ ಮಾರ್ಗದ ಮೂಲಕ ಮತದಾರರಿಗೆ ಹಂಚಲು ಅಕ್ರಮವಾಗಿ ಸಾಗಿಸುತ್ತಿದ್ದ ಕೋಟ್ಯಂತರ ರೂ.ನಗದನ್ನು ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿ 1512 ಪ್ಲೈಯಿಂಗ್ ಸ್ಕ್ವಾಡ್ಸ್ ಹಾಗೂ 1837 ಸರ್ವೆಲೆನ್ಸ್ ಟೀಮ್, 320 ಅಬಕಾರಿ ಹಾಗೂ180 ವಾಣಿಜ್ಯ ತೆರಿಗೆ ತಂಡಗಳಿಂದ ಇವರೆಗೂ ಒಟ್ಟು 44,39,37,473 ಕೋಟಿ ರೂ. ಮೌಲ್ಯದ ನಗದು ಹಾಗೂ ಮದ್ಯ, ಮಾದಕದ್ರವ್ಯ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ತಡೆಗಟ್ಟಲು ಈಗಾಗಲೇ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ರಾಜ್ಯದ ಸೂಕ್ತ ಸ್ಥಳಗಳಲ್ಲಿ ನಿರ್ಮಿಸಿರುವಚೆಕ್ ಪೋಸ್ಟ್​​ಗಳಲ್ಲಿ6,40,21,591 ಕೋಟಿ ರೂ. ನಗದು, 32,76,843.53 ಮೌಲ್ಯದ 5282.596 ಲೀಟರ್ ಮದ್ಯ ಹಾಗೂ 6,05,000 ಬೆಲೆಯ 131.59 ಕೆ.ಜಿ ಮಾದಕ ದ್ರವ್ಯ ಮತ್ತು76,25,775 ಮೌಲ್ಯದಇತರೆ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡು 869 ಎಫ್ಐಆರ್ ಪ್ರಕರಣಗಳನ್ನು ದಾಖಲಿಸಲಾಗಿದೆ.

ರಾಜ್ಯದಲ್ಲಿ 44 ಕೋಟಿರೂ. ನಗದು ಸೇರಿ ಇತರೆ ವಸ್ತುಗಳು ಜಪ್ತಿ

ಅಬಕಾರಿ ಇಲಾಖೆಯ 30,11,01,873 ಮೌಲ್ಯದ 7,03,377,46 ಲೀಟರ್ ಗಳಷ್ಟು ಮದ್ಯ. 4,15,000 ಮೌಲ್ಯದ 13.542 ಕೆಜಿ. ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡು 1633 ಗಂಭೀರ ಪ್ರಕರಣಗಳನ್ನು ದಾಖಲಿಸಿದೆ. ಮದ್ಯದ ಪರವಾನಗಿಯನ್ನು ಉಲ್ಲಂಘಿಸಿದ 1979 ಪ್ರಕರಣಗಳು, 4 ಎನ್​ಡಿಪಿಎಸ್ ಹಾಗೂ ಕರ್ನಾಟಕ ಅಬಕಾರಿ ಕಾಯ್ದೆ 1965ರ ಪರಿಚ್ಛೇದ15 (ಎ) ಅನ್ವಯ 5924 ಪ್ರಕರಣಗಳನ್ನು ದಾಖಲಿಸಿದೆ.841 ವಿವಿಧ ಮಾದರಿಯ ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಒಟ್ಟಾರೆ ಈವರೆಗೂ 95,323 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದೆ. 8 ಶಸ್ತ್ರಾಸ್ತ್ರಗಳನ್ನುವಶಕ್ಕೆ ಪಡೆದುಕೊಂಡು 6 ಶಸ್ತ್ರಾಸ್ತ್ರ ಪರವಾನಗಿ ರದ್ದುಪಡಿಸಲಾಗಿದೆ. ಸಿಆರ್ ಪಿಸಿ ಕಾಯ್ದೆಯಡಿ 42910 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪೈಕಿ 41097 ವ್ಯಕ್ತಿಗಳಿಂದ ಮುಚ್ಚಳಿಕೆ ಪಡೆಯಲಾಗಿದೆ. 32164 ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ.

ಸಾರ್ವಜನಿಕ ಕುಂದುಕೊರತೆ ಇತ್ಯರ್ಥ

ಮತದಾರರ ಸಹಾಯವಾಣಿ ಮೂಲಕ ಸ್ವೀಕರಿಸಲಾದ 58,266 ಕರೆಗಳಲ್ಲಿ 51,083 ಸಾರ್ವಜನಿಕರು ಮಾಹಿತಿ ಕೋರಿದ್ದಾರೆ. 440 ಜನರು ಫೀಡ್ ಬ್ಯಾಕ್ ನೀಡಿದ್ದಾರೆ. 3,669 ಸಲಹೆಗಳು, 3074 ದೂರುಗಳನ್ನು ದಾಖಲಿಸಿದ್ದಾರೆ. ಇದಲ್ಲದೆ, ಎನ್ ಆರ್ ಪಿಎಸ್ ಪೋರ್ಟಲ್ ನಲ್ಲಿ 4944 ದೂರುಗಳು ಸ್ವೀಕಾರವಾಗಿದ್ದು ಈ ಪೈಕಿ 3809 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ.

ಸಿ ವಿಜಿಲ್ ಅಪ್ಲಿಕೇಷನ್ ಮೂಲಕ 1118 ದೂರುಗಳನ್ನು ಸ್ವೀಕರಿಸಲಾಗಿದೆ. ಇವುಗಳಲ್ಲಿ ಅನುಮತಿ ಪಡೆಯದೆ ಪೋಸ್ಟರ್ ಅಥವಾ ಬ್ಯಾನರ್ (193), ಹಣ ಹಂಚಿಕೆ (114), ಕಾಸಿಗಾಗಿ ಸುದ್ದಿ (57), ಉಡುಗೊರೆ ಹಂಚಿಕೆ (56), ಮದ್ಯ ಹಂಚಿಕೆ (56), ಸಾರ್ವಜನಿಕ ಸ್ವತ್ತುಗಳ ಹಾನಿ(35),ಅನುಮತಿರಹಿತ ವಾಹನ ಅಥವಾ ಬೆಂಗಾವಲು (35) ಇವುಗಳಲ್ಲಿ 210 ದೂರುಗಳು ನಿಜವೆಂದು ಕಂಡು ಬಂದಿದ್ದು ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

ಇನ್ನೂ ಇಮೇಲ್ ಹಾಗೂ ಪತ್ರಗಳಲ್ಲಿ 378, ಪತ್ರಿಕೆಗಳಲ್ಲಿ 198, ಟಿವಿ ವಾಹನಿಗಳಿಂದ 45, ಸಾಮಾಜಿಕ ಜಾಲತಾಣಗಳಿಂದ 72 ದೂರು ಸೇರಿದಂತೆ 693 ದೂರುಗಳಲ್ಲಿ 685 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ.

sample description
ETV Bharat Logo

Copyright © 2025 Ushodaya Enterprises Pvt. Ltd., All Rights Reserved.