ವಿಶಾಖಪಟ್ಟಣಂನಿಂದ ವಿಜಯವಾಡಕ್ಕೆ ಆಡಿ ಕಾರ್ನಲ್ಲಿ 30 ಕೆಜಿ ಬಂಗಾರ ಸಾಗಿಸುತ್ತಿರುವುದರ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಪೊಲೀಸರು ಉಂಗುಟೂರು ರಾಷ್ಟ್ರೀಯ ಹೆದ್ದಾರಿ ಟೋಲ್ಗೇಟ್ನಲ್ಲಿ ತನಿಖೆ ಕೈಗೊಂಡಿದ್ದರು. ಎಪಿ 31 ಡಿಟಿ 7777 ಆಡಿ ಕಾರ್ನಲ್ಲಿ 100 ಗ್ರಾಂ ತೂಕದ 300 ಬಂಗಾರದ ಬಿಸ್ಕೆಟ್ಗಳನ್ನು ಪತ್ತೆ ಹಚ್ಚಿದ್ದಾರೆ. ಒಟ್ಟು 30 ಕೆಜಿ ಬಂಗಾರವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು ಬಂಗಾರಕ್ಕೆ ಸಂಬಂಧಿಸಿದ ಬಿಲ್ಲುಗಳು ಇರುವುದರಿಂದ ಸಿಐ ಜೊತೆ ತಹಶೀಲ್ದಾರ್ ಪರಿಶೀಲಿಸಿದ್ದಾರೆ. ಆಡಿ ಕಾರ್ನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ತನಿಖೆ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.