ETV Bharat / jagte-raho

ಜೂಜು ಅಡ್ಡೆ ಮೇಲೆ ದಾಳಿ : 14 ಜನರ ಬಂಧನ - gambling

ಕೊಳ್ಳೇಗಾಲದ ಮುಡಿಗುಂಡ ಗ್ರಾಮದ ಉದಯಶಂಕರ್ ಎಂಬುವರ ತೋಟದ ಮನೆಯೊಂದರಲ್ಲಿ ಅಕ್ರಮವಾಗಿ ಜೂಜು ಆಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಡಿವೈಎಸ್ ಪಿ ನೇತೃತ್ವದ ತಂಡ ದಾಳಿ ನಡೆಸಿ, 14 ಜನ ಆರೋಪಿಗಳನ್ನು ಬಂಧಿಸಿದೆ. ಬಂಧಿತರಿಂದ 83,300 ರೂ. ವಶಕ್ಕೆ ಪಡೆದುಕೊಳ್ಳಲಾಗಿದೆ.

Kollegala
Kollegala
author img

By

Published : Sep 25, 2020, 4:07 PM IST

Updated : Sep 25, 2020, 5:03 PM IST

ಕೊಳ್ಳೇಗಾಲ: ಮುಡಿಗುಂಡ ಗ್ರಾಮದ ತೋಟದ ಮನೆಯೊಂದರಲ್ಲಿ ಅಕ್ರಮವಾಗಿ ಜೂಜು ಆಡುತ್ತಿದ್ದ 14 ಮಂದಿಯನ್ನು ಪಟ್ಟಣ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಧು, ನಟರಾಜು, ಶಿವಕುಮಾರ್, ನಾಗೇಶ್, ಮಹೇಶ್, ಮನು, ಪ್ರಸಾದ್, ಮನೋಹರ್, ಮಹದೇವ ಪ್ರಸಾದ್, ಗಣೇಶ್, ಬಸವರಾಜು, ರಾಜೇಶ್, ಅರುಣ್ ಕುಮಾರ್, ಬಸವರಾಜು ಬಂಧಿತ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಡಿವೈಎಸ್ ಪಿ ಜಿ.ನಾಗರಾಜು ನೇತೃತ್ವದ ತಂಡ ಮಂಡಿಗುಂಡ ಗ್ರಾಮದ ಉದಯಶಂಕರ್ ಎಂಬುವರ ತೋಟದ ಮನೆಯಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆ‌ ಮೇಲೆ ದಾಳಿ‌ ನಡೆಸಿ, 14 ಮಂದಿಯನ್ನು‌ ಬಂಧಿಸಿದ್ದು, 83,300 ರೂ. ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನು ಪೊಲೀಸ್ ಕಾರ್ಯಚರಣೆಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಕಾಂತ್, ಪಿ.ಎಸ್.ಐ ರಾಜೇಂದ್ರ ಸೇರಿದಂತೆ ಸಿಬ್ಬಂದಿ ಭಾಗವಹಿಸಿದ್ದರು. ಈ ಕುರಿತು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Sep 25, 2020, 5:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.