ನ್ಯೂಯಾರ್ಕ್ (ಅಮೆರಿಕ): ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಆವರಣದಲ್ಲಿ ಬುಧವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಮುನ್ನಡೆಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಮೋದಿ, "ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯದ ಗುರಿ ಸಾಕಾರಗೊಳಿಸಲು ನಾವು ಕೈಜೋಡಿಸೋಣ" ಎಂದು ಕರೆ ನೀಡಿದರು.
ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಆವರಣದ ಹುಲ್ಲುಹಾಸಿನಲ್ಲಿ ಆಯೋಜಿಸಿದ್ದ ಯೋಗ ಪ್ರದರ್ಶನದಲ್ಲಿ ವಿಶ್ವಸಂಸ್ಥೆಯ ಅಧ್ಯಕ್ಷ ಕ್ಸಾಬಾ ಕೊರೋಸಿ, ಖ್ಯಾತ ನಟ ರಿಚರ್ಡ್ ಗೆರ್, ನ್ಯೂಯಾರ್ಕ್ ಸಿಟಿ ಮೇಯರ್ ಎರಿಕ್ ಆ್ಯಡಮ್ಸ್, ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಸೇರಿದಂತೆ ಹಲವು ಗಣ್ಯರು ಪ್ರಧಾನಿ ಮೋದಿ ಅವರೊಂದಿಗೆ ಯೋಗದಲ್ಲಿ ಪಾಲ್ಗೊಂಡರು. ರಾಜತಾಂತ್ರಿಕರು, ಅಧಿಕಾರಿಗಳು ಸೇರಿ 180ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡರು.
-
#WATCH | At the Yoga Day event at the UN HQ in New York, PM Narendra Modi says, "...Let us use the power of Yoga not only to be healthy, happy but also to be kind to ourselves and to each other. Let us use the power of Yoga to build bridges of friendship, a peaceful world and a… pic.twitter.com/QwAEEBo9r8
— ANI (@ANI) June 21, 2023 " class="align-text-top noRightClick twitterSection" data="
">#WATCH | At the Yoga Day event at the UN HQ in New York, PM Narendra Modi says, "...Let us use the power of Yoga not only to be healthy, happy but also to be kind to ourselves and to each other. Let us use the power of Yoga to build bridges of friendship, a peaceful world and a… pic.twitter.com/QwAEEBo9r8
— ANI (@ANI) June 21, 2023#WATCH | At the Yoga Day event at the UN HQ in New York, PM Narendra Modi says, "...Let us use the power of Yoga not only to be healthy, happy but also to be kind to ourselves and to each other. Let us use the power of Yoga to build bridges of friendship, a peaceful world and a… pic.twitter.com/QwAEEBo9r8
— ANI (@ANI) June 21, 2023
ಇದಕ್ಕೂ ಮುನ್ನ ವಿಶ್ವಸಂಸ್ಥೆ ಆವರಣದಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆಗೆ ಪ್ರಧಾನಿ ಮೋದಿ ಪುಷ್ಪ ನಮನ ಸಲ್ಲಿಸಿದರು. ನಂತರ ಯೋಗ ದಿನದ ವೇದಿಕೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. "ಯೋಗವು ಭಾರತದಿಂದ ಬಂದಿದ್ದು, ಬಹಳ ಹಳೆಯ ಸಂಪ್ರದಾಯವಾಗಿದೆ. ಯೋಗವು ಯಾವುದೇ ಹಕ್ಕುಸ್ವಾಮ್ಯ, ಪೇಟೆಂಟ್ ಹಾಗೂ ರಾಜಧನ ಪಾವತಿಗಳಿಂದ ಮುಕ್ತವಾಗಿದೆ. ಪ್ರತಿಯೊಂದು ವಯಸ್ಸಿನವರು ಮತ್ತು ಲಿಂಗದವರಿಗೂ ಯೋಗ ಹೊಂದಿಕೊಳ್ಳುತ್ತದೆ" ಎಂದು ತಿಳಿಸಿದರು.
"ಯೋಗ ಎಂದರೆ ಒಂದಾಗುವುದು. ಇಂದು ಎಲ್ಲರೂ ಒಟ್ಟಿಗೆ ಸೇರುವುದು ಯೋಗದ ಇನ್ನೊಂದು ರೂಪದ ಅಭಿವ್ಯಕ್ತಿ. ಇಡೀ ಮಾನವೀಯತೆಯ ಸಭೆಯ ಸ್ಥಳದಲ್ಲಿ ನಾವು ಇಲ್ಲಿ ಒಟ್ಟುಗೂಡಿದ್ದೇವೆ. ನಿಮ್ಮೆಲ್ಲರನ್ನೂ ನೋಡಲು ನನಗೆ ಸಂತೋಷವಾಗಿದೆ. ಯೋಗ ದಿನಾಚರಣೆಗೆ ಬಂದಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಇಂದು ಇಲ್ಲಿ ಬಹುತೇಕ ಎಲ್ಲ ರಾಷ್ಟ್ರೀಯತೆಗಳ ಜನರೂ ಇದ್ದಾರೆ" ಎಂದು ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದರು.
-
#WATCH | Prime Minister Narendra Modi leads the Yoga Day event at the United Nations Headquarters in New York, on the occasion of #9thInternationalYogaDay pic.twitter.com/3G8I9YGvNA
— ANI (@ANI) June 21, 2023 " class="align-text-top noRightClick twitterSection" data="
">#WATCH | Prime Minister Narendra Modi leads the Yoga Day event at the United Nations Headquarters in New York, on the occasion of #9thInternationalYogaDay pic.twitter.com/3G8I9YGvNA
— ANI (@ANI) June 21, 2023#WATCH | Prime Minister Narendra Modi leads the Yoga Day event at the United Nations Headquarters in New York, on the occasion of #9thInternationalYogaDay pic.twitter.com/3G8I9YGvNA
— ANI (@ANI) June 21, 2023
"ಯೋಗದ ಶಕ್ತಿಯನ್ನು ಆರೋಗ್ಯಕರ, ಸಂತೋಷದಿಂದ ಇರಲು ಮಾತ್ರವೇ ಅಲ್ಲದೇ ನಮ್ಮೊಂದಿಗೆ ಮತ್ತು ಪರಸ್ಪರ ದಯೆ ತೋರಲು ಬಳಸೋಣ. ಸೌಹಾರ್ದ ಸೇತುವೆಗಳು, ಶಾಂತಿಯುತ ಜಗತ್ತು ಮತ್ತು ಸ್ವಚ್ಛ, ಹಸಿರು ಮತ್ತು ಸುಸ್ಥಿರ ಭವಿಷ್ಯವನ್ನು ನಿರ್ಮಿಸಲು ಯೋಗದ ಶಕ್ತಿಯನ್ನು ಬಳಸೋಣ. ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯದ ಗುರಿಯನ್ನು ಸಾಕಾರಗೊಳಿಸಲು ನಾವೆಲ್ಲರೂ ಕೈಜೋಡಿಸೋಣ" ಎಂದು ಅವರು ಕರೆಕೊಟ್ಟರು.
ವಿಶ್ವಸಂಸ್ಥೆಯ ಅಧ್ಯಕ್ಷ ಕ್ಸಾಬಾ ಕೊರೋಸಿ ಮಾತನಾಡಿ, "ಯೋಗವು ನಮ್ಮ ದೈಹಿಕ ಕಾರ್ಯಕ್ಷಮತೆಯನ್ನು ಬದಲಾಯಿಸುತ್ತದೆ. ನಾನೂ ಕೂಡ ಯೋಗದ ಆರಾಧಕ. ನಮ್ಮ ಜಗತ್ತಿಗೆ ಸಮತೋಲನ ಮತ್ತು ಸ್ವಯಂ ನಿಯಂತ್ರಣದ ಅಗತ್ಯವಿದೆ. ಇದನ್ನು ಸಾಧಿಸುವ ಸಾಧನಗಳಲ್ಲಿ ಯೋಗವೂ ಒಂದು" ಎಂದು ಅವರು ಬಣ್ಣಿಸಿದರು.
ಇದಕ್ಕೂ ಮೊದಲು ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿ ರುಚಿರಾ ಕಾಂಬೋಜ್ ಮಾತನಾಡಿ, "ಇಂದಿನ ಯೋಗ ಆಚರಣೆಯು ನಿಜಕ್ಕೂ ಬಹಳ ವಿಶೇಷವಾಗಿದೆ. ಏಕೆಂದರೆ ಇಂದು ಯೋಗ ದಿನಾಚರಣೆಯನ್ನು ಪ್ರಧಾನಿ ಮೋದಿಯವರು ಮುನ್ನಡೆಸುತ್ತಾರೆ. ಅವರ ನೇತೃತ್ವದಲ್ಲೇ ಜೂನ್ 21 ಅನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸಲಾಯಿತು" ಎಂದು ಹೇಳಿದರು.
ಇದನ್ನೂ ಓದಿ: Yoga Day: ನ್ಯೂಯಾರ್ಕ್‌ನ ವಿಶ್ವಸಂಸ್ಥೆ ಆವರಣದಲ್ಲಿ ಯೋಗ ದಿನಾಚರಣೆ: ಗಾಂಧಿ ಪ್ರತಿಮೆಗೆ ಪ್ರಧಾನಿ ಮೋದಿ ಪುಷ್ಪ ನಮನ