ETV Bharat / international

ವಿಶ್ವದ ಅತಿದೊಡ್ಡ ಹಿಂದೂ ದೇವಾಲಯ ಅಮೆರಿಕದ ನ್ಯೂಜೆರ್ಸಿಯಲ್ಲಿ ಅ.8 ರಂದು ಲೋಕಾರ್ಪಣೆ - ಹಿಂದೂ ದೇವಾಲಯ ಅಮೆರಿಕದ ನ್ಯೂಜೆರ್ಸಿಯಲ್ಲಿ

ವಿಶ್ವದ ಅತಿದೊಡ್ಡ ಹಿಂದೂ ದೇವಾಲಯ ಇದೇ ಅಕ್ಟೋಬರ್ 8 ರಂದು ಉದ್ಘಾಟನೆಯಾಗಲಿದೆ.

Modern world's largest Hindu temple to be inaugurated in New Jersey in two weeks

author img

By ETV Bharat Karnataka Team

Published : Sep 24, 2023, 5:21 PM IST

ರಾಬಿನ್ಸ್​ವಿಲ್ಲೆ (ನ್ಯೂಜೆರ್ಸಿ): ಆಧುನಿಕ ಯುಗದಲ್ಲಿ ಭಾರತದ ಹೊರಗೆ ನಿರ್ಮಿಸಲಾದ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯವು ಅಕ್ಟೋಬರ್ 8 ರಂದು ನ್ಯೂಜೆರ್ಸಿಯಲ್ಲಿ ಉದ್ಘಾಟನೆಯಾಗಲಿದೆ. ನ್ಯೂಯಾರ್ಕ್​ ಟೈಮ್ಸ್ ಸ್ಕ್ವೇರ್​ನ ದಕ್ಷಿಣಕ್ಕೆ ಸುಮಾರು 60 ಮೈಲಿ (90 ಕಿ.ಮೀ) ಅಥವಾ ವಾಷಿಂಗ್ಟನ್ ಡಿಸಿಯಿಂದ ಉತ್ತರಕ್ಕೆ ಸುಮಾರು 180 ಮೈಲಿ (289 ಕಿ.ಮೀ) ದೂರದಲ್ಲಿ, ನ್ಯೂಜೆರ್ಸಿಯ ಪುಟ್ಟ ರಾಬಿನ್ಸ್​ವಿಲ್ಲೆ ಟೌನ್​ಶಿಪ್​ನಲ್ಲಿ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯವಾಗಿರುವ ಬಿಎಪಿಎಸ್ ಸ್ವಾಮಿನಾರಾಯಣ ಅಕ್ಷರಧಾಮ ದೇವಾಲಯ ನಿರ್ಮಾಣವಾಗಿದೆ. 2011 ರಿಂದ 2023 ರವರೆಗೆ 12 ವರ್ಷಗಳವರೆಗೆ ಅಮೆರಿಕದಲ್ಲಿನ 12,500 ಕ್ಕೂ ಹೆಚ್ಚು ಸ್ವಯಂಸೇವಕರ ಪಡೆಯು ಈ ದೇವಸ್ಥಾನ ನಿರ್ಮಿಸಿದೆ.

ಅಕ್ಷರಧಾಮ ಎಂದು ಜನಪ್ರಿಯವಾಗಿರುವ ಈ ದೇವಾಲಯ 255 ಅಡಿ x 345 ಅಡಿ x 191 ಅಡಿ ಅಳತೆ ಹೊಂದಿದ್ದು, 183 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಇದನ್ನು ಪ್ರಾಚೀನ ಹಿಂದೂ ಧರ್ಮಗ್ರಂಥಗಳ ಪ್ರಕಾರ ವಿನ್ಯಾಸಗೊಳಿಸಲಾಗಿದ್ದು, 10,000 ಪ್ರತಿಮೆಗಳು, ಭಾರತೀಯ ಸಂಗೀತ ವಾದ್ಯಗಳು ಮತ್ತು ನೃತ್ಯ ಪ್ರಕಾರಗಳ ಕೆತ್ತನೆಗಳು ಸೇರಿದಂತೆ ಪ್ರಾಚೀನ ಭಾರತೀಯ ಸಂಸ್ಕೃತಿಯ ವಿನ್ಯಾಸದ ಅಂಶಗಳನ್ನು ಒಳಗೊಂಡಿದೆ.

ಈ ದೇವಾಲಯವು ಕಾಂಬೋಡಿಯಾದಲ್ಲಿನ ಅಂಕೋರ್ ವಾಟ್ ನಂತರ ಎರಡನೇ ಅತಿದೊಡ್ಡ ದೇವಾಲಯವಾಗಿದೆ. 12 ನೇ ಶತಮಾನದ ಅಂಕೋರ್ ವಾಟ್ ದೇವಾಲಯ ಸಂಕೀರ್ಣ, ವಿಶ್ವದ ಅತಿದೊಡ್ಡ ಹಿಂದೂ ದೇವಾಲಯವಾಗಿದ್ದು, 500 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ ಮತ್ತು ಈಗ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. ನವೆಂಬರ್ 2005 ರಲ್ಲಿ ಸಾರ್ವಜನಿಕರಿಗೆ ಮುಕ್ತವಾದ ನವದೆಹಲಿಯ ಅಕ್ಷರಧಾಮ ದೇವಾಲಯವು 100 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ.

ಅಕ್ಷರಧಾಮ ವಿಶಿಷ್ಟ ಹಿಂದೂ ದೇವಾಲಯದ ವಿನ್ಯಾಸವು ಒಂದು ಮುಖ್ಯ ದೇವಾಲಯ, 12 ಉಪ-ದೇವಾಲಯಗಳು, ಒಂಬತ್ತು ಶಿಖರಗಳು (ಗೋಪುರದಂತಹ ರಚನೆಗಳು) ಮತ್ತು ಒಂಬತ್ತು ಪಿರಮಿಡ್ ಶಿಖರಗಳನ್ನು ಒಳಗೊಂಡಿದೆ. ಅಕ್ಷರಧಾಮವು ಸಾಂಪ್ರದಾಯಿಕ ಕಲ್ಲಿನ ವಾಸ್ತುಶಿಲ್ಪದ ಅತಿದೊಡ್ಡ ಅಂಡಾಕಾರದ ಗುಮ್ಮಟವನ್ನು ಹೊಂದಿದೆ. ಇದನ್ನು ಸಾವಿರ ವರ್ಷಗಳ ಕಾಲ ಬಾಳಿಕೆ ಬರುವಂತೆ ವಿನ್ಯಾಸಗೊಳಿಸಲಾಗಿದೆ. ಅಕ್ಷರಧಾಮದಲ್ಲಿ ಪ್ರತಿಯೊಂದು ಕಲ್ಲಿಗೂ ಒಂದು ಕಥೆ ಇದೆ. ಆಯ್ದ ನಾಲ್ಕು ರೀತಿಯ ಕಲ್ಲುಗಳಲ್ಲಿ ಸುಣ್ಣದ ಕಲ್ಲು, ಗುಲಾಬಿ ಮರಳುಗಲ್ಲು, ಅಮೃತಶಿಲೆ ಮತ್ತು ಗ್ರಾನೈಟ್ ಸೇರಿವೆ. ಇವು ತೀವ್ರ ಶಾಖ ಮತ್ತು ಶೀತವನ್ನು ತಡೆದುಕೊಳ್ಳಬಲ್ಲವು.

ದೇವಾಲಯದ ನಿರ್ಮಾಣಕ್ಕೆ ಸುಮಾರು ಎರಡು ಮಿಲಿಯನ್ ಘನ ಅಡಿ ಕಲ್ಲನ್ನು ಬಳಸಲಾಗಿದ್ದು, ಬಲ್ಗೇರಿಯಾ ಮತ್ತು ಟರ್ಕಿಯ ಸುಣ್ಣದ ಕಲ್ಲು ಸೇರಿದಂತೆ ಪ್ರಪಂಚದಾದ್ಯಂತದ ವಿವಿಧ ಸ್ಥಳಗಳಿಂದ ಕಲ್ಲುಗಳನ್ನು ತರಿಸಲಾಗಿದೆ. ಗ್ರೀಸ್, ಟರ್ಕಿ ಮತ್ತು ಇಟಲಿಯಿಂದ ಅಮೃತಶಿಲೆ, ಭಾರತ ಮತ್ತು ಚೀನಾದಿಂದ ಗ್ರಾನೈಟ್, ಭಾರತದ ಮರಳುಗಲ್ಲು ಮತ್ತು ಯುರೋಪ್, ಏಷ್ಯಾ, ಲ್ಯಾಟಿನ್ ಅಮೆರಿಕಾದ ಇತರ ಅಲಂಕಾರಿಕ ಕಲ್ಲುಗಳನ್ನು ತರಿಸಿ ಬಳಸಲಾಗಿದೆ. ದೇವಾಲಯದ ಪ್ರಾಂಗಣದಲ್ಲಿರುವ ಸಾಂಪ್ರದಾಯಿಕ ಭಾರತೀಯ ಮೆಟ್ಟಿಲು ಬಾವಿಯಾದ ಬ್ರಹ್ಮ ಕುಂಡವು ಭಾರತದ ಪವಿತ್ರ ನದಿಗಳು ಮತ್ತು ಯುಎಸ್ ನ ಎಲ್ಲಾ 50 ರಾಜ್ಯಗಳು ಸೇರಿದಂತೆ ಪ್ರಪಂಚದಾದ್ಯಂತದ 300 ಕ್ಕೂ ಹೆಚ್ಚು ಜಲಮೂಲಗಳ ನೀರನ್ನು ಹೊಂದಿದೆ.

ವಿಶ್ವದ ಪಶ್ಚಿಮ ಗೋಳಾರ್ಧದಲ್ಲಿ ಹಿಂದೂ ಸಂಸ್ಕೃತಿ ಮತ್ತು ವಾಸ್ತುಶಿಲ್ಪದ ಹೆಗ್ಗುರುತು ಎಂದು ಹೇಳಲಾಗುವ ಅಕ್ಷರಧಾಮವನ್ನು ಅಕ್ಟೋಬರ್ 8 ರಂದು ಬಿಎಪಿಎಸ್ ಆಧ್ಯಾತ್ಮಿಕ ಮುಖ್ಯಸ್ಥ ಮಹಂತ್ ಸ್ವಾಮಿ ಮಹಾರಾಜ್ ಅವರ ಮಾರ್ಗದರ್ಶನದಲ್ಲಿ ಔಪಚಾರಿಕವಾಗಿ ಉದ್ಘಾಟಿಸಲಾಗುವುದು. ಇದು ಅಕ್ಟೋಬರ್ 18 ರಿಂದ ಸಾರ್ವಜನಿಕರಿಗೆ ಮುಕ್ತವಾಗಲಿದೆ.

ಇದನ್ನೂ ಓದಿ : 'Elon Musk' ಜೀವನಚರಿತ್ರೆ ಪುಸ್ತಕ ಬಿಡುಗಡೆ; ಮಸ್ಕ್​ ಜೀವನದ ರೋಚಕ ಸಂಗತಿಗಳು ಬಹಿರಂಗ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.