ETV Bharat / international

2030ರ ವೇಳೆಗೆ 8.5 ಶತಕೋಟಿಗೆ ಜಗತ್ತಿನ ಜನಸಂಖ್ಯೆ ಹೆಚ್ಚಳದ ನಿರೀಕ್ಷೆ..

ಇಂದು ವಿಶ್ವದ ಜನಸಂಖ್ಯೆಯು ಎಂಟು ನೂರು ಕೋಟಿ ಗಡಿದಾಟಿದೆ. ವಿಶ್ವಸಂಸ್ಥೆಯ ಪ್ರಕಾರ, ವಿಶ್ವದ ಜನಸಂಖ್ಯೆಯು 2030ರಲ್ಲಿ ಸುಮಾರು 8.5 ಶತಕೋಟಿ ಮತ್ತು 2050ರಲ್ಲಿ 9.7 ಶತಕೋಟಿಗೆ ಹೆಚ್ಚಳವಾಗಬಹುದು.

world-population-hits-8-billion-today
2030ರ ವೇಳೆಗೆ 8.5 ಶತಕೋಟಿಗೆ ಜಗತ್ತಿನ ಜನಸಂಖ್ಯೆ ಹೆಚ್ಚಳದ ನಿರೀಕ್ಷೆ
author img

By

Published : Nov 15, 2022, 6:08 PM IST

ಹೈದರಾಬಾದ್ (ತೆಲಂಗಾಣ): ವಿಶ್ವ ಜನಸಂಖ್ಯೆಯು ಭಾರತೀಯ ಕಾಲಮಾನದ ಪ್ರಕಾರ ಇಂದು ಎಂದರೆ 2022ರ ನವೆಂಬರ್ 15ರ ಮಧ್ಯಾಹ್ನ 01.29ಕ್ಕೆ ಎಂಟು ನೂರು ಕೋಟಿ ಗಡಿ ತಲುಪಿದೆ. ವಿಶ್ವ ಜನಸಂಖ್ಯಾ ದಿನದಂದು (ಜುಲೈ 11) ಬಿಡುಗಡೆಯಾದ ವಿಶ್ವ ಜನಸಂಖ್ಯೆ ನಿರೀಕ್ಷೆಗಳು (World Population Prospects) 2022ರ ಪ್ರಕಾರ ಭಾರತವು 2023ರಲ್ಲಿ ಜನಸಂಖ್ಯೆಯಲ್ಲಿ ಚೀನಾವನ್ನು ಮೀರಿಸಲಿದೆ ಎಂದು ಅಂದಾಜಿಸಲಾಗಿದೆ.

ಜಾಗತಿಕ ಜನಸಂಖ್ಯೆಯು 1950ರಿಂದ ನಿಧಾನಗತಿಯ ದರದಲ್ಲಿ ಬೆಳೆಯುತ್ತಿದೆ. 2020ರಲ್ಲಿ ಶೇಕಡಾ 1ಕ್ಕಿಂತ ಕಡಿಮೆಯಾಗಿದೆ. ವಿಶ್ವಸಂಸ್ಥೆಯ ಪ್ರಕಾರ, ವಿಶ್ವದ ಜನಸಂಖ್ಯೆಯು 2030ರಲ್ಲಿ ಸುಮಾರು 8.5 ಶತಕೋಟಿ ಮತ್ತು 2050ರಲ್ಲಿ 9.7 ಶತಕೋಟಿಗೆ ಹೆಚ್ಚಳವಾಗಬಹುದು. ಅದೇ ರೀತಿಯಾಗಿ 2080ರ ವೇಳೆ ಸರಿಸುಮಾರು 10.4 ಶತಕೋಟಿ ಜನರ ಗರಿಷ್ಠ ಮಟ್ಟವನ್ನು ತಲುಪುತ್ತದೆ ಎಂದು ಅಂದಾಜಿಸಲಾಗಿದೆ.

ಪ್ರಸ್ತುತ (2015-2020) ಒಟ್ಟು ಜನನಗಳ ಸಂಖ್ಯೆಯು ಜಾಗತಿಕವಾಗಿ ವರ್ಷಕ್ಕೆ 140 ಮಿಲಿಯನ್ ಆಗಿದೆ. 2040-2045ರ ಅವಧಿಯಲ್ಲಿ ವರ್ಷಕ್ಕೆ 141 ಮಿಲಿಯನ್​ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ವೇಳೆ ಸಾವಿನ ಒಟ್ಟು ಸಂಖ್ಯೆಯು ಪ್ರಸ್ತುತ ವರ್ಷಕ್ಕೆ 57 ಮಿಲಿಯನ್ ಆಗಿದ್ದು, ಇದು ಸ್ಥಿರವಾಗಿ ವರ್ಷಕ್ಕೆ 121 ಮಿಲಿಯನ್​ವರೆಗೆ ಬೆಳೆಯುವ ಸಾಧ್ಯತೆಯೂ ಇದೆ. ಜೊತೆಗೆ 2022ರ ವಿಶ್ವ ಜನಸಂಖ್ಯೆ ನಿರೀಕ್ಷೆಗಳ ಪ್ರಕಾರ, ಇತ್ತೀಚಿನ ದಶಕಗಳಲ್ಲಿ ಅನೇಕ ದೇಶಗಳಲ್ಲಿ ಜನನ ಪ್ರಮಾಣ ಗಮನಾರ್ಹವಾಗಿ ಕುಸಿದಿದೆ ಎಂದು ಹೇಳಿದೆ.

11 ವರ್ಷದಲ್ಲಿ ಒಂದು ಶತಕೋಟಿ ಹೆಚ್ಚಳ: 1804ರಲ್ಲಿ ಕೈಗಾರಿಕಾ ಕ್ರಾಂತಿಯ ನಂತರ ಜಗತ್ತಿನಲ್ಲಿ ಸಂಭವಿಸಿದ ಪ್ರಮುಖ ಬದಲಾವಣೆಯಿಂದಾಗಿ ವಿಶ್ವದ ಜನಸಂಖ್ಯೆಯು ಮೊದಲ ಬಾರಿಗೆ ಒಂದು ಶತಕೋಟಿಯನ್ನು ತಲುಪಿತ್ತು. ಅಲ್ಲಿಂದ 123 ವರ್ಷಗಳ ನಂತರ ಎಂದರೆ 1927ರಲ್ಲಿ ಎರಡು ಶತಕೋಟಿ ಗಡಿಯನ್ನು ತಲುಪಿತ್ತು. ಆದರೆ, 1960ರಲ್ಲಿ ಮೂರು ಶತಕೋಟಿಯನ್ನು ತಲುಪಲು ಕೇವಲ 33 ವರ್ಷಗಳನ್ನು ತೆಗೆದುಕೊಂಡಿತ್ತು.

ಇದಾದ ಬಳಿಕ ಕೇವಲ 14 ವರ್ಷಗಳಲ್ಲೇ 1974ರಲ್ಲಿ ನಾಲ್ಕು ಶತ ಕೋಟಿಗೆ ಜನ ಸಂಖ್ಯೆ ತಲುಪಿತ್ತು. ಇದರ ನಂತರ ಇನ್ನೂ ವೇಗವಾಗಿ ಎಂದರೆ 13 ವರ್ಷಗಳಲ್ಲಿ 1987ರಲ್ಲಿ ಐದು ಶತಕೋಟಿ ಗಡಿ ದಾಡಿತ್ತು. ಅಲ್ಲಿಂದ ಅತಿ ಕಡಿ ಅವಧಿಯಲ್ಲೇ ಪ್ರತಿ ಶತ ಕೋಟಿಯನ್ನು ಜನ ಸಂಖ್ಯೆ ತಲುಪುತ್ತಿದೆ. 1999ರಲ್ಲಿ ಆರು ಶತಕೋಟಿ ಮತ್ತು 2011ರಲ್ಲಿ ಏಳು ಶತಕೋಟಿ ತಲುಪಲು ತಲಾ 12 ವರ್ಷಗಳು ಮಾತ್ರ ತೆಗೆದುಕೊಂಡಿತ್ತು. ಈಗ 2022ರಲ್ಲಿ ಏಳರಿಂದ ಎಂಟು ಶತಕೋಟಿ ಬೆಳೆಯಲು ಕೇವಲ 11 ವರ್ಷಗಳನ್ನು ತೆಗೆದುಕೊಂಡಿದೆ.

2050ರವರೆಗಿನ ಜಾಗತಿಕ ಜನಸಂಖ್ಯೆಯ ಯೋಜಿತ ಹೆಚ್ಚಳದ ಅರ್ಧಕ್ಕಿಂತ ಹೆಚ್ಚು ಎಂಟು ದೇಶಗಳಲ್ಲೇ ಉಂಟಾಗಿದೆ. ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಈಜಿಪ್ಟ್, ಇಥಿಯೋಪಿಯಾ, ಭಾರತ, ನೈಜೀರಿಯಾ, ಪಾಕಿಸ್ತಾನ, ಫಿಲಿಪೈನ್ಸ್ ಮತ್ತು ಯುನೈಟೆಡ್ ರಿಪಬ್ಲಿಕ್ ಆಫ್ ತಾಂಜಾನಿಯಾ ಹಾಗೂ ಉಪ-ಸಹಾರನ್ ಆಫ್ರಿಕಾದ ರಾಷ್ಟ್ರಗಳು 2050ರ ವೇಳೆಗಿನ ಜನ ಸಂಖ್ಯೆ ಹೆಚ್ಚಳದಲ್ಲಿ ಅರ್ಧಕ್ಕಿಂತ ಹೆಚ್ಚಿನ ಕೊಡುಗೆ ನೀಡುವ ನಿರೀಕ್ಷೆ ಇದೆ.

ಲಿಯು ಝೆನ್ಮಿನ್ ಹೇಳಿದ್ದೇನು?: ಜನಸಂಖ್ಯೆಯ ಬೆಳವಣಿಗೆ ಮತ್ತು ಸುಸ್ಥಿರ ಅಭಿವೃದ್ಧಿಯ ನಡುವಿನ ಸಂಬಂಧವು ಕ್ಲಿಷ್ಟಕರ ಮತ್ತು ಬಹುಆಯಾಮದಿಂದ ಕೂಡಿದೆ ಎಂದು ವಿಶ್ವಸಂಸ್ಥೆ ಅಧೀನದ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಪ್ರಧಾನ ಕಾರ್ಯದರ್ಶಿ ಲಿಯು ಝೆನ್ಮಿನ್ ಹೇಳಿದ್ದಾರೆ. ಜೊತೆಗೆ ವೇಗದ ಜನಸಂಖ್ಯೆಯ ಬೆಳವಣಿಗೆಯು ಬಡತನವನ್ನು ನಿರ್ಮೂಲನೆ ಮಾಡುತ್ತದೆ. ಹಸಿವು ಮತ್ತು ಅಪೌಷ್ಟಿಕತೆಯ ವಿರುದ್ಧ ಹೋರಾಡುತ್ತದೆ. ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆಯ ವ್ಯಾಪ್ತಿಯನ್ನು ಹೆಚ್ಚು ಸಂಕೀರ್ಣಗೊಳಿಸುತ್ತದೆ ಎಂದೂ ತಿಳಿಸಿದ್ದಾರೆ.

ಇದೇ ವೇಳೆ ಇದಕ್ಕೆ ವ್ಯತಿರಿಕ್ತವಾಗಿ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವುದು ಮತ್ತು ವಿಶೇಷವಾಗಿ ಆರೋಗ್ಯ, ಶಿಕ್ಷಣ ಮತ್ತು ಲಿಂಗ ಸಮಾನತೆಗೆ ಸಂಬಂಧಿಸಿದ ವಿಷಯವೂ ಆಗಿದೆ. ಇಷ್ಟೇ ಅಲ್ಲ, ಜನನ ಫಲವತ್ತತೆಯ ಮಟ್ಟವನ್ನು ಕಡಿಮೆ ಮಾಡಲು ಮತ್ತು ಜಾಗತಿಕ ಜನಸಂಖ್ಯೆಯ ಬೆಳವಣಿಗೆಯನ್ನು ನಿಧಾನಗೊಳಿಸಲು ಕಾರಣವಾಗುತ್ತದೆ ಎಂದು ಲಿಯು ಝೆನ್ಮಿನ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: 800 ಕೋಟಿ ತಲುಪಿದ ವಿಶ್ವದ ಜನಸಂಖ್ಯೆ: ಚೀನಾ ಹಿಂದಿಕ್ಕಲು ಭಾರತಕ್ಕೆ ಬೇಕು ಒಂದೇ ಒಂದು ವರ್ಷ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.