ಉವಾಲ್ಡೆ(ಅಮೆರಿಕ): ಮೇ 24 ರಂದು ಬೆಳಗ್ಗೆ 11.32ರ ಸುಮಾರಿಗೆ ಅಮೆರಿಕದ ಟೆಕ್ಸಾಸ್‌ನ ಉವಾಲ್ಡೆಯಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ಬಂದೂಕುಧಾರಿಯೊಬ್ಬ ಮನಸೋಇಚ್ಛೆ ಗುಂಡಿನ ದಾಳಿ ನಡೆಸಿ 18 ಮಕ್ಕಳು ಸೇರಿದಂತೆ 21 ಮಂದಿಯನ್ನು ದಾರುಣವಾಗಿ ಕೊಲೆ ಮಾಡಿದ್ದ. ನಿನ್ನೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮೃತ ವಿದ್ಯಾರ್ಥಿಗಳ ಕುಟುಂಬಸ್ಥರನ್ನು ಭೇಟಿ ಮಾಡಿ, ಸಾಂತ್ವನ ಹೇಳಿದರು.
ಮೊದಲು ಅವರು, ರಾಬ್ ಎಲಿಮೆಂಟರಿ ಶಾಲೆಯಲ್ಲಿ ಮೃತಪಟ್ಟ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ಮೃತರ ಪೋಷಕರನ್ನು ಭೇಟಿ ಮಾಡಿ ಸಂತ್ವಾನ ಹೇಳಿದರು. ಸುಮಾರು ಮೂರು ಗಂಟೆಗಳ ಕಾಲ ಮಾತುಕತೆ ನಡೆಸಿ ಕಾರಿನ ಕಡೆಗೆ ನಿರ್ಗಮಿಸುತ್ತಿದ್ದಾ, 100 ಜನರ ಗುಂಪೊಂದು ಘಟನೆಗೆ ಸಂಬಂಧಿಸಿದಂತೆ "ಏನಾದರೂ ಮಾಡಿ", ನ್ಯಾಯ ದೊರಕಿಸಿಕೊಡಿ ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಬೈಡನ್, "ನಾವು ಮಾಡುತ್ತೇವೆ" ಈ ಕುರಿತು ಕ್ರಮ ಕೈಗೊಳ್ಳುತ್ತೇವೆ. ಯಾರೂ ಭಯಪಡಬೇಡಿ ಎಂದು ಭರವಸೆ ನೀಡಿದರು.
-
Today, the President and First Lady traveled to Uvalde, Texas, to visit the memorial site at Robb Elementary School, meet with families of victims and survivors, and meet with first responders. pic.twitter.com/u0pL1DW5QY
— The White House (@WhiteHouse) May 29, 2022 " class="align-text-top noRightClick twitterSection" data="
">Today, the President and First Lady traveled to Uvalde, Texas, to visit the memorial site at Robb Elementary School, meet with families of victims and survivors, and meet with first responders. pic.twitter.com/u0pL1DW5QY
— The White House (@WhiteHouse) May 29, 2022Today, the President and First Lady traveled to Uvalde, Texas, to visit the memorial site at Robb Elementary School, meet with families of victims and survivors, and meet with first responders. pic.twitter.com/u0pL1DW5QY
— The White House (@WhiteHouse) May 29, 2022
ಇತ್ತೀಚೆಗೆ, ನ್ಯೂಯಾರ್ಕ್ನ ಬಫಲೊ ನಗರದ ಸೂಪರ್ ಮಾರ್ಕೆಟ್‌ನಲ್ಲಿ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿದ ಪರಿಣಾಮ 10 ಮಂದಿ ಸಾವನ್ನಪ್ಪಿದ್ದರು. ಎರಡು ವಾರಗಳ ನಂತರ ಮತ್ತೆ ಈ ಘಟನೆ ನಡೆದಿದೆ. ಆ ಘಟನೆಯನ್ನು 'ಜನಾಂಗೀಯ ಪ್ರೇರಿತ' ಸಾಮೂಹಿಕ ಗುಂಡಿನ ದಾಳಿ ಎಂದು ಹೇಳಲಾಗಿತ್ತು. ಅಮೆರಿಕದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿರುವುದು ವಿಷಾದದ ಸಂಗತಿ. ನಾವು ಗನ್ ಲಾಬಿಗೆ ಕಡಿವಾಣ ಹಾಕುತ್ತೇವೆ ಎಂದು ಬೈಡನ್ ತಿಳಿಸಿದ್ದಾರೆ.
ಇದನ್ನೂ ಓದಿ: ಟೆಕ್ಸಾಸ್ ಶಾಲೆಯಲ್ಲಿ ಗುಂಡಿನ ದಾಳಿ: 18 ಮಕ್ಕಳು ಸೇರಿ 21 ಮಂದಿ ಕೊಲೆ, ಹಂತಕನ ಹತ್ಯೆ!