ETV Bharat / international

ಉಕ್ರೇನ್​ಗೆ ಮತ್ತೆ 1 ಬಿಲಿಯನ್ ಡಾಲರ್​ ನೆರವು ನೀಡಿದ ಅಮೆರಿಕ - ಉಕ್ರೇನ್​ಗೆ ಮಿಲಿಟರಿ ಸಹಾಯ

ಉಕ್ರೇನ್​ಗೆ ಮತ್ತೆ 1 ಬಿಲಿಯನ್ ಡಾಲರ್ ಮಿಲಿಟರಿ ನೆರವು ನೀಡುವುದಾಗಿ ಅಮೆರಿಕ ಹೇಳಿದೆ.

US announces new $1bn military assistance to Ukraine

author img

By ETV Bharat Karnataka Team

Published : Sep 7, 2023, 3:55 PM IST

ವಾಷಿಂಗ್ಟನ್​​ : ರಷ್ಯಾದೊಂದಿಗೆ ಯುದ್ಧನಿರತವಾಗಿರುವ ಉಕ್ರೇನ್​ಗೆ ಮಿಲಿಟರಿ ಸಹಾಯ ನೀಡುವುದನ್ನು ಮುಂದುವರೆಸಿರುವ ಅಮೆರಿಕ, ಈಗ ಉಕ್ರೇನ್​ಗೆ ಮತ್ತೆ 1 ಬಿಲಿಯನ್ ಡಾಲರ್ ನೆರವು ನೀಡುವುದಾಗಿ ಘೋಷಿಸಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಈ ಮಾಹಿತಿ ನೀಡಿದ್ದಾರೆ. ಅಲ್ಲದೇ ಇದೇ ಮೊದಲ ಬಾರಿಗೆ ಅಮೆರಿಕ ಉಕ್ರೇನ್​ಗೆ ಕ್ಷೀಣಿಸಿದ ಯುರೇನಿಯಂ ಶಸ್ತ್ರಾಸ್ತ್ರಗಳನ್ನು ಕೂಡ ನೀಡಲಿದೆ.

ಈ ಮದ್ದು ಗುಂಡುಗಳನ್ನು ಪರಮಾಣು ವಿದ್ಯುತ್ ಸ್ಥಾವರಗಳಲ್ಲಿ ಇಂಧನ ಉತ್ಪಾದನೆಯ ನಂತರ ಸಿಗುವ ಉಪ ಉತ್ಪನ್ನವಾದ ಗಟ್ಟಿಯಾದ ಲೋಹದಿಂದ ತಯಾರಿಸಲಾಗಿರುವುದರಿಂದ ಇವು ಸ್ವಲ್ಪ ವಿಕಿರಣಶೀಲವಾಗಿರುತ್ತವೆ ಹಾಗೂ ಇವು ಈ ವರ್ಷದ ಕೊನೆಯಲ್ಲಿ ಉಕ್ರೇನ್​ ತಲುಪುವ ಸಾಧ್ಯತೆಗಳಿವೆ. ಈ ಮದ್ದುಗುಂಡುಗಳನ್ನು ಅಮೆರಿಕ ನಿರ್ಮಿತ ಅಬ್ರಾಮ್ಸ್ ಟ್ಯಾಂಕ್​ಗಳಿಂದ ಹಾರಿಸಬಹುದು.

ಈ ಪ್ಯಾಕೇಜ್​ನಲ್ಲಿ ವಾಯು ರಕ್ಷಣಾ ವ್ಯವಸ್ಥೆಯ ಘಟಕಗಳು, HIMARS ಮಾರ್ಗದರ್ಶಿ ಬಹು ಉಡಾವಣಾ ರಾಕೆಟ್ ವ್ಯವಸ್ಥೆಗಳು, ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸಂವಹನ ವ್ಯವಸ್ಥೆಗಳು ಸೇರಿವೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ದೀರ್ಘಕಾಲೀನ ಮಿಲಿಟರಿ ಬೆಂಬಲ ನೀಡುವ ಯೋಜನೆಯಡಿಯ ವಿದೇಶಿ ಮಿಲಿಟರಿ ಹಣಕಾಸು ಕಾರ್ಯಕ್ರಮದಡಿ ಹೊಸ ನೆರವಿನ ಪ್ಯಾಕೇಜ್ 100 ಮಿಲಿಯನ್ ಡಾಲರ್ ಮಿಲಿಟರಿ ಬೆಂಬಲವನ್ನು ಒಳಗೊಂಡಿದೆ ಎಂದು ಇಲಾಖೆ ತಿಳಿಸಿದೆ.

ಹೊಸ ಪ್ಯಾಕೇಜ್​ನಲ್ಲಿನ 200 ಮಿಲಿಯನ್ ಡಾಲರ್​ಗಿಂತ ಹೆಚ್ಚಿನ ಹಣವನ್ನು ಭ್ರಷ್ಟಾಚಾರ ವಿರೋಧಿ ಪ್ರಯತ್ನಗಳನ್ನು ಹೆಚ್ಚಿಸುವುದು, ಕಾನೂನು ಸುವ್ಯವಸ್ಥೆ ಕಾಪಾಡುವುದು ಸೇರಿದಂತೆ ಪಾರದರ್ಶಕತೆ ಮತ್ತು ಸುಧಾರಣೆಯ ಖರ್ಚುಗಳಿಗಾಗಿ ಬಳಸಲಾಗುತ್ತದೆ.

ಏತನ್ಮಧ್ಯೆ, ಪ್ಯಾಕೇಜ್​ನ ಒಟ್ಟು 206 ಮಿಲಿಯನ್ ಡಾಲರ್ ಮಾನವೀಯ ನೆರವಿನ ಭಾಗವನ್ನು ಉಕ್ರೇನ್​ನಲ್ಲಿರುವವರಿಗೆ ಮತ್ತು ಅನಿವಾರ್ಯವಾಗಿ ನೆರೆಯ ದೇಶಗಳಿಗೆ ವಲಸೆ ಹೋದವರಿಗೆ ಸಹಾಯ ಮಾಡಲು ಬಳಸಲಾಗುವುದು. ಕೀವ್​ನಲ್ಲಿ ಬುಧವಾರ ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ ಅವರೊಂದಿಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬ್ಲಿಂಕೆನ್, "ಕಳೆದ ಕೆಲ ವಾರಗಳಿಂದ ಪ್ರತಿದಾಳಿಯ ವೇಗವು ಹೆಚ್ಚಾಗಿದೆ. ಈ ಹೊಸ ಸಹಾಯವು ಅದನ್ನು ಉಳಿಸಿಕೊಳ್ಳಲು ಮತ್ತು ಮತ್ತಷ್ಟು ವೇಗವಾಗಿ ಪ್ರತಿದಾಳಿ ಮಾಡಲು ಸಹಾಯ ಮಾಡಲಿದೆ." ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ, "ಅಮೆರಿಕದ ಜನರಿಗೆ, ಯುಎಸ್ ಕಾಂಗ್ರೆಸ್​ನ ಎರಡೂ ಪಕ್ಷಗಳಿಗೆ ಮತ್ತು ಅಧ್ಯಕ್ಷ ಜೋ ಬೈಡನ್ ಅವರ ಅಚಲ ಬೆಂಬಲಕ್ಕಾಗಿ ಅವರೆಲ್ಲರಿಗೂ ನಾನು ವೈಯಕ್ತಿಕವಾಗಿ ಕೃತಜ್ಞನಾಗಿದ್ದೇನೆ" ಎಂದು ಹೇಳಿದರು. 2022ರ ಫೆಬ್ರವರಿ 24 ರಂದು ರಷ್ಯಾ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಮಿಲಿಟರಿ ದಾಳಿಯನ್ನು ಆರಂಭಿಸಿದೆ. ಅಂದಿನಿಂದಲೂ ಎರಡೂ ದೇಶಗಳ ಮಧ್ಯೆ ಯುದ್ಧ ಮುಂದುವರೆದಿದೆ.

ಇದನ್ನೂ ಓದಿ : ಸೆ.3 ರಂದು 'ಸನಾತನ ಧರ್ಮ ದಿನ' ಆಚರಣೆ; ಭಾರತದಲ್ಲಿ ಅಲ್ಲ, ಇದು ಅಮೆರಿಕದಲ್ಲಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.