ವಾಷಿಂಗ್ಟನ್: ಬಾತ್‌ರೂಮ್ ಕ್ಲೋಸೆಟ್‌ನ ಪಾಪ್‌ಕಾರ್ನ್ ಟಿನ್ ಕೆಳಭಾಗದಲ್ಲಿ ಸರ್ಕ್ಯೂಟ್ ಬೋರ್ಡ್ ಮೂಲಕ ಬಚ್ಚಿಟ್ಟಿದ್ದ 3.36 ಬಿಲಿಯನ್ ಡಾಲರ್ ಮೌಲ್ಯದ 50,676 ಬಿಟ್‌ಕಾಯಿನ್ ಅನ್ನು ಯುಎಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಜಾರ್ಜಿಯಾದ ಜೇಮ್ಸ್ ಝಾಂಗ್ (32), 2012 ರಲ್ಲಿ ಡಾರ್ಕ್ ವೆಬ್‌ನ "ದಿ ಅಮೆಜಾನ್ ಆಫ್ ಡ್ರಗ್ಸ್" ಎಂದು ಕರೆಯಲ್ಪಡುವ ಸಿಲ್ಕ್ ರೋಡ್‌ನಿಂದ 50,000 ಕ್ಕೂ ಹೆಚ್ಚು ಬಿಟ್‌ಕಾಯಿನ್ ಅನ್ನು ಮೋಸದಿಂದ ಪಡೆದಿದ್ದ. ಅದರ ಮೌಲ್ಯ 3.3 ಶತಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿತ್ತು.
2011 ರಿಂದ 2013 ರ ಕಾರ್ಯಾಚರಣೆಯ ಪ್ರಕಾರ, ಹಲವಾರು ಡ್ರಗ್ ಡೀಲರ್‌ಗಳು, ಕಾನೂನುಬಾಹಿರ ಮಾರಾಟಗಾರರು ಬೃಹತ್ ಪ್ರಮಾಣದ ಅಕ್ರಮ ಔಷಧಗಳು, ಸರಕುಗಳನ್ನು ಗ್ರಾಹಕರಿಗೆ ವಿತರಿಸಲು ಮತ್ತು ಅದರಿಂದ ಪಡೆಯುವ ಹಣವನ್ನು ಅಕ್ರಮವಾಗಿ ಪರಭಾರೆ ಮಾಡಲು ಸಿಲ್ಕ್ ರೋಡ್ ಬಳಸುತ್ತಿದ್ದರು.
"ಯಾವುದೇ ಕಾರಣಕ್ಕೂ ಇಂತಹ ದಂಧೆಗಳನ್ನು ಮುಂದುವರೆಯಲು ನಾವು ಬಿಡುವುದಿಲ್ಲ. ಎಷ್ಟೇ ಪರಿಣಿತವಾಗಿ ಅಡಗಿಸಿಟ್ಟರೂ ನಾವು ಕಂಡುಹಿಡಿಯುತ್ತೇವೆ ಎಂಬುದಕ್ಕೆ ಇದೇ ಪ್ರಕರಣ ಸಾಕ್ಷಿ" ಎಂದು ಯುಎಸ್ ಅಟಾರ್ನಿ ಡಾಮಿಯನ್ ವಿಲಿಯಮ್ಸ್ ಹೇಳಿದ್ದಾರೆ.
ಸಿಲ್ಕ್ ರೋಡ್ ಸಂಸ್ಥಾಪಕ ರೋಸ್ ಉಲ್ಬ್ರಿಚ್ಟ್ ಎಂಬಾತನನ್ನು ತಪ್ಪಿತಸ್ಥನೆಂದು ನಿರ್ಣಯಿಸಿ, 2015 ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
ಇದನ್ನೂ ಓದಿ : ಮಾಸ್ಕೋದಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್; ಯುದ್ಧದ ನಡುವೆ ಗಮನ ಸೆಳೆದ ಭೇಟಿ