ಮಾಸ್ಕೋ (ರಷ್ಯಾ): ದೇಶದಲ್ಲಿನ ಸರ್ಕಾರಿ ಅಧಿಕಾರಿಗಳು ಐಫೋನ್‌ಗಳನ್ನು ಬಳಸದಂತೆ ರಷ್ಯಾ ಸರ್ಕಾರ ನಿರ್ಬಂಧ ಹೇರಿದೆ. ಐಫೋನ್‌ಗಳ ಮೂಲಕ ಅಮೆರಿಕ ರಷ್ಯಾದ ಮೇಲೆ ಗೂಢಚಾರಿಕೆ ನಡೆಸುತ್ತಿದೆ ಎಂಬ ಭೀತಿಯಿಂದ ರಷ್ಯಾ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಸಾವಿರಾರು ಅಧಿಕಾರಿಗಳಿಗೆ ಐಫೋನ್‌ಗಳು ಮತ್ತು ಐಪ್ಯಾಡ್‌ಗಳಂತಹ ಇತರ ಆಪಲ್ ಉತ್ಪನ್ನಗಳನ್ನು ಬಳಸುವುದನ್ನು ನಿಲ್ಲಿಸುವಂತೆ ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್ (ಎಫ್‌ಎಸ್‌ಎಸ್) ಹೇಳಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಜುಲೈ 17 ರಿಂದ ರಷ್ಯಾದ ವಾಣಿಜ್ಯ ಸಚಿವಾಲಯದ ಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ಐಫೋನ್‌ಗಳನ್ನು ಬಳಸುವಂತಿಲ್ಲ ಎಂದು ವರದಿಗಳು ತಿಳಿಸಿವೆ. ಸಚಿವಾಲಯಗಳಲ್ಲಿನ ಭದ್ರತಾ ಅಧಿಕಾರಿಗಳು ಅಂದರೆ ಉಪ ಮಂತ್ರಿಗಳಂತಹ ನಾಗರಿಕ ಸ್ಥಾನಗಳನ್ನು ಹೊಂದಿರುವ ಎಫ್‌ಎಸ್‌ಬಿ ಉದ್ಯೋಗಿಗಳು ಐಫೋನ್‌ಗಳನ್ನು ಬಳಸುವುದು ಸುರಕ್ಷಿತವಲ್ಲ ಮತ್ತು ಐಫೋನ್ ಬದಲು ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ಅಮೆರಿಕನ್ನರು ತಮ್ಮ ಐಫೋನ್‌ಗಳನ್ನು ವೈರ್ ಟ್ಯಾಪಿಂಗ್‌ಗಾಗಿ ಬಳಸಬಹುದು ಎಂದು ಎಫ್‌ಎಸ್‌ಬಿ ಮತ್ತು ಸರ್ಕಾರಿ ಅಧಿಕಾರಿಗಳು ನಿಜವಾಗಿಯೂ ನಂಬಿದ್ದಾರೆ. ಎಫ್‌ಎಸ್‌ಬಿ ವೃತ್ತಿಪರ ಸಂಪರ್ಕಗಳಿಗಾಗಿ ಐಫೋನ್‌ಗಳ ಬಳಕೆಯ ಬಗ್ಗೆ ದೀರ್ಘಕಾಲದಿಂದ ಆತಂಕ ಹೊಂದಿದೆ. ಆ್ಯಪಲ್ ಸಾಧನಗಳು ಹ್ಯಾಕಿಂಗ್ಗೆ ಗುರಿಯಾಗಬಹುದು ಎಂಬ ಭಯದಿಂದ ಮಾರ್ಚ್‌ನಲ್ಲಿ ಕ್ರೆಮ್ಲಿನ್ ಆ್ಯಪಲ್ ಉತ್ಪನ್ನಗಳನ್ನು ಬಳಸುವುದನ್ನು ನಿಲ್ಲಿಸುವಂತೆ ತನ್ನ ಅಧಿಕಾರಿಗಳಿಗೆ ತಿಳಿಸಿತ್ತು. ಆ್ಯಪಲ್ ಯುಎಸ್ ಗುಪ್ತಚರ ಏಜೆನ್ಸಿಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಕಳೆದ ತಿಂಗಳು ರಷ್ಯಾ ಸರ್ಕಾರ ಆರೋಪಿಸಿತ್ತು. ಆದರೆ ಈ ಆರೋಪಗಳನ್ನು ಆ್ಯಪಲ್ ಬಲವಾಗಿ ನಿರಾಕರಿಸಿದೆ.
ಯಾವುದೇ ಆ್ಯಪಲ್ ಉತ್ಪನ್ನವನ್ನು ಹಿಂಬಾಗಿಲ ಮೂಲಕ ಮಾರಾಟ ಮಾಡಲು ಕಂಪನಿಯು ಯಾವುದೇ ಸರ್ಕಾರದೊಂದಿಗೆ ಕೆಲಸ ಮಾಡಿಲ್ಲ ಎಂದು ಆ್ಯಪಲ್ ಹೇಳಿದೆ. ಪ್ರಮುಖ ಸಚಿವಾಲಯಗಳು ಮತ್ತು ಸಂಸ್ಥೆಗಳಲ್ಲಿ ಆ್ಯಪಲ್ ಉತ್ಪನ್ನಗಳ ಮೇಲಿನ ನಿಷೇಧವು ರಷ್ಯಾದ ಸರ್ಕಾರಿ ಸಂಸ್ಥೆಗಳ ವಿರುದ್ಧ ಯುಎಸ್ ಗುಪ್ತಚರ ಏಜೆನ್ಸಿಗಳ ಬೇಹುಗಾರಿಕೆ ಚಟುವಟಿಕೆಗಳ ಹೆಚ್ಚಳದ ಬಗ್ಗೆ ಕ್ರೆಮ್ಲಿನ್ ಮತ್ತು ಫೆಡರಲ್ ಸೆಕ್ಯುರಿಟಿ ಸರ್ವೀಸ್ ಬೇಹುಗಾರಿಕಾ ಸಂಸ್ಥೆಯಲ್ಲಿ ಹೆಚ್ಚುತ್ತಿರುವ ಆತಂಕವನ್ನು ಪ್ರತಿಬಿಂಬಿಸುತ್ತದೆ ಎಂದು ವರದಿ ಹೇಳಿದೆ.
ರಷ್ಯಾ ಆಕ್ರಮಿತ ಕ್ರಿಮಿಯನ್ ಪರ್ಯಾಯ ದ್ವೀಪವನ್ನು ರಷ್ಯಾಕ್ಕೆ ಸಂಪರ್ಕಿಸುವ ಸೇತುವೆಯ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಘಟನೆಗೆ ಕೀವ್ ಕಾರಣ ಎಂದು ಕ್ರಿಮಿಯಾ ಸಂಸತ್ತಿನ ಮುಖ್ಯಸ್ಥರು ಆರೋಪಿಸಿದ್ದಾರೆ. ಆದರೆ ಈ ಬಗ್ಗೆ ಉಕ್ರೇನ್ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಭಾನುವಾರ (ಜುಲೈ 16) ಪೂರ್ವ ಭಾಗದಲ್ಲಿ ತೀವ್ರಗೊಂಡಿದೆ ಎಂದು ಉಕ್ರೇನ್ ಹೇಳಿದೆ.
ರಷ್ಯಾ ಉಕ್ರೇನ್ನೊಂದಿಗಿನ ಧಾನ್ಯ ಸರಬರಾಜು ಒಪ್ಪಂದವನ್ನು ನವೀಕರಿಸಲಿದೆಯೇ ಎಂದು ಪುಟಿನ್ ಇನ್ನೂ ನಿರ್ಧರಿಸಿಲ್ಲ. ಒಪ್ಪಂದ ಸೋಮವಾರ ಮುಕ್ತಾಯಗೊಳ್ಳಲಿದೆ. ಉಕ್ರೇನ್ ಕಳೆದ ತಿಂಗಳು ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಶಸ್ತ್ರಾಸ್ತ್ರಗಳನ್ನು ಪಡೆದುಕೊಂಡ ನಂತರ ಹೋರಾಟವನ್ನು ತೀವ್ರಗೊಳಿಸಿದೆ.
ಇದನ್ನೂ ಓದಿ : Russia Ukraine War: ಕ್ಲಸ್ಟರ್ ಬಾಂಬ್ ಸಾಕಷ್ಟಿವೆ, ಅಗತ್ಯ ಬಿದ್ದರೆ ಪ್ರಯೋಗಿಸುತ್ತೇವೆ; ಪುಟಿನ್ ವಾರ್ನಿಂಗ್