ETV Bharat / international

ಮೋದಿ ಆತ್ಮೀಯವಾಗಿ ಬರಮಾಡಿಕೊಂಡ ಅಮೆರಿಕ ಅಧ್ಯಕ್ಷ.. ಬೈಡನ್​ ದಂಪತಿಯಿಂದ ಉಡುಗೊರೆ ಪಡೆಯಲಿರುವ ಪ್ರಧಾನಿ - ಅಧಿಕೃತ ರಾಜ್ಯ ಪ್ರವಾಸದ ಎರಡನೇ ಹಂತ

ವರ್ಜೀನಿಯಾದ ಅಲೆಕ್ಸಾಂಡ್ರಿಯಾದಲ್ಲಿರುವ ನ್ಯಾಷನಲ್ ಸೈನ್ಸ್ ಫೌಂಡೇಶನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಶ್ವೇತಭವನಕ್ಕೆ ಆಗಮಿಸಿದ್ದು, ಮೋದಿ ಅವರನ್ನು ಬೈಡನ್​ ದಂಪತಿ ಸ್ವಾಗತಿಸಿದರು.

the official gift  US President Joe Biden  First Lady Jill Biden will present PM Modi  ಬೈಡನ್​ ದಂಪತಿಯಿಂದ ಅಮೂಲ್ಯವಾದ ಉಡುಗೊರೆ  ಉಡುಗೊರೆ ಪಡೆಯಲಿರುವ ಪ್ರಧಾನಿ ಮೋದಿ  First Lady Jill Biden  Biden welcome PM Modi at White House  ನ್ಯಾಷನಲ್ ಸೈನ್ಸ್ ಫೌಂಡೇಶನ್‌ನಲ್ಲಿ ನಡೆದ ಕಾರ್ಯಕ್ರಮ  ಪ್ರಧಾನಿ ನರೇಂದ್ರ ಮೋದಿ ಅವರು ಶ್ವೇತಭವನ  ಮೋದಿ ಅವರನ್ನು ಬೈಡನ್​ ದಂಪತಿ ಸ್ವಾಗತ  ಅಮೆರಿಕ ಅಧ್ಯಕ್ಷ ಜೋ ಬೈಡನ್  ಥಮ ಮಹಿಳೆ ಜಿಲ್ ಬೈಡನ್  ಅಧಿಕೃತ ರಾಜ್ಯ ಪ್ರವಾಸದ ಎರಡನೇ ಹಂತ  ಬೈಡನ್ ಅವರಿಂದ ಹಲವು ವಿಶೇಷ ಉಡುಗೊರೆ
ಮೋದಿಯನ್ನು ಆತ್ಮೀಯವಾಗಿ ಬರಮಾಡಿಕೊಂಡ ಅಮೆರಿಕ ಅಧ್ಯಕ್ಷ
author img

By

Published : Jun 22, 2023, 7:25 AM IST

Updated : Jun 22, 2023, 8:26 AM IST

ಮೋದಿಯನ್ನು ಆತ್ಮೀಯವಾಗಿ ಬರಮಾಡಿಕೊಂಡ ಅಮೆರಿಕ ಅಧ್ಯಕ್ಷ

ವಾಷಿಂಗ್ಟನ್, ಅಮೆರಿಕ: ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್ ಅವರು ಬುಧವಾರದಂದು ವಾಷಿಂಗ್ಟನ್ ಡಿಸಿಯ ಶ್ವೇತಭವನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅವರ ಅಧಿಕೃತ ರಾಜ್ಯ ಪ್ರವಾಸದ ಎರಡನೇ ಹಂತವಾಗಿ ಬರಮಾಡಿಕೊಂಡರು. ಉಭಯ ಕುಶಲೋಪಚರಿ ಬಳಿಕ ಫೋಟೋಗಳಿಗೆ ಪೋಸ್​ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ನ್ಯೂಯಾರ್ಕ್​ ಭೇಟಿ ಬಳಿಕ ವಾಷಿಂಗ್ಟನ್ ತಲುಪಿದ್ದಾರೆ. ಈ ಸಮಯದಲ್ಲಿ, ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್​ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಮತ್ತು ಅಮೆರಿಕ ಕಾಂಗ್ರೆಸ್ (ಸಂಸತ್ತು) ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಲ್ಲದೇ, ಪ್ರಧಾನಿ ಮೋದಿ ಇಲ್ಲಿ ಬೈಡನ್ ಅವರಿಂದ ಹಲವು ವಿಶೇಷ ಉಡುಗೊರೆಗಳನ್ನು ಸ್ವೀಕರಿಸಲಿದ್ದಾರೆ.

ಅಧಿಕೃತ ಉಡುಗೊರೆಯಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್ ಅವರು 20 ನೇ ಶತಮಾನದ ಆರಂಭದ ಕೈಯಿಂದ ತಯಾರಿಸಿದ, ಪುರಾತನ ಅಮೆರಿಕನ್ ಪುಸ್ತಕದ ಗ್ಯಾಲಿಯನ್ನು ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಲಿದ್ದಾರೆ. ಅಧ್ಯಕ್ಷ ಜೋ ಬೈಡನ್ ಪಿಎಂ ಮೋದಿಯವರಿಗೆ ವಿಂಟೇಜ್ ಅಮೆರಿಕನ್ ಕ್ಯಾಮೆರಾವನ್ನು ಉಡುಗೊರೆಯಾಗಿ ನೀಡಲಿದ್ದಾರೆ, ಇದರ ಜೊತೆಗೆ ಜಾರ್ಜ್ ಈಸ್ಟ್‌ಮನ್ ಅವರ ಮೊದಲ ಕೊಡಾಕ್ ಕ್ಯಾಮೆರಾ ಪೇಟೆಂಟ್‌ನ ಆರ್ಕೈವಲ್ ಪ್ರತಿಕೃತಿ ಮುದ್ರಣ ಮತ್ತು ಅಮೆರಿಕನ್​ ವನ್ಯಜೀವಿ ಛಾಯಾಗ್ರಹಣದ ಹಾರ್ಡ್‌ಕವರ್ ಪುಸ್ತಕವನ್ನು ಸಹ ನೀಡಲಿದ್ದಾರೆ. ಜಿಲ್ ಬೈಡನ್ ಅವರ ಪರವಾಗಿ 'ರಾಬರ್ಟ್ ಫ್ರಾಸ್ಟ್ ಅವರ ಕಲೆಕ್ಟೆಡ್ ಪೊಯಮ್ಸ್' ಸಹಿ ಮಾಡಿದ, ಮೊದಲ ಆವೃತ್ತಿಯ ಪ್ರತಿಯನ್ನು ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಲಾಗುವುದು ಎಂದು ಶ್ವೇತಭವನ ತಿಳಿಸಿದೆ.

ಇದೆಲ್ಲದರ ಹೊರತಾಗಿ ಬುಧವಾರದಂದು ಅಮೆರಿಕ ಅಧ್ಯಕ್ಷ ಜೋ ಬೈಡನ್, ಪ್ರಥಮ ಮಹಿಳೆ ಜಿಲ್ ಬೈಡನ್ ಮತ್ತು ಪಿಎಂ ಮೋದಿ ಅವರು ಭಾರತೀಯ ಪ್ರದೇಶಗಳನ್ನು ಗೌರವಿಸಲು ಆಯೋಜಿಸಲಾದ ಸಂಗೀತ ವಾತಾವರಣವನ್ನು ಆನಂದಿಸಿದರು. DMV-ಆಧಾರಿತ ಭಾರತೀಯ ನೃತ್ಯ ಸ್ಟುಡಿಯೋ 'ಸ್ಟುಡಿಯೋ ಧೂಮ್' ನ ಯುವ ನೃತ್ಯಗಾರರು ಸಂಗೀತವನ್ನು ಪ್ರದರ್ಶಿಸಿದ್ದರು. ಅವರು ಹೊಸ ಪೀಳಿಗೆಯನ್ನು ಭಾರತೀಯ ನೃತ್ಯದ ರೋಮಾಂಚಕ ಸಂಸ್ಕೃತಿಗೆ ಸೆಳೆಯುವ ಪಯತ್ನವನ್ನು ಮಾಡುತ್ತಾರೆ.

ಪ್ರಧಾನಿ ಮೋದಿ ಅವರು ನ್ಯೂಯಾರ್ಕ್‌ನಿಂದ ವಾಷಿಂಗ್ಟನ್​ಗೆ ಆಗಮಿಸಿದ್ದರು. ಅಲ್ಲಿ ಅವರು ಯುನೈಟೆಡ್ ನೇಷನ್ಸ್ ಪ್ರಧಾನ ಕಚೇರಿಯಲ್ಲಿ ಒಂಬತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ, ಯೋಗದ ಮಹತ್ವ ಸಾರಿದರು. ಯೋಗ ದಿನಾಚರಣೆಯಲ್ಲಿ ಅಮೆರಿಕದ ಅಧಿಕಾರಿಗಳು, ರಾಜತಾಂತ್ರಿಕರು ಮತ್ತು ಪ್ರಮುಖ ವ್ಯಕ್ತಿಗಳು ಭಾಗವಹಿಸಿದ್ದರು. ಪ್ರಧಾನಿ ಮೋದಿ ಟ್ವೀಟ್ ಮಾಡಿ, 'ನಾನು ವಾಷಿಂಗ್ಟನ್ ಡಿಸಿ ತಲುಪಿದ್ದೇನೆ. ಭಾರತೀಯ ಸಮುದಾಯದ ಉಷ್ಣತೆ ಮತ್ತು ಇಂದ್ರನ ಆಶೀರ್ವಾದವು ಆಗಮನವನ್ನು ಇನ್ನಷ್ಟು ವಿಶೇಷಗೊಳಿಸಿತು ಎಂದು ಬಣ್ಣಿಸಿದ್ದಾರೆ.

ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್ ಅವರ ಆಹ್ವಾನದ ಮೇರೆಗೆ ಅಮೆರಿಕಕ್ಕೆ ಭೇಟಿ ನೀಡಿರುವ ಪ್ರಧಾನಿ ಗುರುವಾರ ರಾಜ್ಯ ಔತಣಕೂಟದಲ್ಲಿ ಭಾಗವಹಿಸಲಿದ್ದು, ಅಲ್ಲಿ ಅನೇಕ ಗಣ್ಯರು ಉಪಸ್ಥಿತರಿರಲಿದ್ದಾರೆ. ವಾಷಿಂಗ್ಟನ್ ಡಿಸಿಯ ಜಾಯಿಂಟ್ ಬೇಸ್ ಆಂಡ್ರ್ಯೂಸ್‌ಗೆ ಆಗಮಿಸಿದ ಪ್ರಧಾನಿ ಮೋದಿ, ಅಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆಯ ನಡುವೆ 'ಗಾರ್ಡ್ ಆಫ್ ಆನರ್' ನೀಡಲಾಯಿತು. ರೈನ್‌ಕೋಟ್‌ ಧರಿಸಿದ ಪ್ರಧಾನಿ, ಎರಡೂ ದೇಶಗಳ ರಾಷ್ಟ್ರಗೀತೆಗಳಿಗೆ ಗೌರವ ಸೂಚಿಸಿದರು.

ಓದಿ: 'ಯೋಗಕ್ಕೆ ಕಾಪಿರೈಟ್​, ಪೇಟೆಂಟ್‌, ರಾಯಲ್ಟಿ ಇಲ್ಲ': ವಿಶ್ವಸಂಸ್ಥೆಯಲ್ಲಿ ಯೋಗ ದಿನಾಚರಣೆಗೆ ಚಾಲನೆ ನೀಡಿ ಮೋದಿ ಮಾತು

Last Updated : Jun 22, 2023, 8:26 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.