ETV Bharat / international

ಕ್ಯಾಲಿಫೋರ್ನಿಯಾ ಚರ್ಚ್‌ನಲ್ಲಿ ಗುಂಡಿನ ದಾಳಿ: ಓರ್ವ ಸಾವು, ಐವರಿಗೆ ಗಾಯ

ಭಾನುವಾರ ಮಧ್ಯಾಹ್ನ ದಕ್ಷಿಣ ಕ್ಯಾಲಿಫೋರ್ನಿಯಾದ ಆರೆಂಜ್ ಕೌಂಟಿಯ ಲಗುನಾ ವುಡ್ಸ್ ನಗರದ ಎಲ್ ಟೊರೊ ರಸ್ತೆಯ 24000 ಬ್ಲಾಕ್‌ನಲ್ಲಿರುವ ಚರ್ಚ್‌ನಲ್ಲಿ ಗುಂಡಿನ ದಾಳಿ ನಡೆದಿದೆ.

author img

By

Published : May 16, 2022, 8:39 AM IST

California church shooting
ಕ್ಯಾಲಿಫೋರ್ನಿಯಾ ಚರ್ಚ್‌ನಲ್ಲಿ ಗುಂಡಿನ ದಾಳಿ

ಕ್ಯಾಲಿಫೋರ್ನಿಯಾ (ಅಮೆರಿಕ): ಅಮೆರಿಕದ ಪಶ್ಚಿಮ ರಾಜ್ಯ ಕ್ಯಾಲಿಫೋರ್ನಿಯಾದ ಚರ್ಚ್‌ನಲ್ಲಿ ಭಾನುವಾರ ನಡೆದ ಗುಂಡಿನ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿ, ಐವರು ತೀವ್ರವಾಗಿ ಗಾಯಗೊಂಡಿದ್ದಾರೆ. ನ್ಯೂಯಾರ್ಕ್​ನ ಬಫಲೊ ನಗರದ ಸೂಪರ್‌ ಮಾರ್ಕೆಟ್‌ನಲ್ಲಿ ಶನಿವಾರ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿ 10 ಮಂದಿ ಸಾವನ್ನಪ್ಪಿದ್ದರು. ಒಂದು ದಿನದ ನಂತರ ಮತ್ತೆ ಈ ಘಟನೆ ನಡೆದಿದೆ.

ಭಾನುವಾರ ಮಧ್ಯಾಹ್ನ 1:26ಕ್ಕೆ (20:26 GMT)ಕ್ಕೆ ಜಿನೀವಾ ಪ್ರೆಸ್ಬಿಟೇರಿಯನ್ ಚರ್ಚ್‌ನಿಂದ ತುರ್ತು ಕರೆ ಬಂದಿದೆ. ಕೂಡಲೇ ಘಟನಾ ಸ್ಥಳಕ್ಕೆ ತೆರಳಿ ಶಂಕಿತನನ್ನು ಬಂಧಿಸಿದ್ದೇವೆ ಮತ್ತು ಆತನಿಂದ ಶಸ್ತ್ರಾಸ್ತ್ರ ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸ್​​ ಇಲಾಖೆ ಟ್ವೀಟ್‌ನಲ್ಲಿ ತಿಳಿಸಿದೆ. ಕ್ಯಾಲಿಫೋರ್ನಿಯಾ ಗವರ್ನರ್ ಗೇವಿನ್ ನ್ಯೂಸಮ್, ಪರಿಸ್ಥಿತಿ ಮೇಲ್ವಿಚಾರಣೆ ಮಾಡಲು ಸ್ಥಳೀಯ ಅಧಿಕಾರಿಗಳೊಂದಿಗೆ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು. ಅಲ್ಲದೇ 'ಯಾರೂ ಅವರ ಆರಾಧನಾ ಸ್ಥಳ(ಚರ್ಚ್​)ಕ್ಕೆ ಹೋಗಲು ಭಯಪಡಬೇಕಾಗಿಲ್ಲ. ನಮ್ಮ ಆಲೋಚನೆಗಳು ಸಂತ್ರಸ್ತರು, ಸಮುದಾಯ ಮತ್ತು ಈ ದುರಂತ ಘಟನೆಯಿಂದ ಪ್ರಭಾವಿತರಾದ ಎಲ್ಲರೊಂದಿಗೂ ಇವೆ' ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಅಮೆರಿಕದಲ್ಲಿ 'ಜನಾಂಗೀಯ ಪ್ರೇರಿತ' ಸಾಮೂಹಿಕ ಗುಂಡಿನ ದಾಳಿ: 10 ಮಂದಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.