ETV Bharat / international

ಇರಾನ್​ನಿಂದ ವಶಪಡಿಸಿಕೊಂಡ ಮದ್ದುಗುಂಡು ಉಕ್ರೇನ್​ಗೆ ನೀಡಿದ ಅಮೆರಿಕ - ಮದ್ದು ಗುಂಡುಗಳನ್ನು ಯೆಮೆನ್​ನಲ್ಲಿರುವ ಹೌತಿಗಳಿಗೆ

ಉಕ್ರೇನ್​ಗೆ ಶಸ್ತ್ರಾಸ್ತ್ರ ನೆರವು ನೀಡುವುದನ್ನು ಮುಂದುವರೆಸಿರುವ ಅಮೆರಿಕ, ಇರಾನ್​ನಿಂದ ತಾನು ವಶಪಡಿಸಿಕೊಂಡ ಮದ್ದು ಗುಂಡುಗಳನ್ನು ಈಗ ಉಕ್ರೇನ್​ಗೆ ಹಸ್ತಾಂತರಿಸಿದೆ.

US transfers weapons seized from Iran to Ukraine

author img

By ETV Bharat Karnataka Team

Published : Oct 5, 2023, 1:40 PM IST

ವಾಷಿಂಗ್ಟನ್ : ಇರಾನ್​ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್​ಜಿಸಿ) ಯಿಂದ ವಶಪಡಿಸಿಕೊಳ್ಳಲಾದ ಸುಮಾರು 7.62 ಎಂಎಂ ನ 1.1 ಮಿಲಿಯನ್ ಮದ್ದು ಗುಂಡುಗಳನ್ನು ಉಕ್ರೇನ್ ಸಶಸ್ತ್ರ ಪಡೆಗಳಿಗೆ ನೀಡಲಾಗಿದೆ ಎಂದು ಅಮೆರಿಕ ಸೆಂಟ್ರಲ್ ಕಮಾಂಡ್ (ಸೆಂಟ್ಕಾಮ್) ಘೋಷಿಸಿದೆ. ಸೋಮವಾರ ಈ ವರ್ಗಾವಣೆ ನಡೆದಿದೆ ಎಂದು ಸೆಂಟ್ರಲ್ ಕಮಾಂಡ್ ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಐಆರ್​ಜಿಸಿ ವಿರುದ್ಧ ನ್ಯಾಯಾಂಗ ಇಲಾಖೆಯ ಸಿವಿಲ್ ಮುಟ್ಟುಗೋಲು ಅಧಿಕಾರದ ಮೂಲಕ ಜುಲೈ 20 ರಂದು ಸರ್ಕಾರ ಈ ಶಸ್ತ್ರಾಸ್ತ್ರಗಳ ಮಾಲೀಕತ್ವ ಪಡೆದುಕೊಂಡಿದೆ. ಈ ಶಸ್ತ್ರಾಸ್ತ್ರಗಳನ್ನು ಸೆಂಟ್ಕಾಮ್ ನೌಕಾ ಪಡೆಗಳು 2022 ರ ಡಿಸೆಂಬರ್ 9 ರಂದು ಯಾವುದೇ ದೇಶಕ್ಕೆ ಸೇರದ ಮರ್ವಾನ್ ಹೆಸರಿನ ಬೋಟ್​ನಿಂದ ವಶಪಡಿಸಿಕೊಂಡಿವೆ.

ಐಆರ್​ಜಿಸಿ ಈ ಮದ್ದು ಗುಂಡುಗಳನ್ನು ಯೆಮೆನ್​ನಲ್ಲಿರುವ ಹೌತಿಗಳಿಗೆ ವರ್ಗಾಯಿಸುತ್ತಿತ್ತು. ಆದರೆ, ಇದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ 2216 ರ ಉಲ್ಲಂಘನೆಯಾಗಿದೆ ಎಂದು ಸೆಂಟ್ಕಾಮ್ ಹೇಳಿಕೆಯಲ್ಲಿ ತಿಳಿಸಲಾಗಿದೆ. ಅಮೆರಿಕ ಮತ್ತು ವಿಶ್ವಸಂಸ್ಥೆ ನಿರ್ಬಂಧಗಳು ಸೇರಿದಂತೆ ಎಲ್ಲ ಕಾನೂನುಬದ್ಧ ವಿಧಾನಗಳ ಮೂಲಕ ಮತ್ತು ಕಾರ್ಯಾಚರಣೆಗಳ ಮೂಲಕ ಈ ಪ್ರದೇಶದಲ್ಲಿ ಇರಾನಿನ ಶಸ್ತ್ರಾಸ್ತ್ರಗಳ ಸಾಗಾಟವನ್ನು ತಡೆಗಟ್ಟಲು ವಾಷಿಂಗ್ಟನ್ ಬದ್ಧವಾಗಿದೆ ಎಂದು ಸೆಂಟ್ಕಾಮ್ ಹೇಳಿದೆ.

"ಸಶಸ್ತ್ರ ಗುಂಪುಗಳಿಗೆ ಇರಾನ್​​ ಬೆಂಬಲ ನೀಡುತ್ತಿರುವುದರಿಂದ ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ಭದ್ರತೆಗೆ, ಸೇನಾ ಪಡೆಗಳಿಗೆ, ರಾಜತಾಂತ್ರಿಕ ಸಿಬ್ಬಂದಿಗೆ ಮತ್ತು ಈ ಪ್ರದೇಶದ ನಾಗರಿಕರಿಗೆ ಅಪಾಯ ಎದುರಾಗಿದೆ" ಎಂದು ಅದು ಹೇಳಿದೆ. ನ್ಯಾಯಾಂಗ ಇಲಾಖೆ ಬುಧವಾರ ಈ ಕುರಿತು ಪ್ರತ್ಯೇಕ ಹೇಳಿಕೆ ಬಿಡುಗಡೆ ಮಾಡಿದೆ. ಉಕ್ರೇನ್ ಮೇಲೆ ಆಕ್ರಮಣ ನಡೆಸಲು ಇರಾನ್​ ರಷ್ಯಾಕ್ಕೆ ಶಸ್ರ್ತಾಸ್ತ್ರ ಹಾಗೂ ಡ್ರೋನ್​ಗಳನ್ನು ಪೂರೈಸುತ್ತಿದೆ ಎಂಬ ಆರೋಪಗಳು ಪದೇ ಪದೆ ಕೇಳಿ ಬರುತ್ತಿರುವ ಮಧ್ಯೆ, ಇರಾನ್​ನಿಂದ ವಶಪಡಿಸಿಕೊಂಡ ಮದ್ದುಗುಂಡುಗಳನ್ನು ಅಮೆರಿಕ ಉಕ್ರೇನ್​ಗೆ ನೀಡಿರುವುದು ಗಮನಾರ್ಹ.

ಕಳೆದ ಒಂದು ವರ್ಷದಲ್ಲಿ, ಅಮೆರಿಕ ನೌಕಾಪಡೆಯು ಇರಾನಿನ ಸಾವಿರಾರು ಅಸಾಲ್ಟ್ ರೈಫಲ್​ಗಳು ಮತ್ತು ಹಡಗುಗಳ ಮೂಲಕ ಯೆಮೆನ್​ಗೆ ಇರಾನ್ ಸಾಗಿಸುತ್ತಿದ್ದ ಒಂದು ದಶಲಕ್ಷಕ್ಕೂ ಹೆಚ್ಚು ಸುತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಜನವರಿ ಮಧ್ಯದಲ್ಲಿ, ಇರಾನ್​ನಿಂದ ಯೆಮೆನ್​ಗೆ ಸಾಗಿಸಲಾಗುತ್ತಿದ್ದ 3,000 ಅಸಾಲ್ಟ್ ರೈಫಲ್​ಗಳು ಮತ್ತು 23 ಟ್ಯಾಂಕ್ ನಿರೋಧಕ ಕ್ಷಿಪಣಿಗಳನ್ನು ವಶಪಡಿಸಿಕೊಳ್ಳುವಲ್ಲಿ ಯುಎಸ್ ಫ್ರೆಂಚ್ ಪಡೆಗಳಿಗೆ ಸಹಾಯ ಮಾಡಿತ್ತು. ನಂತರ ಈ ಶಸ್ತ್ರಾಸ್ತ್ರಗಳನ್ನು ಅಮೆರಿಕ ಸಂಯುಕ್ತ ಸಂಸ್ಥಾನ ತನ್ನ ವಶಕ್ಕೆ ತೆಗೆದುಕೊಂಡಿತ್ತು.

ಇದನ್ನೂ ಓದಿ : ಫುಕುಶಿಮಾ ಅಣು ಸ್ಥಾವರದಲ್ಲಿನ ತ್ಯಾಜ್ಯ ನೀರು ಬಿಡುಗಡೆಯ 2ನೇ ಹಂತ ಆರಂಭ

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.