ETV Bharat / international

ನಾರ್ತ್ ಕೆರೊಲಿನಾ ವಿವಿ ಕ್ಯಾಂಪಸ್​ನಲ್ಲಿ ಪ್ರೊಫೆಸರ್​ಗೆ​​​ ಗುಂಡಿಕ್ಕಿ ಹತ್ಯೆ: ಇಂದು ತರಗತಿಗಳು ಬಂದ್​ - ಶಂಕಿತನೊಬ್ಬನನ್ನು ಕಸ್ಟಡಿ

ವಿವಿ ಕ್ಯಾಂಪಸ್​​ನಲ್ಲಿ ನಡೆದ ಶೂಟೌಟ್​ನಲ್ಲಿ ಚಾಪೆಲ್ ಹಿಲ್‌ನಲ್ಲಿರುವ ಉತ್ತರ ಕೆರೊಲಿನಾ ವಿಶ್ವವಿದ್ಯಾಲಯದ ಅಧ್ಯಾಪಕರೊಬ್ಬರು ಮೃತಪಟ್ಟಿದ್ದಾರೆ. ಘಟನೆಗೂ ಮುನ್ನವೇ ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಎಚ್ಚರಿಸಿತ್ತು. ಶೂಟೌಟ್​ ಘಟನೆ ಬಳಿಕ ತರಗತಿಗಳು ಮತ್ತು ಕ್ಯಾಂಪಸ್ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.

US campus shooting: University of North Carolina faculty member fatally shot, suspect in custody
ನಾರ್ತ್ ಕೆರೊಲಿನಾ ವಿವಿ ಕ್ಯಾಂಪಸ್​ನಲ್ಲಿ ಪ್ರೊಫೇಸರ್​​​ ಗುಂಡಿಕ್ಕಿ ಹತ್ಯೆ: ಇಂದು ತರಗತಿಗಳು ಬಂದ್​
author img

By ETV Bharat Karnataka Team

Published : Aug 29, 2023, 7:24 AM IST

Updated : Aug 29, 2023, 9:46 AM IST

ಉತ್ತರ ಕೆರೊಲಿನಾ( ಅಮೆರಿಕ): ಚಾಪೆಲ್ ಹಿಲ್‌ನಲ್ಲಿರುವ ನಾರ್ತ್ ಕೆರೊಲಿನಾ ವಿಶ್ವವಿದ್ಯಾನಿಲಯದ ಅಧ್ಯಾಪಕರೊಬ್ಬರನ್ನ ಸೋಮವಾರ ವಿವಿ ಕ್ಯಾಂಪಸ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. ಅಧ್ಯಾಪಕನಿಗೆ ಗುಂಡಿಕ್ಕಿದ ಹಿನ್ನೆಲೆಯಲ್ಲಿ ಶಂಕಿತನೊಬ್ಬನನ್ನು ಕಸ್ಟಡಿಗೆ ಪಡೆಯಲಾಗಿದೆ ಎಂದು ಶಾಲಾ ವಕ್ತಾರರ ಮಾಹಿತಿ ಆಧರಿಸಿ ಅಮೆರಿಕದ ಪ್ರಮುಖ ಮಾಧ್ಯಮ ವರದಿ ಮಾಡಿದೆ. ಈ ಘಟನೆಯ ನಂತರ ಭೀತಿಗೊಂಡ ಜನ ಹಲವು ಗಂಟೆಗಳ ಕಾಲ ಬೇರೆಕಡೆ ಆಶ್ರಮ ಪಡೆಯಬೇಕಾದ ಪರಿಸ್ಥಿತಿ ಎದುರಾಗಿತ್ತು. ಈ ಸಂಬಂಧ ಅಲ್ಲಿನ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ.

ಸೋಮವಾರ ಮಧ್ಯಾಹ್ನ ವಿವಿಯ ಕೌಡಿಲ್ ಪ್ರಯೋಗಾಲಯದಲ್ಲಿ ಗುಂಡು ಹಾರಿಸಲಾಗಿದೆ ಎಂದು ವರದಿಯಾಗಿದೆ. ಮಧ್ಯಾಹ್ನ 2:30 ರ ನಂತರ, ವಿವಿ ಚಾನ್ಸೆಲರ್ ಕೆವಿನ್ ಗುಸ್ಕಿವಿಕ್ಜ್, ಅಧ್ಯಾಪಕರಿಗೆ ಗುಂಡಿಕ್ಕಿದ ಶಂಕಿತನನ್ನು ಬಂಧಿಸಲಾಗಿದೆ ಎಂದು ದೃಢಪಡಿಸಿದ್ದಾರೆ. ಶಂಕಿತನ ಮತ್ತು ಅಧ್ಯಾಪಕರ ಹೆಸರುಗಳನ್ನು ತಕ್ಷಣವೇ ಬಹಿರಂಗಪಡಿಸಲಾಗಿಲ್ಲ. UNC ಪೊಲೀಸ್ ಮುಖ್ಯಸ್ಥ ಬ್ರಿಯಾನ್ ಜೇಮ್ಸ್ ಸೋಮವಾರ ಈ ಸಂಬಂಧ ಹೇಳಿಕೆಯೊಂದನ್ನು ನೀಡಿದ್ದಾರೆ. ಗುಂಡಿನ ಹಿಂದಿನ ಉದ್ದೇಶವನ್ನು ನಿರ್ಧರಿಸಲು ಇನ್ನು ತುಂಬಾ ಸಮಯಬೇಕಾಗಬಹುದು, ಈಗಲೇ ಏನನ್ನೂ ಹೇಳಲು ಆಗದು ಎಂದು ಜೇಮ್ಸ್​ ಹೇಳಿದ್ದಾರೆ.

ನಾವು ನಿಜವಾಗಿಯೂ ಈ ಪ್ರಕರಣದಲ್ಲಿ ಕೊಲೆಗೆ ಕಾರಣವೇನು ಎಂದು ತಿಳಿಯಲು ಬಯಸುತ್ತೇವೆ ಎಂದು ಪೊಲೀಸ್​​ ಅಧಿಕಾರಿ ಜೇಮ್ಸ್ ಹೇಳಿದ್ದಾರೆ. ಶೂಟಿಂಗ್‌ನಲ್ಲಿ ಬಳಸಿದ ಗನ್ ಇದುವರೆಗೂ ಪತ್ತೆಯಾಗಿಲ್ಲ ಎಂದಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿರುವ ವಿವಿ ಕುಲಪತಿ ಗುಸ್ಕಿವಿಚ್​, ಒಮ್ಮೊಮ್ಮೆ ಸಣ್ಣಘಟನೆಗಳನ್ನು ಲಘುವಾಗಿ ಪರಿಗಣಿಸುತ್ತೇವೆ. ಅವು ಇಂತಹ ದುರಂತಕ್ಕೆ ಕಾರಣವಾಗುತ್ತವೆ. ನಾವು ಇನ್ಮುಂದೆ ನಮ್ಮ ಕ್ಯಾಂಪಸ್​ನಲ್ಲಿ ನಂಬಿಕೆ ಮತ್ತು ಸುರಕ್ಷತೆಯ ಪ್ರಜ್ಞೆಯನ್ನು ಪುನರ್ನಿರ್ಮಿಸಲು ಕೆಲಸ ಮಾಡುತ್ತೇವೆ ಹೇಳಿದ್ದಾರೆ ಎಂದು ವರದಿಯಾಗಿದೆ, ಮಧ್ಯಾಹ್ನ 1 ಗಂಟೆ ಸುಮಾರಿಗೆ ವಿವಿಯ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿ ರಕ್ಷಣೆ ಪಡೆಯುವಂತೆ ಸೂಚಿಸಿತ್ತು, ನಂತರ ಶಂಕಿತನೊಬ್ಬ ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ಘೋಷಿಸಲಾಗಿತ್ತು . ಮಧ್ಯಾಹ್ನದ ನಂತರ ವಿಶ್ವವಿದ್ಯಾನಿಲಯವು ಇಲ್ಲಿ ನಡೆದ ಘಟನೆ ಬಗ್ಗೆ ಸ್ಪಷ್ಟನೆ ನೀಡಿತು. ಇನ್ನು ಘಟನೆ ಹಿನ್ನೆಲೆಯಲ್ಲಿ ಮಂಗಳವಾರದ ತರಗತಿಗಳು ಮತ್ತು ಕ್ಯಾಂಪಸ್ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.

ಸುಮಾರು 32,000 ವಿದ್ಯಾರ್ಥಿಗಳು ಈ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ 4,000 ಅಧ್ಯಾಪಕರು ಮತ್ತು 9,000 ಸಿಬ್ಬಂದಿ ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು CNN ವರದಿ ಮಾಡಿದೆ. (ANI)

ಇದನ್ನು ಓದಿ: ನಾಯಕ ಯೆವ್​ಗನಿ ಪ್ರಿಗೊಜಿನ್ ಸಾವು ಖಚಿತ ಪಡಿಸಿದ ರಷ್ಯಾ ತನಿಖಾ ಸಮಿತಿ

Last Updated : Aug 29, 2023, 9:46 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.