ETV Bharat / international

ಅಮೆರಿಕನ್ನರು - ಭಾರತೀಯರ ಒಂದುಗೂಡಿಸುವ ಪ್ರಧಾನಿ ಮೋದಿ ಭೇಟಿ: ಶ್ವೇತಭವನದ ಬಣ್ಣನೆ - Upcoming State visit

ಜೂನ್​ 21 ರಿಂದ ಮೂರು ದಿನ ಪ್ರಧಾನಿ ಮೋದಿ ಅವರು ಅಮೆರಿಕ ಪ್ರವಾಸ ಮಾಡಲಿದ್ದಾರೆ. ಅಧ್ಯಕ್ಷ ಜೋ ಬೈಡನ್​​​ ಅವರ ಅಧಿಕೃತ ಆಹ್ವಾನದ ಮೇರೆಗೆ ಮೋದಿ ಅವರು ಸ್ಟೇಟ್​ ಭೇಟಿ ಮಾಡಲಿದ್ದಾರೆ.

ಪ್ರಧಾನಿ ಮೋದಿ ಅಮೆರಿಕ ಪ್ರವಾಸ
ಪ್ರಧಾನಿ ಮೋದಿ ಅಮೆರಿಕ ಪ್ರವಾಸ
author img

By

Published : Jun 8, 2023, 7:46 AM IST

ವಾಷಿಂಗ್ಟನ್: ಭಾರತದ ಪ್ರಜಾಪ್ರಭುತ್ವವನ್ನು ಹಾಡಿ ಹೊಗಳಿದ್ದ ಅಮೆರಿಕ, ಮುಂಬರುವ ಪ್ರಧಾನಿ ನರೇಂದ್ರ ಮೋದಿಯವರ ಪ್ರವಾಸವು ಉಭಯ ದೇಶಗಳ ನಡುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿ ಮಾಡಲಿದೆ ಎಂದು ಅಭಿಪ್ರಾಯಪಟ್ಟಿದೆ. ಅಮೆರಿಕನ್ನರು ಮತ್ತು ಭಾರತೀಯರನ್ನು ಒಂದುಗೂಡಿಸುವ ಭೇಟಿ ಇದಾಗಲಿದೆ ಎಂದು ಶ್ವೇತಭವನ ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಇದಏ 21 ರಿಂದ 24 ರವರೆಗೆ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಅಧ್ಯಕ್ಷ ಜೋ ಬೈಡನ್​ ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್​ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು 2021 ರ ಬಳಿಕ ತಮ್ಮ ಮೊದಲ ಪ್ರವಾಸ ಕೈಗೊಳ್ಳಲಿದ್ದಾರೆ. ಜೂನ್ 22 ರಂದು ಅಮೆರಿಕದ ಅಧ್ಯಕ್ಷರು ಮತ್ತು ಪ್ರಥಮ ಮಹಿಳೆ ಜಿಲ್​ ಬಿಡೆನ್​ ಅವರ ಜೊತೆ ಮೋದಿ ಭೋಜನಕೂಟದಲ್ಲಿ ಭಾಗವಹಿಸಲಿದ್ದಾರೆ.

ಮೋದಿ- ಬೈಡನ್​​ ಸಭೆಗಳಲ್ಲಿ ಉಭಯ ರಾಷ್ಟ್ರಗಳ ನಡುವಿನ ಬಂಧವನ್ನು ಬಲಪಡಿಸುವ ಮಾರ್ಗಗಳನ್ನು ಚರ್ಚಿಸಲಿದ್ದಾರೆ. ಮುಕ್ತ, ಸಮೃದ್ಧ ಮತ್ತು ಸುರಕ್ಷಿತ ಇಂಡೋ-ಪೆಸಿಫಿಕ್‌ಗಾಗಿ ಬದ್ಧತೆ ಮತ್ತು ರಕ್ಷಣೆ ಸೇರಿದಂತೆ ಹಲವು ವಿಷಯಗಳಲ್ಲಿ ದೇಶಗಳು ಒಪ್ಪಂದ ಮಾಡಿಕೊಳ್ಳಲಿವೆ. ಅಲ್ಲದೇ, ಶುದ್ಧ ಇಂಧನ ಮತ್ತು ಬಾಹ್ಯಾಕಾಶ ಸಂಬಂಧಿಸಿದಂತೆಯೂ ಮಾತುಕತೆ ನಡೆಯಲಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ತನ್ನ ದೈನಂದಿನ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅಮೆರಿಕಕ್ಕೆ ಪ್ರಧಾನಿ ಮೋದಿ ಅವರ ಭೇಟಿಯು ಎರಡು ರಾಷ್ಟ್ರಗಳ ನಿಕಟ ಸಂಬಂಧವನ್ನು ಇನ್ನಷ್ಟು ಹೆಚ್ಚಸಲಿದೆ. ಇದು ಅಮೆರಿಕನ್ನರು ಮತ್ತು ಭಾರತೀಯರನ್ನು ಒಟ್ಟಿಗೆ ಜೋಡಿಸುವ ಕುಟುಂಬ ಮತ್ತು ಸ್ನೇಹದ ಬಂಧಗಳನ್ನು ತೋರಿಸುತ್ತದೆ. ಮೋದಿ ಅವರ ಪ್ರವಾಸದ ರೂಪುರೇಷೆಯ ಬಗ್ಗೆ ಸದ್ಯಕ್ಕೆ ಮಾಹಿತಿ ನೀಡಲಾಗದು. ಮುಂದಿನ ದಿನಗಳ ಖಂಡಿತವಾಗಿಯೂ ಹಂಚಿಕೊಳ್ಳಲಾಗುವುದು ಎಂದು ಕರೀನ್ ಜೀನ್ ಪಿಯರ್ ತಿಳಿಸಿದರು.

ಸೆಪ್ಟೆಂಬರ್‌ನಲ್ಲಿ ಭಾರತವು ಆಯೋಜಿಸುವ ಜಿ 20 ಶೃಂಗಸಭೆಗೆ ಮುಂಚಿತವಾಗಿ ಮೋದಿ ಅವರು ಅಮೆರಿಕಕ್ಕೆ ತೆರಳುತ್ತಿರುವುದು ಮಹತ್ವ ಪಡೆದುಕೊಳ್ಳಲಿದೆ. 2014 ರಲ್ಲಿ ಪ್ರಧಾನಿಯಾದ ನಂತರ, ಮೋದಿ ಅವರು ಮೂವರು ಅಮೇರಿಕನ್ ಅಧ್ಯಕ್ಷರಾದ ಬರಾಕ್ ಒಬಾಮಾ, ಡೊನಾಲ್ಡ್ ಟ್ರಂಪ್ ಮತ್ತು ಈಗಿನ ಜೋ ಬಿಡೆನ್ ಅವರೊಂದಿಗೆ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಭೆಗಳನ್ನು ನಡೆಸಿದ್ದಾರೆ. ಆದರೆ, ಈ ಭೇಟಿಯು ಅಮೆರಿಕದ ಮೊದಲ ಅಧಿಕೃತ ಆಹ್ವಾನದ ಮೇರೆಗೆ ನಡೆಯಲಿದೆ. ದ್ವಿಪಕ್ಷೀಯ ಸಭೆಗಾಗಿ ಅಧ್ಯಕ್ಷ ಬೈಡನ್​ ಅವರ ಆಹ್ವಾನದ ಮೇರೆಗೆ 2021 ರ ಸೆಪ್ಟೆಂಬರ್​​ನಲ್ಲಿ ಮೋದಿ ಅವರು ಅಮೆರಿಕ ಪ್ರವಾಸ ಮಾಡಿದ್ದರು.

ಏನಿದು ಸ್ಟೇಟ್​ ವಿಸಿಟ್​: ಅಮೆರಿಕ ಅಧ್ಯಕ್ಷರ ಅಧಿಕೃತ ಆಹ್ವಾನದ ಮೇರೆಗೆ ಯಾವುದಾದರೊಂದು ದೇಶದ ಮುಖ್ಯಸ್ಥರು ಅಮೆರಿಕಕ್ಕೆ ಅಧಿಕೃತವಾಗಿ ಪ್ರವಾಸ ಕೈಗೊಳ್ಳುವುದು. ಇದೊಂದು ರೀತಿಯಲ್ಲಿ ಬೇರೊಂದು ದೇಶದ ಮುಖ್ಯಸ್ಥರಿಗೆ ನೀಡುವ ಅತ್ಯುನ್ನತ ಗೌರವ. ವಿಶೇಷವೆಂದರೆ, ಅಮೆರಿಕ ಅಧ್ಯಕ್ಷರು ತಮ್ಮ 4 ವರ್ಷಗಳ ಅಧಿಕಾರಾವಧಿಯಲ್ಲಿ ಒಮ್ಮೆ ಮಾತ್ರ ವಿದೇಶಿ ಮುಖ್ಯಸ್ಥರಿಗೆ ಇಂಥ ಆಹ್ವಾನ ನೀಡಬಹುದು. ಈ ಬಾರಿ ಜೋ ಬೈಡನ್‌ ಅವರು ಮೋದಿಯವರಿಗೆ ನೀಡಿದ್ದಾರೆ. ಈ ಹಿಂದೆ ಬರಾಕ್‌ ಒಬಾಮಾ ಅವರು ಡಾ. ಮನಮೋಹನ್‌ ಸಿಂಗ್‌ ಅವರಿಗೆ ಇಂಥ ಗೌರವ ನೀಡಿದ್ದರು.

ಇದನ್ನೂ ಓದಿ: ಐಸಿಸ್​​ನಿಂದ ರಾಸಾಯನಿಕ ಅಸ್ತ್ರ ಬಳಕೆ: ವಿಶ್ವಸಂಸ್ಥೆ ತನಿಖಾಧಿಕಾರಿಗಳಿಂದ ಸಾಕ್ಷ್ಯಸಂಗ್ರಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.