ಲಂಡನ್ (ಇಂಗ್ಲೆಂಡ್) : ಹಮಾಸ್ ಭಯೋತ್ಪಾದಕರು ಇಸ್ರೇಲ್‌ಗೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಮಾರಕವಾಗಿದ್ದಾರೆ. ಹೀಗಾಗಿ ಅವರಿಗೆ ಗಾಜಾ ಅಥವಾ ಪ್ಯಾಲೆಸ್ಟೈನಿಯನ್ ಪ್ರದೇಶದ ಯಾವುದೇ ಭಾಗವನ್ನು ನಿಯಂತ್ರಿಸಲು ಅವಕಾಶ ನೀಡಬಾರದು ಎಂದು ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಮಂಗಳವಾರ ಹೇಳಿದರು.
-
We must never lose sight of how essential the two-state solution is.
— Rishi Sunak (@RishiSunak) October 23, 2023 " class="align-text-top noRightClick twitterSection" data="
We must keep alive that vision of a better future, against those who would destroy it.
Together with our partners, that is what we will do. pic.twitter.com/Ibvc5tcxZX
">We must never lose sight of how essential the two-state solution is.
— Rishi Sunak (@RishiSunak) October 23, 2023
We must keep alive that vision of a better future, against those who would destroy it.
Together with our partners, that is what we will do. pic.twitter.com/Ibvc5tcxZXWe must never lose sight of how essential the two-state solution is.
— Rishi Sunak (@RishiSunak) October 23, 2023
We must keep alive that vision of a better future, against those who would destroy it.
Together with our partners, that is what we will do. pic.twitter.com/Ibvc5tcxZX
ಹಮಾಸ್-ಇಸ್ರೇಲ್ ಯುದ್ಧ ಕುರಿತಂತೆ ಮಾತನಾಡಿರುವ ವಿಡಿಯೋಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ಹಮಾಸ್ ಉಗ್ರರ ಮೇಲೆ ಯುದ್ಧ ಸಾರಿರುವ ಇಸ್ರೇಲ್ ಪಡೆಗಳು, ತಮ್ಮ ದೇಶದ ಒತ್ತೆಯಾಳುಗಳನ್ನು ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಯುದ್ಧ ನಿಲುಗಡೆ ಜತೆಗೆ ಎರಡು ರಾಷ್ಟ್ರಗಳ ಸಾರ್ವಭೌಮತ್ವಕ್ಕಾಗಿ ವಿಶ್ವ ಶಕ್ತಿಗಳು ಪ್ರಯತ್ನಿಸಬೇಕು ಎಂದಿದ್ದಾರೆ.
ಗಾಜಾ ಮತ್ತು ಇರಾನ್ನಲ್ಲಿ ಇರುವ ಬ್ರಿಟನ್ ಪ್ರಜೆಗಳ ಬಗ್ಗೆ ತಮಗೆ ಕಾಳಜಿ ಇದೆ. ಯುದ್ಧ ಸಂಕಷ್ಟದಲ್ಲಿ ಅವರಿಗೆ ಯಾವುದೇ ತೊಂದರೆಯಾಗಬಾರದು. ಅಂತರರಾಷ್ಟ್ರೀಯ ಪಾಲುದಾರರೊಂದಿಗೆ ಒಟ್ಟಾಗಿ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಸಮಸ್ಯೆಯನ್ನು ಬಗೆಹರಿಸಬೇಕಿದೆ ಎಂದು ಅವರು ಕರೆ ನೀಡಿದ್ದಾರೆ.
-
The violence against Israel did not end on the 7th October – rockets are launched at their towns and cities every day.
— Rishi Sunak (@RishiSunak) October 23, 2023 " class="align-text-top noRightClick twitterSection" data="
Hamas still holds around 200 hostages, including British citizens.
I am doing everything in my power, working with all of our partners, to bring them home. pic.twitter.com/7Gu6FCmFl5
">The violence against Israel did not end on the 7th October – rockets are launched at their towns and cities every day.
— Rishi Sunak (@RishiSunak) October 23, 2023
Hamas still holds around 200 hostages, including British citizens.
I am doing everything in my power, working with all of our partners, to bring them home. pic.twitter.com/7Gu6FCmFl5The violence against Israel did not end on the 7th October – rockets are launched at their towns and cities every day.
— Rishi Sunak (@RishiSunak) October 23, 2023
Hamas still holds around 200 hostages, including British citizens.
I am doing everything in my power, working with all of our partners, to bring them home. pic.twitter.com/7Gu6FCmFl5
ಎರಡು ರಾಷ್ಟ್ರವೇ ಪರಿಹಾರ: ಇಸ್ರೇಲ್ ಮತ್ತು ಪ್ಯಾಲೆಸ್ಟೈನಿಯನ್ನರು ತಮ್ಮ ದೇಶದ ಅಸ್ತಿತ್ವದ ಹಕ್ಕು ಹೊಂದಿದ್ದಾರೆ. ಹಮಾಸ್ ಉಗ್ರರು ಗಾಜಾ ಪಟ್ಟಿ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಹಿಡಿತ ಸಾಧಿಸಿದ್ದಾರೆ. ಇದನ್ನು ಹೋಗಲಾಡಿಸಿ, ಇಸ್ರೇಲಿಗರು ಮತ್ತು ಪ್ಯಾಲೆಸ್ಟೈನಿಯನ್ನರಿಗೆ ಪ್ರತ್ಯೇಕ ದೇಶ ರಚನೆಗೆ ಅವಕಾಶ ನೀಡಬೇಕು. ಈ ನೀತಿಯಿಂದ ಮಾತ್ರ ಬಿಕ್ಕಟ್ಟು ಪರಿಹರಿಸಲು ಸಾಧ್ಯ. ಗಾಜಾ ಮತ್ತು ವೆಸ್ಟ್ ಬ್ಯಾಂಕ್‌ನಲ್ಲಿ ಪ್ಯಾಲೆಸ್ಟೈನಿಯನ್ ಪ್ರದೇಶಗಳಲ್ಲಿ ಪರಿಣಾಮಕಾರಿ ಆಡಳಿತವನ್ನು ಸ್ಥಾಪಿಸಲು ಬ್ರಿಟನ್ ಇತರ ವಿಶ್ವ ಶಕ್ತಿಗಳೊಂದಿಗೆ ಕೆಲಸ ಮಾಡುತ್ತದೆ ಎಂದು ಅವರು ಹೇಳಿದರು.
ಹಮಾಸ್‌ಗೆ ಅವಕಾಶ ನೀಡಬಾರದು: ಈ ಹೋರಾಟವು ಪ್ಯಾಲೆಸ್ಟೈನಿಯನ್ನಿನ್ ಕಾನೂನುಬದ್ಧ ಆಕಾಂಕ್ಷೆಗಳನ್ನು ಹೊಂದಿದೆ ಎಂಬುದು ತಿಳಿದಿದೆ. ಆದರೆ, ಗಾಜಾ ಅಥವಾ ಪ್ಯಾಲೆಸ್ಟೈನಿಯನ್ ಪ್ರದೇಶದ ಯಾವುದೇ ಭಾಗವನ್ನು ನಿಯಂತ್ರಿಸಲು ಹಮಾಸ್‌ಗೆ ಅವಕಾಶ ನೀಡುವ ಸನ್ನಿವೇಶ ಬರಬಾರದು. ಹಮಾಸ್ ಉಗ್ರ ಪಡೆ ಇಸ್ರೇಲ್‌ಗೆ ಮಾತ್ರವಲ್ಲದೆ ಆ ಭಾಗದ ಎಲ್ಲ ರಾಷ್ಟ್ರಗಳಿಗೆ ಬೆದರಿಕೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸೌದಿ ರಾಜನ ಜತೆ ಮಾತುಕತೆ: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಕಳೆದ ಗುರುವಾರ ರಿಯಾದ್‌ಗೆ ಭೇಟಿ ನೀಡಿ ಇಸ್ರೇಲ್-ಹಮಾಸ್ ಯುದ್ಧದ ಕುರಿತು ಸೌದಿ ಅರೇಬಿಯಾದ ರಾಜ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಮಾತುಕತೆ ನಡೆಸಿದರು.
ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್ ಮೇಲೆ ಹಮಾಸ್ ಭಯೋತ್ಪಾದಕ ಗುಂಪು ಭೀಕರ ದಾಳಿ ಮಾಡಿ 1400 ಜನರ ಹತ್ಯೆ ಮಾಡಿದ್ದಾರೆ. ಹಮಾಸ್ ವಿರುದ್ಧ ಹೋರಾಡಲು ಮತ್ತು ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಇಸ್ರೇಲ್ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕಿದೆ. ಹೀಗಾಗಿ ಇಂಗ್ಲೆಂಡ್ ಇಸ್ರೇಲ್ ಪರವಾಗಿ ನಿಲ್ಲಲಿದೆ ಎಂದು ಅವರು ಹೇಳಿದರು.
ಗಾಜಾದಲ್ಲಿನ ಪ್ಯಾಲೆಸ್ಟೈನ್ ಜನರಿಗಾಗಿ ಮಾನವೀಯ ನೆಲೆಯ ಮೇಲೆ ಅಗತ್ಯ ವಸ್ತುಗಳ ಪೂರೈಕೆಗೆ ಇಸ್ರೇಲ್ ಒಪ್ಪಿಕೊಂಡಿದ್ದನ್ನು ಸ್ವಾಗತಿಸಿದಿ ಇಂಗ್ಲೆಂಡ್ ಪ್ರಧಾನಿ, ನೀವು ಇಂತಹ ನಿರ್ಧಾರ ತೆಗೆದುಕೊಂಡಿದ್ದಕ್ಕಾಗಿ ಸಂತೋಷವಾಗಿದೆ. ಬ್ರಿಟನ್ ಸರ್ಕಾರ ಇದನ್ನು ಬೆಂಬಲಿಸುತ್ತದೆ. ಯುದ್ಧದಲ್ಲಿ ಇಸ್ರೇಲ್ ಗೆಲ್ಲಬೇಕೆಂಬುದು ಇಂಗ್ಲೆಂಡ್ನ ಆಶಯ ಎಂದರು.
ಇದನ್ನೂ ಓದಿ: ಇಸ್ರೇಲ್-ಪ್ಯಾಲೆಸ್ಟೈನ್ ಯುದ್ಧ: ಟೆಲ್ ಅವಿವ್ಗೆ ಫ್ರಾನ್ಸ್ ಅಧ್ಯಕ್ಷ ಭೇಟಿ, 24 ಗಂಟೆಯಲ್ಲಿ 400 ಹಮಾಸ್ ಉಗ್ರ ನೆಲೆ ಧ್ವಂಸ