ಲಂಡನ್( ಬ್ರಿಟನ್): ಕೆಲವು ವರ್ಷಗಳ ಹಿಂದೆ ವಿಧಾನಸಭೆಯಲ್ಲಿ ಶಾಸಕರೊಬ್ಬರು ಅಶ್ಲೀಲಚಿತ್ರಗಳನ್ನು ವೀಕ್ಷಿಸಿದ ವಿಚಾರ ರಾಷ್ಟ್ರೀಯ ಮಟ್ಟದಲ್ಲಿ ಭಾರಿ ಚರ್ಚೆಗೆ ಒಳಗಾಗಿತ್ತು. ಈಗ ಬ್ರಿಟನ್ನ ಹೌಸ್ ಆಫ್ ಕಾಮನ್ಸ್ (ಭಾರತದಲ್ಲಿ ಲೋಕಸಭೆ) ಚೇಂಬರ್‌ನಲ್ಲಿ ಕುಳಿತು ಫೋನ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದ ಆರೋಪದಲ್ಲಿ ಆಡಳಿತ ಪಕ್ಷವಾದ ಕನ್ಸರ್ವೇಟಿವ್ ಪಕ್ಷದ ಸದಸ್ಯರೊಬ್ಬರನ್ನು ಅಮಾನತುಗೊಳಿಸಲಾಗಿದೆ.
ಹೌಸ್ ಆಫ್ ಕಾಮನ್ಸ್ ಸ್ಟ್ಯಾಂಡರ್ಡ್ಸ್ ಕಮಿಟಿ ಚರ್ಚೆ ನಡೆಸುತ್ತಿರುವಾಗ ಕನ್ಸರ್ವೇಟಿವ್ ಪಕ್ಷದ ಸದಸ್ಯರಾದ ನೀಲ್ ಪ್ಯಾರಿಶ್ ಅವರು ಮೊಬೈಲ್ನಲ್ಲಿ ಅಶ್ಲೀಲ ಚಿತ್ರವನ್ನು ವೀಕ್ಷಣೆ ಮಾಡಿದ್ದಾರೆ ಎಂದು ಆರೋಪಿಸಿ, ಅವರನ್ನು ಕನ್ಸರ್ವೇಟಿವ್ ಪಕ್ಷದ ಗುಂಪಿನಿಂದ ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅವರು ಹೌಸ್ ಆಫ್ ಕಾಮನ್ಸ್ ಸದಸ್ಯರಾಗಿ ಉಳಿಯಲಿದ್ದಾರೆ. ಆದರೆ ಕನ್ಸರ್ವೇಟಿವ್ಸ್ ಸದಸ್ಯರಿಂದ ಸ್ವತಂತ್ರವಾಗಿ ಕುಳಿತುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
65 ವರ್ಷದ ಪ್ಯಾರಿಶ್, 2010ರಿಂದ ಸಂಸತ್ತಿನ ಹೌಸ್ ಆಫ್ ಕಾಮನ್ಸ್ನಲ್ಲಿ ನೈರುತ್ಯ ಇಂಗ್ಲೆಂಡ್‌ನ ಜಿಲ್ಲೆಯನ್ನು ಪ್ರತಿನಿಧಿಸಿದ್ದಾರೆ. ಇದರ ಜೊತೆಗೆ ಪರಿಸರ, ಆಹಾರ ಮತ್ತು ಗ್ರಾಮೀಣ ವ್ಯವಹಾರಗಳ ಸಮಿತಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಟ್ರಕ್ಗೆ ಡಿಕ್ಕಿಯಾದ ಬಸ್: 7 ಮಂದಿ ದುರ್ಮರಣ