ETV Bharat / international

Turkey Earthquake: 34 ಸಾವಿರ ದಾಟಿದ ಮೃತರ ಸಂಖ್ಯೆ.. ಕಟ್ಟಡಗಳ ಗುತ್ತಿಗೆದಾರರ ವಿಚಾರಣೆ

ಭೂಕಂಪನಗಳನ್ನು ತಡೆದುಕೊಳ್ಳಲು ವಿಫಲವಾದ ಕಟ್ಟಡಗಳ ನಿರ್ಮಾಣದ ಆರೋಪದಡಿ 131 ಮಂದಿ ಗುತ್ತಿಗೆದಾರರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಟರ್ಕಿಯ ಕಾನೂನು ಸಚಿವ ಬೆಕಿರ್ ಬೊಜ್ಡಾಗ್ ಹೇಳಿದ್ದಾರೆ.

Turkey Earthquake
ಟರ್ಕಿ
author img

By

Published : Feb 13, 2023, 10:40 AM IST

ಅಂಕಾರಾ/ಡಮಾಸ್ಕಸ್: ಭೀಕರ ಭೂಕಂಪನದಿಂದಾಗಿ ಸಿರಿಯಾ ಹಾಗೂ ಟರ್ಕಿ ದೇಶಗಳು ಅಕ್ಷರಶಹ ನಲುಗಿ ಹೋಗಿವೆ. ಟರ್ಕಿಯಲ್ಲಿ ಸೋಮವಾರ ಸಂಭವಿಸಿದ ಭಾರೀ ಪ್ರಮಾಣದ ಭೂಕಂಪದಿಂದ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಕಟ್ಟಡಗಳು ಧರೆಗುರುಳಿವೆ. ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಅನೇಕ ಜನರ ಉಸಿರು ನಿಂತುಹೋಗಿದ್ದು ಜೀವಂತ ಸಮಾಧಿಯಾಗಿದ್ದಾರೆ. ನಗರದ ತುಂಬೆಲ್ಲಾ ನೋವಿನ ಆಕ್ರಂದನ ಕೇಳಿಬರುತ್ತಿದೆ.

ಭಾನುವಾರದ(ಫೆ.12) ಸಂಜೆ ವೇಳೆಗೆ ಒಟ್ಟು 34 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಟರ್ಕಿ ದೇಶವೊಂದರಲ್ಲೇ 30 ಸಾವಿರದಷ್ಟು ಮಂದಿ ಅಸುನೀಗಿದ್ದಾರೆ. ಸಿರಿಯಾದಲ್ಲಿ ಸಾವಿನ ಸಂಖ್ಯೆ 4 ಸಾವಿರ ಸಮೀಪ ಇದೆ. ಭೂಕಂಪದಿಂದ ಕುಸಿದ ಹಲವು ಕಟ್ಟಡಗಳ ಅವಶೇಷಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲು ಸಾಧ್ಯವಾಗಿಲ್ಲ. ಹೀಗಾಗಿ, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.

ಗುತ್ತಿಗೆದಾರರ ವಿಚಾರಣೆ: ವರದಿಗಳ ಪ್ರಕಾರ, ಟರ್ಕಿ ಮತ್ತು ಸಿರಿಯಾದಲ್ಲಿ 10 ಸಾವಿರಕ್ಕೂ ಹೆಚ್ಚು ಕಟ್ಟಡಗಳು ನೆಲಸಮಗೊಂಡಿವೆ. ದುರ್ಬಲ ಕಟ್ಟಡಗಳ ನಿರ್ಮಾಣವೇ ಈ ಕುಸಿತಕ್ಕೆ ಕಾರಣ ಎಂದು ನಂಬಲಾಗಿದೆ. ಈ ವಿಚಾರವನ್ನು ಟರ್ಕಿ ಆಡಳಿತ ಗಂಭೀರವಾಗಿ ಪರಿಗಣಿಸಿದೆ. ಇಂಥ ಕಟ್ಟಡಗಳನ್ನು ನಿರ್ಮಿಸಿದ ಗುತ್ತಿಗೆದಾರರ ವಿಚಾರಣೆಗೆ ಮುಂದಾಗಿದೆ. ಸರ್ಕಾರದ ಈ ನಡೆಯನ್ನು ಕೆಲವರು ಟೀಕಿಸಿದ್ದಾರೆ. ಸರ್ಕಾರ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಇಂಥ ನೆಪ ಹೇಳುತ್ತಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಟರ್ಕಿ ಬೆನ್ನಲ್ಲೇ ಸಿಕ್ಕೀಂನಲ್ಲೂ ಕಂಪಿಸಿದ ಭೂಮಿ: ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲು

131 ಮಂದಿ ಗುತ್ತಿಗೆದಾರರ ವಿಚಾರಣೆ: ಕಟ್ಟಡಗಳನ್ನು ನಿರ್ಮಿಸಿದ 3 ಮಂದಿ ಗುತ್ತಿಗೆದಾರರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಏಳು ಮಂದಿಗೆ ಟರ್ಕಿಯನ್ನು ತೊರೆಯದಂತೆ ನಿರ್ಬಂಧಿಸಲಾಗಿದೆ. ಭೂಕಂಪಗಳನ್ನು ತಡೆದುಕೊಳ್ಳಲು ವಿಫಲವಾದ ಕಟ್ಟಡಗಳ ನಿರ್ಮಾಣ ಆರೋಪದಡಿ 131 ಜನರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಟರ್ಕಿಯ ನ್ಯಾಯ ಸಚಿವ ಬೆಕಿರ್ ಬೊಜ್ಡಾಗ್ ಹೇಳಿದ್ದಾರೆ. ಆಗ್ನೇಯ ಟರ್ಕಿ ಮತ್ತು ಉತ್ತರ ಸಿರಿಯಾದಲ್ಲಿ ಒಂಬತ್ತು ಗಂಟೆಗಳ ಅಂತರದಲ್ಲಿ ಸಂಭವಿಸಿದ 7.8 ಮತ್ತು 7.5 ತೀವ್ರತೆಯ ಭೂಕಂಪಗಳಿಂದ ಸಾವಿನ ಸಂಖ್ಯೆ 34,179ಕ್ಕೆ ಏರಿದೆ.

ಕಟ್ಟಡ ಕಾಮಗಾರಿಗಳಿಗೆ ಜವಾಬ್ದಾರರಾಗಿರುವ ಗುತ್ತಿಗೆದಾರರು ಮತ್ತು ಇತರರನ್ನು ಭೂಕಂಪದ ಅಪರಾಧಗಳ ವಿಚಾರಣೆಗಾಗಿ ತನಿಖಾ ಬ್ಯೂರೋಗಳನ್ನು ಸ್ಥಾಪಿಸುವುದಾಗಿ ಟರ್ಕಿಯ ಕಾನೂನು ಸಚಿವಾಲಯ ಘೋಷಿಸಿದೆ. ಇದು ಪುರಾವೆಗಳನ್ನು ಸಂಗ್ರಹಿಸುತ್ತದೆ. ವಾಸ್ತುಶಿಲ್ಪಿಗಳು, ಭೂವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಸೇರಿದಂತೆ ತಜ್ಞರಿಗೆ ಸೂಚನೆ ನೀಡಲಾಗಿದೆ. ಜತೆಗೆ ಕಟ್ಟಡ ಪರವಾನಗಿಗೆಗಳು ಮತ್ತು ಉದ್ಯೋಗ ಪರವಾನಗಿಗೆಗಳನ್ನು ಪರಿಶೀಲಿಸಲಾಗುತ್ತಿದೆ.

ಟರ್ಕಿ ಮತ್ತು ಸಿರಿಯಾ ಗಡಿ ಸಮೀಪದ ಪ್ರದೇಶಗಳಲ್ಲಿ ಕಳೆದ ವಾರ (ಫೆ. 6) ನಾಲ್ಕು ಭೂಕಂಪನಗಳು ಸಾಲು ಸಾಲಾಗಿ ಸಂಭವಿಸಿದವು. ಇದರ ಜೊತೆಗೆ ಮಧ್ಯಮ ತೀವ್ರತೆಯ ಒಂದು ಲಘು ಭೂಕಂಪವೂ ಸಂಭವಿಸಿತು. ಮೊದಲೆರಡು ಭೂಕಂಪಗಳು ರಿಕ್ಟರ್ ಮಾಪಕದಲ್ಲಿ 7.5ಕ್ಕಿಂತ ಹೆಚ್ಚು ತೀವ್ರತೆ ಹೊಂದಿದ್ದವು. ಬಹುತೇಕ ಹಾನಿಗಳಿಗೆ ಈ ಎರಡು ಭೂಕಂಪಗಳೇ ಕಾರಣವಾಗಿವೆ.

ಇದನ್ನೂ ಓದಿ: ಆಪರೇಷನ್ ದೋಸ್ತ್: ಭಾರತದಿಂದ ಪರಿಹಾರ ಸಾಮಗ್ರಿ ಹೊತ್ತ 7ನೇ ವಿಮಾನ ಟರ್ಕಿಗೆ ರವಾನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.