ETV Bharat / international

ಆಫ್ರಿಕಾದ ಕಾಯಿಲೆಗಳನ್ನು ತಗ್ಗಿಸಲು ಸಾಂಪ್ರದಾಯಿಕ ಔಷಧಿಗಳೇ ಮಾರ್ಗ: ಡಬ್ಲುಎಚ್​ಒ

ಹೆಚ್ಚು ಪರಿಣಾಮಕಾರಿ ಎಂದು ಸಾಬೀತಾಗಿರುವ ಸಾಂಪ್ರದಾಯಿಕ ಔಷಧವನ್ನು ಆಫ್ರಿಕನ್ ದೇಶಗಳು ಬಳಸಿಕೊಳ್ಳಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಫ್ರಿಕಾದ  ಸಾಂಪ್ರದಾಯಿಕ ಔಷಧಿ
ಆಫ್ರಿಕಾದ ಸಾಂಪ್ರದಾಯಿಕ ಔಷಧಿ
author img

By

Published : Sep 1, 2022, 4:35 PM IST

ನೈರೋಬಿ (ಕೀನ್ಯಾ) : ಜನಸಂಖ್ಯೆಯನ್ನು ಬಾಧಿಸುವ ಕಾಯಿಲೆಗಳ ನಿರ್ವಹಣೆ ಮತ್ತು ಚಿಕಿತ್ಸೆಯಲ್ಲಿ ಹೆಚ್ಚು ಪರಿಣಾಮಕಾರಿ ಎಂದು ಸಾಬೀತಾಗಿರುವ ಸಾಂಪ್ರದಾಯಿಕ ಔಷಧವನ್ನು ಆಫ್ರಿಕನ್ ದೇಶಗಳು ಬಳಸಿಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಅಧಿಕಾರಿಯೊಬ್ಬರು ಸೂಚಿಸಿದ್ದಾರೆ.

ಆಫ್ರಿಕಾದ ಡಬ್ಲುಎಚ್ ಒ ಪ್ರಾದೇಶಿಕ ನಿರ್ದೇಶಕ ಮತ್ಶಿಡಿಸೋ ಮೋತಿ ಅವರು ಈ ಹೇಳಿಕೆ ನೀಡಿದ್ದಾರೆ. ಈ ಭಾಗದಲ್ಲಿ ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ರೋಗಗಳ ಹೊರೆಯನ್ನು ಕಡಿಮೆ ಮಾಡುವಲ್ಲಿ ಗಿಡಮೂಲಿಕೆ ಔಷಧಿಯ ನಿರ್ಣಾಯಕ ಪಾತ್ರವನ್ನು ಒತ್ತಿಹೇಳಿದ್ದಾರೆ.

ಆಫ್ರಿಕಾದ  ಸಾಂಪ್ರದಾಯಿಕ ಔಷಧಿ
ಆಫ್ರಿಕಾದ ಸಾಂಪ್ರದಾಯಿಕ ಔಷಧಿ

ಸಾಂಪ್ರದಾಯಿಕ ಔಷಧವು ಶತಮಾನಗಳಿಂದ ಆಫ್ರಿಕನ್ ಜನಸಂಖ್ಯೆಗೆ ವಿಶ್ವಾಸಾರ್ಹವಾಗಿದೆ. ಹಾಗೆ ಸ್ವೀಕಾರಾರ್ಹ, ಕೈಗೆಟುಕುವ ಮತ್ತು ಬಳಕೆಗೆ ಸುಲಭವಾದ ಆರೋಗ್ಯ ರಕ್ಷಣೆಯ ಮೂಲವಾಗಿದೆ ಎಂದು 2022 ರ ಆಫ್ರಿಕನ್ ಸಾಂಪ್ರದಾಯಿಕ ಔಷಧ ದಿನವನ್ನು ಗುರುತಿಸಿ ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ಮೊಯೆತಿ ಮಾತನಾಡಿದರು.

2022 ಆಫ್ರಿಕನ್ ಸಾಂಪ್ರದಾಯಿಕ ಔಷಧ ದಿನವನ್ನು 'ಎರಡು ದಶಕಗಳ ಆಫ್ರಿಕನ್ ಸಾಂಪ್ರದಾಯಿಕ ಔಷಧ ದಿನ: ಆಫ್ರಿಕಾದಲ್ಲಿ ಜಾಗತಿಕ ಆರೋಗ್ಯ ರಕ್ಷಣೆ ಸಾಧಿಸುವತ್ತ ಪ್ರಗತಿ' ಎಂಬ ವಿಷಯದ ಅಡಿಯಲ್ಲಿ ಆಚರಿಸಲಾಗಿದೆ. ಕಳೆದ ಎರಡು ದಶಕಗಳಲ್ಲಿ, ಆಫ್ರಿಕಾ ಖಂಡವು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಲ್ಲಿ ಮುಖ್ಯವಾಹಿನಿಗೆ ಬಂದಿದೆ. ಸಾಂಪ್ರದಾಯಿಕ ಔಷಧದ ಮೂಲಕ ಮಹತ್ವಾಕಾಂಕ್ಷೆಯ ಕಾರ್ಯತಂತ್ರಗಳೊಂದಿಗೆ ಮುನ್ನಲೆಗೆ ಬಂದಿದೆ ಎಂದು ಈ ಸಂಧರ್ಭದಲ್ಲಿ ಮೊಯೆತಿ ಗಮನಿಸಿದರು.

40 ಕ್ಕೂ ಹೆಚ್ಚು ಆಫ್ರಿಕನ್ ದೇಶಗಳು 2022 ರ ಹೊತ್ತಿಗೆ ರಾಷ್ಟ್ರೀಯ ಸಾಂಪ್ರದಾಯಿಕ ಔಷಧ ನೀತಿಗಳನ್ನು ಅಭಿವೃದ್ಧಿಪಡಿಸಿವೆ. 2000 ರಲ್ಲಿ 8 ರಾಷ್ಟ್ರಗಳು ಇದ್ದವು ಈಗ 20ರಿಂದ 30 ದೇಶಗಳು ಸಾಂಪ್ರದಾಯಿಕ ಔಷಧವನ್ನು ತಮ್ಮ ರಾಷ್ಟ್ರೀಯ ಆರೋಗ್ಯ ನೀತಿಗಳಲ್ಲಿ ಸಂಯೋಜಿಸಿವೆ. ಹೆಚ್ಚುವರಿಯಾಗಿ, 39 ದೇಶಗಳು ಸಾಂಪ್ರದಾಯಿಕ ವೈದ್ಯ ವೃತ್ತಿಪರರಿಗೆ ನಿಯಂತ್ರಕ ಚೌಕಟ್ಟುಗಳನ್ನು ಸ್ಥಾಪಿಸಿವೆ. 2000ನೇ ಇಸವಿಗೆ ಹೋಲಿಕೆ ಮಾಡಿದರೆ ಉತ್ತಮ ಆಡಳಿತ ಮತ್ತು ನಾಯಕತ್ವವನ್ನು ಕಾಣನಹುದು ಎಂದವರು ಹೇಳಿದರು.

ಪ್ರಸ್ತುತ, ಸಾಂಪ್ರದಾಯಿಕ ಔಷಧದ ಸಂಶೋಧನೆ, ಅಭಿವೃದ್ಧಿ ಮತ್ತು ವಾಣಿಜ್ಯೀಕರಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ 34 ಸಂಶೋಧನಾ ಸಂಸ್ಥೆಗಳನ್ನು 26 ದೇಶಗಳಲ್ಲಿ ಸ್ಥಾಪಿಸಲಾಗಿದೆ. ಸಾಂಪ್ರದಾಯಿಕ ಔಷಧದ ಸಂಶೋಧನೆ ಮತ್ತು ಅಭಿವೃದ್ಧಿಗೆ 12 ಮೀಸಲಾದ ಆಫ್ರಿಕನ್ ದೇಶಗಳು ನಿಧಿಯನ್ನು ಹೊಂದಿವೆ. ಅದರಲ್ಲೂ ಈ ಸಾಂಪ್ರದಾಯಿಕ ಔಷಧ ಡಬ್ಲುಎಚ್ ಒ ಪ್ರೋಟೋಕಾಲ್‌ಗ ಅನ್ವಯ HIV/AIDS, ಮಲೇರಿಯಾ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಆದ್ಯತೆಯ ಕಾಯಿಲೆಗಳ ಚಿಕಿತ್ಸೆಯಲ್ಲಿನ ಬಳಕೆ ಹೆಚ್ಚಿದೆ ಎಂದು ವಿವರಿಸಿದರು.

ಇದನ್ನೂ ಓದಿ: ಆಹಾರ ಭದ್ರತೆ ಸಮಸ್ಯೆಗೆ ತಂತ್ರಜ್ಞಾನವೇ ಪರಿಹಾರ: ಮೈಕ್ರೊಸಾಫ್ಟ್​ ಅಧ್ಯಕ್ಷ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.