ETV Bharat / international

ಹತ್ಯಾ ಯತ್ನಗಳಿಗೆ ಉನ್ನತ ಗುಪ್ತಚರ ಅಧಿಕಾರಿಯೇ ಕಾರಣ: ಪಾಕ್ ಮಾಜಿ ಪ್ರಧಾನಿ ಆರೋಪ

ಪಾಕಿಸ್ತಾನದ ಗುಪ್ತಚರ ಇಲಾಖೆಯಲ್ಲಿನ ಅಧಿಕಾರಿಯೊಬ್ಬರು ತಮ್ಮನ್ನು ಹತ್ಯೆಗೈಯಲು ಸಂಚು ರೂಪಿಸಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಆರೋಪಿಸಿದ್ದಾರೆ.

Top intelligence official responsible for assassination attempts, says Imran Khan
ಹತ್ಯಾ ಯತ್ನಗಳಿಗೆ ಉನ್ನತ ಗುಪ್ತಚರ ಅಧಿಕಾರಿಯೇ ಕಾರಣ: ಪಾಕ್ ಮಾಜಿ ಪ್ರಧಾನಿ ಆರೋಪ
author img

By

Published : May 4, 2023, 7:01 PM IST

ಲಾಹೋರ್ (ಪಾಕಿಸ್ತಾನ) : ತಮ್ಮನ್ನು ಹತ್ಯೆ ಮಾಡುವ ಯತ್ನಗಳ ಹಿಂದೆ ಉನ್ನತ ಗುಪ್ತಚರ ಅಧಿಕಾರಿಯೊಬ್ಬರು ಪ್ರಮುಖ ಪಾತ್ರ ವಹಿಸಿದ್ದಾರೆ ಮತ್ತು ಭವಿಷ್ಯದಲ್ಲಿ ನನಗೆ ಏನೇ ಅಪಾಯವಾದರೂ ಅದಕ್ಕೆ ಅವರೇ ಹೊಣೆಗಾರರಾಗಿರುತ್ತಾರೆ ಎಂದು ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ಗುರುವಾರ ಆರೋಪಿಸಿದ್ದಾರೆ. ತಮ್ಮನ್ನು ಕೊಲೆ ಮಾಡಲು ಯತ್ನಿಸುತ್ತಿರುವ ದುಷ್ಟ ವ್ಯಕ್ತಿಯಾಗಿರುವ ಉನ್ನತ ಅಧಿಕಾರಿಯ ಬಗ್ಗೆ ತಾವು ಈಗಾಗಲೇ ಲಾಹೋರ್ ಹೈಕೋರ್ಟ್​ಗೆ ಮಾಹಿತಿ ನೀಡಿರುವುದಾಗಿ ಇಮ್ರಾನ್ ಖಾನ್ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ. ವಜೀರಾಬಾದ್ ಪ್ರಕರಣದ ತನಿಖೆ ನಡೆಸುತ್ತಿರುವ ಜಂಟಿ ತನಿಖಾ ತಂಡದ (ಜೆಐಟಿ) ವರದಿಗಳನ್ನು ಅಧಿಕಾರಿಗಳು ಹಾಳು ಮಾಡಿದ್ದಾರೆ ಎಂದು ಅವರು ಹೇಳಿದರು.

ಭಯೋತ್ಪಾದಕರು ನನ್ನನ್ನು ಕೊಲ್ಲಲು ಯತ್ನಿಸುತ್ತಿದ್ದಾರೆ ಎಂದು ಅವರು ಹೇಳುತ್ತಿದ್ದಾರೆ. ಆದರೆ ನನಗೆ ಏನೇ ಆದರೂ ಅದಕ್ಕೆ ಆ ದುಷ್ಟ ಅಧಿಕಾರಿಯೇ ಕಾರಣವಾಗಲಿದ್ದಾರೆ. ಆ ನಿರ್ದಿಷ್ಟ ಅಧಿಕಾರಿ ಹಾಗೂ ಆತನ ಸಹವರ್ತಿಗಳನ್ನು ಹೊರತುಪಡಿಸಿ ಬೇರೆ ಯಾರಿಂದಲೂ ನನಗೆ ಬೆದರಿಕೆಗಳು ಬಂದಿಲ್ಲ ಎಂದು ಇಮ್ರಾನ್ ಹೇಳಿದ್ದಾರೆ. ವೀಲ್​ಚೇರ್​ನಲ್ಲಿ ಕುಳಿತು ಇಮ್ರಾನ್ ಖಾನ್ ಕೋರ್ಟ್​ಗೆ ಹಾಜರಾಗಿದ್ದರು. ಕೋರ್ಟ್​ಗೆ ಹೋಗುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಕಾಲು ನೋವಿನಿಂದ ಊದಿಕೊಂಡಿದ್ದರೂ ಕೋರ್ಟ್​ ಆದೇಶ ಪಾಲನೆ ಮಾಡಲು ನಾನು ಹೋಗುತ್ತಿರುವೆ. ತಮ್ಮ ಪರವಾಗಿ ತೀರ್ಪು ಬರದೆ ಇದ್ದಾಗ ನ್ಯಾಯಾಲಯಗಳನ್ನು ಟೀಕಿಸುವವರ ರೀತಿ ನಾನಲ್ಲ. ನಾನು ಯಾವಾಗಲೂ ನ್ಯಾಯಾಲಯವನ್ನು ಗೌರವಿಸಿದ್ದೇನೆ ಎಂದರು.

ಶಾಲೆಯಲ್ಲಿ ಗುಂಡಿನ ದಾಳಿ- ಏಳು ಶಿಕ್ಷಕರು ಸಾವು: ಗುರುವಾರ ಖೈಬರ್ ಪಖ್ತುಂಖ್ವಾದ ಅಪ್ಪರ್ ಕುರ್ರಂ ತೆಹಸಿಲ್‌ನಲ್ಲಿರುವ ಶಾಲೆಯೊಂದರಲ್ಲಿ ಅಪರಿಚಿತ ಶಸ್ತ್ರಸಜ್ಜಿತ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದರಿಂದ ಕನಿಷ್ಠ ಏಳು ಶಿಕ್ಷಕರು ಸಾವನ್ನಪ್ಪಿದ್ದಾರೆ. ಬಂದೂಕುಧಾರಿಯು ಶಾಲೆಗೆ ನುಗ್ಗಿ ನೇರವಾಗಿ ತಹಸಿಲ್ ಶಾಲೆಯ ಸಿಬ್ಬಂದಿ ಕೊಠಡಿಗೆ ತೆರಳಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ. ಶಿಕ್ಷಕರು ಪರೀಕ್ಷೆಗೆ ಸಂಬಂಧಿಸಿದ ಕೆಲಸ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಗಳು ತಿಳಿಸಿವೆ.

ಪಾಕಿಸ್ತಾನವು ಇತ್ತೀಚಿನ ದಿನಗಳಲ್ಲಿ ಪದೇ ಪದೆ ನಡೆಯುತ್ತಿರುವ ಭಯೋತ್ಪಾದಕ ದಾಳಿಗಳಿಂದ ತತ್ತರಿಸಿದೆ ಮತ್ತು ರಾಜಕೀಯ ಅನಿಶ್ಚಿತತೆಯು ದೇಶದಲ್ಲಿ ವಿಷಯವನ್ನು ಇನ್ನಷ್ಟು ಹದಗೆಡಿಸಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಸರ್ಕಾರದೊಂದಿಗೆ ಕದನ ವಿರಾಮವನ್ನು ನಿಲ್ಲಿಸಿದಾಗಿನಿಂದ ಖೈಬರ್ ಪಖ್ತುಂಖ್ವಾ ಮತ್ತು ಬಲೂಚಿಸ್ತಾನ್‌ನಂತಹ ಪ್ರದೇಶಗಳಲ್ಲಿ ಹಲವಾರು ಭಯೋತ್ಪಾದಕ ದಾಳಿಗಳು ನಡೆದಿವೆ.

ವರದಿಯ ಪ್ರಕಾರ, 2023ರ ಜನವರಿ ತಿಂಗಳು 2018 ರಿಂದ ಅತ್ಯಂತ ಮಾರಣಾಂತಿಕ ತಿಂಗಳಾಗಿದೆ. ದೇಶಾದ್ಯಂತ ಕನಿಷ್ಠ 44 ಭಯೋತ್ಪಾದಕ ದಾಳಿಗಳಲ್ಲಿ 134 ಜನರು ಸಾವನ್ನಪ್ಪಿದ್ದಾರೆ. ದೇಶದ ಮಿಲಿಟರಿಯು ನಿಷೇಧಿತ ಉಗ್ರಗಾಮಿ ಗುಂಪುಗಳ ವಿರುದ್ಧ ಹೊಸದಾಗಿ ಕ್ರಮ ಕೈಗೊಳ್ಳಲು ಮುಂದಾಗಿದೆ. ಆದಾಗ್ಯೂ ಭಯೋತ್ಪಾದಕರು ದೇಶಾದ್ಯಂತ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಇದನ್ನೂ ಓದಿ : 5ಜಿ ಸ್ಮಾರ್ಟ್​ಫೋನ್ ಮಾರಾಟ ಶೇ 50ರಷ್ಟು ಏರಿಕೆ: ಮುಂಚೂಣಿಯಲ್ಲಿ ಸ್ಯಾಮ್​ಸಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.