ಪೋರ್ಟ್‌ಲ್ಯಾಂಡ್, ಅಮೆರಿಕ: ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಅಟ್ಲಾಂಟಿಕ್ ಸಾಗರಕ್ಕೆ ತೆರಳಿದ್ದ ಟೈಟಾನ್ ಜಲಾಂತರ್ಗಾಮಿ ನೌಕೆಯ ಅವಶೇಷಗಳನ್ನು ಬುಧವಾರ ಹೊರ ತೆಗೆಯಲಾಗಿದೆ. US ಕೋಸ್ಟ್ ಗಾರ್ಡ್ ಅಧಿಕಾರಿಗಳು ಅದನ್ನು ಕೆನಡಾದ ಸೇಂಟ್ ಜಾನ್ಸ್ ಬಂದರಿಗೆ ತರಲಾಗಿದೆ.
ಜೂನ್ 18ರ ಸಂಜೆ ಪೈಲಟ್ ಸೇರಿದಂತೆ ನಾಲ್ವರು ಪ್ರವಾಸಿಗರೊಂದಿಗೆ ಜಲಾಂತರ್ಗಾಮಿ ಸಮುದ್ರಕ್ಕೆ ತೆರಳಿತ್ತು. ನಂತರ ಟೈಟಾನ್ ಸ್ಫೋಟಗೊಂಡಿತು (Titan blast case) ಮತ್ತು ಜಲಾಂತರ್ಗಾಮಿ ನೌಕೆಯಲ್ಲಿದ್ದ ಎಲ್ಲ ಐದು ಜನರು ಸಾವನ್ನಪ್ಪಿದರು. ನಾಲ್ಕು ದಿನಗಳ ಕಾಲ ಜಲಾಂತರ್ಗಾಮಿ ಪತ್ತೆಗೆ ಪ್ರಯತ್ನ ನಡೆಸಲಾಗಿತ್ತು. ನಂತರ ಜೂನ್ 23 ರಂದು ಟೈಟಾನಿಕ್ ಅವಶೇಷಗಳಿಂದ 1600 ಅಡಿ ದೂರದಲ್ಲಿ ಜಲಾಂತರ್ಗಾಮಿ ಅವಶೇಷಗಳು ಪತ್ತೆಯಾಗಿದ್ದವು.
ದಡಕ್ಕೆ ಬಂದು ಸೇರಿದ ಟೈಟಾನ್ ಅವಶೇಷಗಳು: ಜಲಾಂತರ್ಗಾಮಿ ಅವಶೇಷಗಳಲ್ಲಿ ಮಾನವ ಅವಶೇಷಗಳು ಕಂಡುಬಂದಿವೆ ಎಂದು ಅಮೆರಿಕ ಕೋಸ್ಟ್ ಗಾರ್ಡ್ ಅಧಿಕಾರಿಗಳು ಹೇಳಿದ್ದಾರೆ. ಈ ಅವಶೇಷಗಳನ್ನು ವೈದ್ಯಕೀಯ ತಂಡಕ್ಕೆ ಪರೀಕ್ಷೆಗೆ ಕಳುಹಿಸಲಾಗುವುದು. ಟೈಟಾನ್ ಜಲಾಂತರ್ಗಾಮಿ ನೌಕೆಯ ಅವಶೇಷಗಳನ್ನು ಬುಧವಾರ ಕೆನಡಾದ ಸೇಂಟ್ ಜಾನ್ಸ್ ಬಂದರಿಗೆ ತರಲಾಯಿತು.
ಟೈಟಾನ್ ಜಲಾಂತರ್ಗಾಮಿ ನೌಕೆಯಲ್ಲಿದ್ದ ಐವರು ಸಾವು: ಟೈಟಾನ್ ಜಲಾಂತರ್ಗಾಮಿ ನೌಕೆಯಲ್ಲಿ ಬ್ರಿಟಿಷ್ ಉದ್ಯಮಿ ಹಮಿಶ್ ಹಾರ್ಡಿಂಗ್, ಫ್ರೆಂಚ್ ಮುಳುಗುಗಾರ ಪಾಲ್ - ಹೆನ್ರಿ, ಪಾಕಿಸ್ತಾನಿ - ಬ್ರಿಟಿಷ್ ಉದ್ಯಮಿ ಶಹಜಾದಾ ದಾವೂದ್, ಅವರ ಮಗ ಸುಲೈಮಾನ್ ಮತ್ತು ಓಸಿಂಗೇಟ್ ಕಂಪನಿ ಸಿಇಒ ಸ್ಟಾಕ್‌ಟನ್ ರಶ್ ಸೇರಿದ್ದಾರೆ. ಜಲಾಂತರ್ಗಾಮಿ ನೌಕೆಯನ್ನು ಜೂನ್ 18 ರಂದು ಭಾರತೀಯ ಕಾಲಮಾನ ಸಂಜೆ 5:30 ಕ್ಕೆ ಅಟ್ಲಾಂಟಿಕ್ ಸಾಗರಕ್ಕೆ ತೆರಳಿತ್ತು. ಸುಮಾರು ಎರಡು ಗಂಟೆಗಳ ನಂತರ ಕಿರು ಜಲಾಂತಗಾರ್ಮಿ ಸಂಪರ್ಕ ಕಡಿತಗೊಂಡಿತು.
ಚುರುಕುಗೊಂಡ ಟೈಟಾನ್ ಸ್ಫೋಟದ ತನಿಖೆ: ಟೈಟಾನ್‌ನ ಅವಶೇಷಗಳು ಸಮುದ್ರದ ಆಳದಲ್ಲಿ ಸುಮಾರು 3,810 ಮೀಟರ್‌ಗಳು ಮತ್ತು ಟೈಟಾನಿಕ್‌ನಿಂದ ಸರಿಸುಮಾರು 488 ಮೀಟರ್‌ಗಳಷ್ಟು ದೂರದಲ್ಲಿ ಪತ್ತೆಯಾಗಿವೆ. ಸಮುದ್ರದ ತಳದಿಂದ ಟೈಟಾನ್ ಮತ್ತು ಮಾನವನ ಅವಶೇಷಗಳು ಹಾಗೂ ಪುರಾವೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ಫೋಟದ ಬಗ್ಗೆ ಕೋಸ್ಟ್ ಗಾರ್ಡ್ ಮೆರೈನ್ ಬೋರ್ಡ್ ಆಫ್ ಇನ್ವೆಸ್ಟಿಗೇಶನ್ ಅನ್ನು ಕರೆಯಲಾಗಿದೆ. ಅದು ಈ ಟೈಟಾನ್ ಸ್ಫೋಟಗೊಂಡಿರುವುದರ ಬಗ್ಗೆ ಉನ್ನತಮಟ್ಟದ ತನಿಖೆ ಆರಂಭಿಸುತ್ತದೆ ಎಂದು ಅಧಿಕಾರಿ ಹೇಳಿದರು.
ಇನ್ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ: ಸಾಕ್ಷ್ಯಾಧಾರಗಳು ಈ ದುರಂತದ ಕಾರಣದ ಬಗ್ಗೆ ವಿಮರ್ಶಾತ್ಮಕ ಒಳನೋಟಗಳೊಂದಿಗೆ ಹಲವಾರು ಅಂತಾರಾಷ್ಟ್ರೀಯ ನ್ಯಾಯವ್ಯಾಪ್ತಿಗಳಿಂದ ತನಿಖಾಧಿಕಾರಿಗಳನ್ನು ಒದಗಿಸುತ್ತದೆ. ಟೈಟಾನ್‌ನ ದುರಂತಕ್ಕೆ ಕಾರಣವಾದ ಅಂಶಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅಂತಹ ದುರಂತ ಮತ್ತೆ ಸಂಭವಿಸದಂತೆ ನೋಡಿಕೊಳ್ಳಲು ಇನ್ನೂ ಗಣನೀಯ ಪ್ರಮಾಣದ ಕೆಲಸವನ್ನು ಮಾಡಬೇಕಾಗಿದೆ ಎಂದರು.
ರಾಡಾರ್‌ನಲ್ಲಿ ಸ್ಫೋಟದ ಸಂಕೇತ: US ನೌಕಾಪಡೆಯ ಅಧಿಕಾರಿಯ ಪ್ರಕಾರ, ಟೈಟಾನ್ ಜಲಾಂತರ್ಗಾಮಿ ನೌಕೆಯ ಕೊನೆಯ ಸ್ಥಳವನ್ನು ಟೈಟಾನಿಕ್ ಹಡಗಿನ ಬಳಿಯೇ ಇತ್ತು. ಕಣ್ಮರೆಯಾದ ಸ್ವಲ್ಪ ಸಮಯದ ನಂತರ, ರಾಡಾರ್‌ನಲ್ಲಿ ಸ್ಫೋಟಕ್ಕೆ ಸಂಬಂಧಿಸಿದ ಕೆಲವು ಸಂಕೇತಗಳು ಸಹ ಕಂಡುಬಂದಿವೆ. ಈ ಮಾಹಿತಿಯನ್ನು ತಕ್ಷಣವೇ ಕಮಾಂಡರ್‌ಗೆ ರವಾನಿಸಲಾಯಿತು. ಇದು ಶೋಧ ಕಾರ್ಯಾಚರಣೆಗೆ ಸಹಾಯ ಮಾಡಿತು ಎಂದರು.
ಜೂನ್ 21 ರಂದು ಸಮುದ್ರದಲ್ಲಿ ಕೇಳಿಬಂದ ಸದ್ದು: ಜೂನ್ 21ರ ಬುಧವಾರದಂದು ಕೆನಡಾದ ಕಡೆಯಿಂದ ಶೋಧ ಕಾರ್ಯಾಚರಣೆಯಲ್ಲಿ ತೊಡಗಿರುವ ವಿಮಾನವು ಸೋನಾರ್-ಬೋಯ್ ಸಹಾಯದಿಂದ ಕೆಲವು ಶಬ್ದಗಳನ್ನು ಕೇಳಿದೆ. ಟೈಟಾನಿಕ್ ಅವಶೇಷಗಳು ಇರುವ ಸ್ಥಳದಲ್ಲಿ ಶಬ್ದ ಕೇಳಿ ಬಂದಿತ್ತು.
ಟೈಟಾನಿಕ್ ಹಡಗಿನ ಅವಶೇಷಗಳು: ಟೈಟಾನಿಕ್ ಹಡಗಿನ ಅವಶೇಷಗಳು ಅಟ್ಲಾಂಟಿಕ್ ಸಾಗರದಲ್ಲಿ ಪತ್ತೆಯಾಗಿವೆ. ಕೆನಡಾದ ನ್ಯೂಫೌಂಡ್‌ಲ್ಯಾಂಡ್‌ನಲ್ಲಿರುವ ಸೇಂಟ್ ಜಾನ್ಸ್‌ನಿಂದ ಸುಮಾರು 700 ಕಿಮೀ ದೂರದಲ್ಲಿ ಟೈಟಾನಿಕ್ ಅವಶೇಷಗಳು ಸಮುದ್ರದ 3800 ಮೀಟರ್ ಆಳದಲ್ಲಿದೆ. ಈ ಜಲಾಂತರ್ಗಾಮಿ ಪ್ರಯಾಣವು ಕೆನಡಾದ ನ್ಯೂಫೌಂಡ್‌ಲ್ಯಾಂಡ್‌ನಿಂದ ಪ್ರಾರಂಭವಾಗುತ್ತದೆ. ಈ ಟೈಟಾನಿಕ್ ಅವಶೇಷಗಳ ಬಳಿ ತಲಪಲು ಸುಮಾರು 2 ಗಂಟೆಗಳ ಕಾಲ ಬೇಕಾಗುತ್ತದೆ.
ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ: ಯುಎಸ್ - ಕೆನಡಾ ರಕ್ಷಣಾ ತಂಡವು ಸಮುದ್ರದಲ್ಲಿ 7,600 ಚದರ ಮೈಲಿ ಪ್ರದೇಶದಲ್ಲಿ ಹುಡುಕಾಟ ನಡೆಸಿತ್ತು. 13,000 ಅಡಿ ಆಳದವರೆಗೆ ಮೇಲ್ವಿಚಾರಣೆ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಸೋನಾರ್-ಬೋಯ್‌ಗಳನ್ನು ಸಹ ನೀರಿನಲ್ಲಿ ಬಿಡಲಾಯಿತು. ಇದಲ್ಲದೇ ವಾಣಿಜ್ಯ ಹಡಗುಗಳ ಸಹಾಯವನ್ನೂ ಪಡೆಯಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಕಳೆದ ಹತ್ತು ದಿನಗಳಿಂದ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಕಾರ್ಯಾಚರಣೆಯನ್ನು ಮುಗಿಸಿ ತಮ್ಮ ಪ್ರೀತಿಪಾತ್ರರ ಬಳಿಗೆ ಮರಳಲು ಅವರೆಲ್ಲರೂ ಉತ್ಸುಕರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಟೈಟಾನ್‌ನ ವಿಶೇಷತೆಗಳು: ಕಿರು ಜಲಾಂತರ್ಗಾಮಿ ಓಷನ್ ಗೇಟ್ ಕಂಪನಿಯ ಟೈಟಾನ್ ಸಬ್‌ಮರ್ಸಿಬಲ್ ಆಗಿದೆ. ಇದರ ಗಾತ್ರವು ಟ್ರಕ್‌ಗೆ ಸಮನಾಗಿರುತ್ತದೆ. ಇದು 22 ಅಡಿ ಉದ್ದ ಮತ್ತು 9.2 ಅಡಿ ಅಗಲವಿದೆ. ಜಲಾಂತರ್ಗಾಮಿ ಕಾರ್ಬನ್ ಫೈಬರ್‌ನಿಂದ ಮಾಡಲ್ಪಟ್ಟಿದೆ. ಟೈಟಾನಿಕ್ ಅವಶೇಷಗಳನ್ನು ನೋಡಲು ಒಬ್ಬ ವ್ಯಕ್ತಿಗೆ 2 ಕೋಟಿ ರೂಪಾಯಿ ಜಾರ್ಜ್ ಮಾಡಲಾಗುತ್ತದೆ. ಈ ಜಲಾಂತರ್ಗಾಮಿ ಸಮುದ್ರದಲ್ಲಿ ಸಂಶೋಧನೆ ಮತ್ತು ಸಮೀಕ್ಷೆಗೂ ಉಪಯುಕ್ತವಾಗಿದೆ. ಈ ಜಲಾಂತರ್ಗಾಮಿ ನೌಕೆಯನ್ನು ಪ್ರಾರಂಭಿಸಲು ಮತ್ತು ನಿರ್ವಹಿಸಲು ಪೋಲಾರ್ ಪ್ರಿನ್ಸ್ ವೆಸೆಲ್ ಅನ್ನು ಬಳಸಲಾಗುತ್ತದೆ.
ಓದಿ: ಟೈಟಾನಿಕ್ ಅವಶೇಷ ನೋಡಲು ತೆರಳಿದ ಬಿಲಿಯನೇರ್ ಸೇರಿ ಐವರು ಸಾವು: ಸಬ್‌ಮರ್ಸಿಬಲ್ ಸ್ಫೋಟಿಸಿ ದುರಂತ!!