ETV Bharat / international

ಟಿಬೆಟ್​ನ ಎರಡನೇ ಬುದ್ಧ ಪದ್ಮ ಸಂಭವ; ಈತನ ಬಗ್ಗೆ ಇದೆ ಕುತೂಹಲದ ಮಾಹಿತಿ!

author img

By

Published : Apr 6, 2023, 11:24 AM IST

ಟಿಬೆಟ್​ ಮಾತ್ರವಲ್ಲದೇ, ಭಾರತದ ಸಿಕ್ಕೀಂನಲ್ಲಿ ಕೂಡ ಈತ ಬೌದ್ಧ ಧರ್ಮವನ್ನು ಪಸರಿಸಿದ್ದಾನೆ.

Tibets Second Buddha Padma Sambhava
Tibets Second Buddha Padma Sambhava

ಜಗತ್ತಿಗೆ ಜ್ಞಾನದ ಬೆಳಕನ್ನು ಹಂಚಿದವನು ಬುದ್ಧ. ಬುದ್ಧನ ಜೀವನ ಬೋಧನೆಯನ್ನು ಇಂದಿಗೂ ಏಷ್ಯಾದದಲ್ಲಿ ಅನೇಕ ರಾಷ್ಟ್ರಗಳಲ್ಲಿ ಪಾಲನೆ ಮಾಡಲಾಗುತ್ತಿದೆ. ಅದರಲ್ಲಿ ಒಂದು ಟಿಬೆಟ್​. ಬೌದ್ಧ ಧರ್ಮದ ತಳಹದಿ ಮೇಲೆ ರೂಪುಗೊಂಡಿರುವ ರಾಷ್ಟ್ರದಲ್ಲಿ ಬುದ್ಧನ ಬಳಿಕ ಮತ್ತೊಬ್ಬ ವ್ಯಕ್ತಿ ಅಷ್ಟೇ ಪರಿಣಾಮ ಬೀರಿದ್ದಾನೆ. ಆತನೆ ಪದ್ಮ ಸಂಭವ​. ಭೂತನ್​ ಲೈವ್​ ಪ್ರಕಾರ, ಈತ ಟಿಬೆಟಿಯನ್​ ಬುದ್ದಿಸಂನ ಎರಡನೇ ಬುದ್ಧ.

ಪದ್ಮ ಸಂಭವ ಕೂಡ ಬುದ್ಧನಂತೆಯೇ ಜೀವನದ ಸಹಾನುಭೂತಿ, ಬುದ್ಧಿವಂತಿಕೆ ಮತ್ತು ಜ್ಞಾನೋದಯದ ಬಗ್ಗೆ ಅಮೂಲ್ಯವಾದ ಪಾಠಗಳನ್ನು ನೀಡಿದ್ದಾನೆ ಎಂದು ಭೂತನ್​ ಲೈವ್​ ವರದಿ ಮಾಡಿದೆ. ಈತನನ್ನು ಗುರು ರಿಂಪೋಚೆ ಎಂದು ಕರೆಯಲಾಗುತ್ತದೆ. ಈತನ ಜೀವನ ಕಥೆಗಳನ್ನು ಟರ್ಮಾ ಎಂದು ಹೆಸರಿಸಲಾಗಿದೆ. ಈ ಕಥೆಗಳಲ್ಲಿ ಜ್ಞಾನದ ಗುಪ್ತ ನಿಧಿಗಳಾಗಿದ್ದು, ಬುದ್ಧಿವಂತಿಕೆಯಿಂದ ಕೂಡಿದೆ. ಇವುಗಳನ್ನು ಉದ್ದೇಶಪೂರ್ವಕವಾಗಿ ಮರೆ ಮಾಚಲಾಗಿದೆ. ಸರಿಯಾದ ಕರ್ಮ ಸಂಪರ್ಕ ಹೊಂದಿರುವವರು ಇದನ್ನು ಕಂಡು ಹಿಡಿಯಬಹುದು ಎನ್ನಲಾಗಿದೆ.

ಪದ್ಮ ಸಂಭವ ಜೀವನ ಕುರಿತು ಅನೇಕ ಪುರಾಣ ಕತೆಗಳಿಗೆ. ಮಹಾ ಪರಿನಿರ್ವಾಣವಾದ ಏಂಟು ವರ್ಷಗಳ ಬಳಿಕ ಈತ ಕಮಲದ ಹೂವಿನಿಂದ ಜನಿಸಿದ ಮತ್ತು ಚಿಕ್ಕಂದಿನಲ್ಲೇ ಅಸಾಧಾರಣ ಆಧ್ಯಾತ್ಮಿಕತೆ ಹೊಂದಿದ್ದ. ಯುವಕನಾದಾಗ ಬೌದ್ಧ ಸನ್ಯಾಸಿ ದೀಕ್ಷೆ ಪಡೆದ. ಬಲು ಬೇಗ ಈತ ಆಧ್ಯಾತ್ಮಿಕ ಸಾಧನೆಗಳನ್ನು ಪಡೆದು, ಖ್ಯಾತಿ ಪಡೆದರು ಎಂದು ವರದಿ ಮಾಡಲಾಗಿದೆ.

ಟಿಬೆಟಿಯನ್​ ರಾಜ ಟ್ರಿಸಾಂಗ್​​ ಡೆಟ್ಸೆನ್​ ಬೌದ್ಧಧರ್ಮ ಸ್ಥಾಪಿಸಲು ಈತನನ್ನು ಟಿಬೆಟಿಗೆ ಆಹ್ವಾನಿಸಿದಾಗ ಈತನ ಜೀವನ ಮಹತ್ವದ ತಿರುವು ಪಡೆಯಿತು. ಈತ ಟಿಬಿಟಿಯನ್​ಬೌದ್ಧ ಧರ್ಮದ ಮೇಲೆ ಆಳವಾದ ಪ್ರಭಾವ ಬೀರಿದ. ಜೊತೆಗೆ ಆತನ ಜೀವನ ಕಥೆಗಳು, ಬೋಧನೆಗಳು, ಆಧ್ಯಾತ್ಮಿಕತೆ ಅನುಸರಿಸುವವರಿಗೆ ಸ್ಫೂರ್ತಿ ಜೊತೆಗೆ ಮಾರ್ಗದರ್ಶನ ನೀಡಿದವು.

ಈತನ ಜೀವನ ಪ್ರಸಿದ್ಧ ಕಥೆ ಎಂದರೆ ಟಿಬೆಟ್​ನಲ್ಲಿನ ಸ್ಥಳೀಯ ದೇವತೆಗಳು ಮತ್ತು ಆತ್ಮಗಳನ್ನು ಅಧೀನಗೊಳಿಸಿದ್ದು. ತನ್ನ ಆಧ್ಯಾತ್ಮದ ಶಕ್ತಿಯಿಂದ ಅವುಗಳನ್ನು ಈತ ಸಮಾಧಾನ ಪಡಿಸಿದನು. ಅದನ್ನು ಬುದ್ಧ ಧರ್ಮದ ರಕ್ಷಕರನ್ನಾಗಿ ಪರಿವರ್ತಿಸಿದನು. ಆತನ ಬುದ್ಧಿವಂತಿಕೆ ಸಹಾನುಭೂತಿ ಮತ್ತು ಆಧ್ಯಾತ್ಮಿಕ ನಿರ್ಣಯದ ಮೂಲಕ ಎಂತಹ ಅಡೆತಡೆಗಳನ್ನು ಜಯಿಸಬಹುದು ಎಂಬ ಕಥೆಯನ್ನು ತಿಳಿಸಲಾಗಿದೆ.

ಟಿಬೆಟಿಯನ್​ ಸಂಪ್ರದಾಯದ ಬುದ್ಧಿಸಂ ಅನುಯಾಯಿಗಳನ್ನು ಈತನ ಜೀವನವೂ ಹೆಚ್ಚಿನ ಮಹತ್ವ ಹೊಂದಿದೆ. ಈತನ ಕಥೆಗಳು ಬೆಳಕು ಮತ್ತು ಜ್ಞಾನದ ಹಾದಿಯನ್ನು ತೋರುತ್ತದೆ. ಆಧ್ಯಾತ್ಮಿಕ ಬೆಳವಣಿಗೆಯನ್ನು ಪ್ರತಿಧ್ವನಿಸಿ, ಪ್ರೇರೇಪಿಸುವುದನ್ನು ಮುಂದುವರಿಸುವ ಈತನ ಬೋಧನೆಗಳ ಬೌದ್ಧ ಧರ್ಮಕ್ಕೆ ಸಾಕಷ್ಟು ಕೊಡುಗೆ ನೀಡಿದೆ.

ಸಿಕ್ಕೀಂ ಪ್ರದೇಶದಲ್ಲೂ ಈತನ ಆರಾಧನೆ: ಭಾರತದ ಈಶಾನ್ಯ ಭಾಗದಲ್ಲಿ ಬೌದ್ಧ ಅನುಯಾಯಿಗಳು ಕೂಡ ಈತನ ಪ್ರಭಾವಕ್ಕೆ ಒಳಗಾಗಿದ್ದಾರೆ. ಟಿಬೆಟ್‌ನಲ್ಲಿ ಆಧ್ಯಾತ್ಮಿಕ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ ನಂತರ ಟಿಬೆಟ್‌ನ ಸುತ್ತ ನಾಲ್ಕು ಪ್ರಮುಖ ಗುಪ್ತ ಭೂಮಿ ಮತ್ತು ನಾಲ್ಕು ಸಣ್ಣ ಗುಪ್ತ ಭೂಮಿಯನ್ನು ಆಯ್ಕೆ ಮಾಡಿದರು. ಟಿಬೆಟ್ ಸುತ್ತಲಿನ ಗುಪ್ತ ಭೂಮಿಗಾಗಿ ಅವರ ಅನ್ವೇಷಣೆಯ ಸಮಯದಲ್ಲಿ, ಅವರ 25 ಶಿಷ್ಯರೊಂದಿಗೆ ಈತ ಸಿಕ್ಕಿಂಗೆ ಭೇಟಿ ನೀಡಿ, ಬೋಧಿಸಿದನು. ಇಲ್ಲಿ ಗೌಪ್ಯ ಭೂಮಿಯನ್ನು ಪಡೆದು ಧರ್ಮವನ್ನು ಅಭ್ಯಾಸ ಮಾಡಿ ಪಸರಿಸಿದನು.

ಇದನ್ನೂ ಓದಿ: ತ್ಯಾಜ್ಯದಿಂದ ಗಾರ್ಡನ್​ನಲ್ಲಿ ತಲೆ ಎತ್ತಿದ ವಿವಿಧ ಕಲಾಕೃತಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.