ETV Bharat / international

'ಹಮೇ ಸಿರ್ಫ್‌ ಮೋದಿ ಚಾಯಿಯೇ..': ಪಾಕಿಸ್ತಾನಿ ಪ್ರಜೆಯ ಹತಾಶ ನುಡಿ- ವಿಡಿಯೋ

ಪಾಕಿಸ್ತಾನಿ ಪ್ರಜೆಯೊಬ್ಬ ಪ್ರಧಾನಿ ನರೇಂದ್ರ ಮೋದಿಯವರನ್ನು ಮುಕ್ತಕಂಠದಿಂದ ಹೊಗಳಿದ್ದಾನೆ.

this Pakistanis desperate plea goes viral
ನಮಗೆ ಯಾರೂ ಬೇಡ..ಪ್ರಧಾನಿ ಮೋದಿ ಬೇಕು : ಪಾಕಿಸ್ತಾನಿ ಪ್ರಜೆಯ ಹತಾಶೆ ಮನವಿ
author img

By

Published : Feb 23, 2023, 4:37 PM IST

ಇಸ್ಲಾಮಾಬಾದ್ (ಪಾಕಿಸ್ತಾನ) : ಪಾಕಿಸ್ತಾನಿ ಯುವಕನೋರ್ವ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಮೆಚ್ಚಿ ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿದೆ. ಈ ಯುವಕ ತನ್ನ ದೇಶದ ನಾಯಕರ ವಿರುದ್ಧ ಕಿಡಿ ಕಾರಿದ್ದಾನೆ. ಪಾಕಿಸ್ತಾನಿ ಯುಟ್ಯೂಬರ್ ಸನಾ ಅಮ್ಜದ್ ಎಂಬವರು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಯುವಕ, ಶೆಹಬಾಜ್​ ಶರೀಫ್​​ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಾ, ದೇಶದ ದುಸ್ಥಿತಿಯ ವಿರುದ್ಧ ಹತಾಶೆ ವ್ಯಕ್ತಪಡಿಸಿದ್ದಾನೆ.

"ಒಂದು ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನವನ್ನು ಆಳುತ್ತಿದ್ದರೆ ಕಡಿಮೆ ಬೆಲೆಯಲ್ಲಿ ನಮಗೆ ಸರಕುಗಳು ದೊರೆಯುತ್ತಿದ್ದವು" ಎಂದು ಆತ ಹೇಳಿದ್ದಾನೆ. ಈ ಯುವಕನಲ್ಲಿ ಮಾಜಿ ಪತ್ರಕರ್ತೆ ಸನಾ ಅಮ್ಜದ್ ಅವರು, "ಯಾಕೆ ಇಲ್ಲಿನ ಸ್ಥಳೀಯರು ಪಾಕಿಸ್ತಾನ್ ಸೆ ಜಿಂದಾ ಭಾಗೋ ಚಾಹೆ ಇಂಡಿಯಾ ಚಲೇ ಜಾವೋ (ಪಾಕಿಸ್ತಾನದಿಂದ ಓಡಿ ಹೋಗಿ, ಭಾರತದಲ್ಲಿ ಜೀವಿಸಿ) ಎಂಬ ಘೋಷಣೆ ಕೂಗುತ್ತಿದ್ದಾರೆ" ಎಂದು ಪ್ರಶ್ನಿಸಿದ್ದು, ಅದಕ್ಕೆ ಆತ, "ನಾನು ಪಾಕಿಸ್ತಾನದಲ್ಲೇ ಹುಟ್ಟಬಾರದಿತ್ತು" ಎಂದು ಪ್ರತಿಕ್ರಿಯಿಸಿದ್ದಾನೆ.

  • "Hamen Modi Mil Jaye bus, Na hamen Nawaz Sharif Chahiye, Na Imran, Na Benazir chahiye, General Musharraf bhi nahi chahiye"

    Ek Pakistani ki Khwahish 😉 pic.twitter.com/Wbogbet2KF

    — Meenakshi Joshi ( मीनाक्षी जोशी ) (@IMinakshiJoshi) February 23, 2023 " class="align-text-top noRightClick twitterSection" data=" ">

"ಒಂದು ವೇಳೆ ಭಾರತ ವಿಭಜನೆ ಆಗದೇ ಇರುತ್ತಿದ್ದರೆ ನಮಗೆ ಅಗತ್ಯ ವಸ್ತುಗಳು ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿದ್ದವು. ಈ ಮೂಲಕ ನಮ್ಮ ಮಕ್ಕಳಿಗೆ ನಾವು ಸರಿಯಾಗಿ ಆಹಾರ ನೀಡಬಹುದಿತ್ತು. ನಾವು 20 ರೂಪಾಯಿಗೆ 1 ಕೆಜಿ ಟೊಮೆಟೊ, 150 ರೂಗೆ ಒಂದು ಕೆಜಿ ಕೋಳಿ ಮಾಂಸ ಮತ್ತು 50 ರೂಪಾಯಿಗೆ 1 ಲೀಟರ್​​ ಪೆಟ್ರೋಲ್ ಖರೀದಿಸುತ್ತಿದ್ದೆವು" ಎಂದು ಹೇಳಿದ್ದಾನೆ. "ನಾವು ದುರದೃಷ್ಟಕರದಿಂದ ಇಸ್ಲಾಮಿಕ್​ ರಾಷ್ಟ್ರವನ್ನು ಪಡೆದಿದ್ದೇವೆ. ಆದರೆ ನಮಗೆ ಇಲ್ಲಿ ಇಸ್ಲಾಂ ಅನ್ನು ಸ್ಥಾಪಿಸಲೂ ಸಾಧ್ಯವಾಗಲಿಲ್ಲ" ಎಂದು ಅಳಲು ತೋಡಿಕೊಂಡಿದ್ದಾನೆ.

ನಮಗೆ ಮೋದಿ ಇದ್ದರೆ ಸಾಕು: "ಮೋದಿ ನಮಗಿಂತ ಉತ್ತಮರು, ಭಾರತೀಯರು ಅವರನ್ನು ತುಂಬಾ ಗೌರವಿಸುತ್ತಾರೆ ಮತ್ತು ಅನುಸರಿಸುತ್ತಾರೆ. ನಮಗೆ ನರೇಂದ್ರ ಮೋದಿ ಇದ್ದರೆ, ನವಾಜ್ ಷರೀಫ್, ಬೆನಜೀರ್ ಅಥವಾ ಇಮ್ರಾನ್ ಅವರ ಅಗತ್ಯವಿಲ್ಲ. ಅಷ್ಟೇ ಅಲ್ಲದೇ, ದಿವಂಗತ ಜನರಲ್ ಮುಷರಫ್ ಅವರ ಅಗತ್ಯವೂ ಇರಲಿಲ್ಲ. ನಮಗೆ ಬೇಕಾಗಿರುವುದು ಪ್ರಧಾನಿ ಮೋದಿ. ಏಕೆಂದರೆ ಅವರು ಮಾತ್ರ ದೇಶವನ್ನು ಸಮರ್ಥವಾಗಿ ನಿಭಾಯಿಸಬಲ್ಲರು. ಭಾರತವು ಪ್ರಸ್ತುತ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಆದರೆ ನಾವು ಎಲ್ಲಿಯೂ ಇಲ್ಲ" ಎಂದು ಯುವಕ ಹೇಳಿದ್ದಾನೆ.

"ನಾನು ಮೋದಿಯವರ ಆಳ್ವಿಕೆಯಲ್ಲಿ ಬದುಕಲು ಸಿದ್ಧ. ಮೋದಿ ಮಹಾನ್ ವ್ಯಕ್ತಿ. ಅವರು ಕೆಟ್ಟ ಮನುಷ್ಯ ಅಲ್ಲ. ಅವರಿಂದಾಗಿ ಭಾರತೀಯರಿಗೆ ಟೊಮೆಟೊ ಮತ್ತು ಚಿಕನ್ ಕೈಗೆಟುಕುವ ದರದಲ್ಲಿ ಸಿಗುತ್ತಿದೆ. ಮೋದಿಯನ್ನು ನಮಗೆ ನೀಡಿ ಮತ್ತು ಅವರು ನಮ್ಮ ದೇಶವನ್ನು ಆಳಲಿ ಎಂದು ನಾನು ಸರ್ವಶಕ್ತನಾದ ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದು ಯುವಕ ತಿಳಿಸಿದ್ದಾನೆ.

ಇದನ್ನೂ ಓದಿ: ಜಿ20 ಶೃಂಗಸಭೆ: ಅಮೆರಿಕ​ ಹಣಕಾಸು ಸಚಿವರ ಜೊತೆ ನಿರ್ಮಲಾ ಸೀತಾರಾಮನ್ ಸಭೆ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.